ಮನೆ ಸೈಟ್ ಮಾರಾಟಕ್ಕಿದೆ

ಸಾಲ್ಮರ ಉಪ್ಪೂರಿನಲ್ಲಿ ಗ್ರಾಮ ಪಂಚಾಯ್ತಿ ಮಾರುಕಟ್ಟೆ ಬಸ್ ಮಾರ್ಗಕ್ಕೆ ಹತ್ತಿರವಾದ ಸೈಟ್ ಮನೆ ಕಟ್ಟಲು ಯೋಗ್ಯವಾದ 16 ಸೆಂಟ್ಸ್ ಜಾಗ ಮಾರಾಟಕ್ಕಿದೆ.3ಲಕ್ಷ ಸೆಂಟ್ಸ್ ಗೆ….. ಕೂಡಲೇ ಸಂಪರ್ಕಿಸಿ: 81970 35017

ಕರಾವಳಿಗರೇ ಗಮನಿಸಿ! 128 ದಿನ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ಬದಲಾವಣೆ

ಕರಾವಳಿ ಹಾಗೂ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ (SWR) ಮಹತ್ವದ ಮಾಹಿತಿ ನೀಡಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಜೂನ್ 15, 2026ರಿಂದ ಅಕ್ಟೋಬರ್ 20, 2026ರವರೆಗೆ ವಿಶೇಷ ಮುಂಗಾರು ವೇಳಾಪಟ್ಟಿಯನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ 30 ನಿಮಿಷದಿಂದ 2 ಗಂಟೆಗಳವರೆಗೆ ವಿಳಂಬ ಉಂಟಾಗಲಿದೆ. ಬದಲಾವಣೆಗೆ ಕಾರಣ ಇಲ್ಲಿದೆಮಳೆಗಾಲದಲ್ಲಿ ಹಳಿಗಳ ಮೇಲೆ ನೀರು ನಿಲ್ಲುವುದು, ಗುಡ್ಡ ಕುಸಿತದ ಭೀತಿ ಹಾಗೂ ಸುರಕ್ಷತಾ ಕಾರಣಗಳಿಂದ ಕೊಂಕಣ ಮಾರ್ಗದಲ್ಲಿ ರೈಲುಗಳ ವೇಗವನ್ನು […]

“ಕ್ಷಮಿಸಿ ಅಪ್ಪಾ… ನನಗೆ ನೀಟ್ ಮರುಪರೀಕ್ಷೆ ಬರೆಯಲಾಗುವುದಿಲ್ಲ” ಡೆತ್ ನೋಟ್ ನೊಂದಿಗೆ ವಿದ್ಯಾರ್ಥಿನಿ ಆತ್ಮಹತ್ಯೆ

ಮಧ್ಯಪ್ರದೇಶ: ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆಯೇ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಮಗನಿಯಾ ಗ್ರಾಮದ ವಿದ್ಯಾರ್ಥಿನಿ ಆಕಾಂಕ್ಷಾ ಚತುರ್ವೇದಿ ದುರಂತವಾಗಿ ಮೃತಪಟ್ಟ ಘಟನೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ವೈದ್ಯೆಯಾಗುವ ಕನಸು ಹೊತ್ತಿದ್ದ ವಿದ್ಯಾರ್ಥಿನಿ, ಮರುಪರೀಕ್ಷೆ ಬರೆಯಬೇಕಾದ ಒತ್ತಡ ಮತ್ತು ಭವಿಷ್ಯದ ಅನಿಶ್ಚಿತತೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳೆಂದು ಕುಟುಂಬದವರು ತಿಳಿಸಿದ್ದಾರೆ. ಆಕಾಂಕ್ಷಾ ಇತ್ತೀಚಿನ ನೀಟ್ ಪರೀಕ್ಷೆಯಲ್ಲಿ ಸುಮಾರು 650 ಅಂಕಗಳನ್ನು ಪಡೆಯುವ ವಿಶ್ವಾಸ ಹೊಂದಿದ್ದಳು. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, ಪರೀಕ್ಷೆ ರದ್ದತಿ ಹಾಗೂ ಮರುಪರೀಕ್ಷೆಯ […]

ವೈರಲ್ ಆಯ್ತು ದರ್ಶನ್ ಲೈವ್ ವಿಡಿಯೋ: ಅಭಿಮಾನಿಗಳ ಬಗ್ಗೆ ನಟನ ಭಾವನಾತ್ಮಕ ಮಾತುಗಳು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿರುವ ನಟ ದರ್ಶನ್ Darshan ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿದೆ. ಜೈಲು ಸೇರಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲೂ ದರ್ಶನ್ ಅವರ ಅಭಿಮಾನಿಗಳ ಬೆಂಬಲ ಕಡಿಮೆಯಾಗದಿರುವುದು ವಿಶೇಷವಾಗಿದೆ. ಮತ್ತೆ ವೈರಲ್ ಆಗಿರುವ ಹಳೆಯ ವಿಡಿಯೋದಲ್ಲಿ ದರ್ಶನ್ ತಮ್ಮ ಅಭಿಮಾನಿಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದು, ತಮ್ಮ ಮೇಲೆ ಪ್ರೀತಿ ಮತ್ತು ಬೆಂಬಲ ತೋರಿದ ಪ್ರತಿಯೊಬ್ಬ ಅಭಿಮಾನಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಅಭಿಮಾನಿಗಳ ಪ್ರೀತಿಗೆ ತಾವು ಸದಾ ಋಣಿಯಾಗಿರುವುದಾಗಿ ಅವರು […]

ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯ ರಕ್ಷಣೆ

ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯನ್ನು ರಕ್ಷಿಸಿದ ಘಟನೆ ಬುಧವಾರ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪ ನಡೆದಿದೆ. ಕೆಮ್ಮಣ್ಣು ನಿವಾಸಿ ಗೋಪಾಲಕೃಷ್ಣ(65) ಹಾಗೂ ಶ್ಯಾಮಲಾ(60) ರಕ್ಷಿಸಲ್ಪಟ್ಟ ದಂಪತಿ. ಶ್ಯಾಮಲಾ ಮನೆ ಸಮೀಪದ ಬಾವಿಯ ಬಳಿ ಹೋದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಅವರ ಪತಿ ಗೋಪಾಲಕೃಷ್ಣ ಪತ್ನಿಯನ್ನು ರಕ್ಷಿಸಲು ಬಾವಿಗೆ ಹಾರಿದರೆಂದು ತಿಳಿದುಬಂದಿದೆ. ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಬಾವಿಗೆ ಬಿದ್ದ ದಂಪತಿಯನ್ನು […]