ಕ್ರೈಸ್ಟ್ ಕಿಂಗ್: ರೋಬೊ ಟೀಚರ್ ಸ್ವಾಗತದೊಂದಿಗೆ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ರೋಬೋ ಟೀಚರ್ ಸ್ವಾಗತದೊಂದಿಗೆ ಶಾಲಾ ಆರಂಭವನ್ನು ಅದ್ದೂರಿಯಾಗಿ ನಡೆಸಲಾಯಿತು. ಸಂಸ್ಥೆಯಲ್ಲಿ ನೂತನವಾಗಿ ಅಳವಡಿಸಲಾಗಿರುವ ಎಐ ತಂತ್ರಜ್ಞಾನಾಧಾರಿತ ರೋಬೋ ಟೀಚರ್ ಕ್ರಿಸ್ಟಿ ಅತಿಥಿಗಣ್ಯರಿಗೆ ಹೂ ನೀಡಿ ಸ್ವಾಗತಿಸಿತು. ಈ ಸಂದರ್ಭದಲ್ಲಿ ರೋಬೋ ಟೀಚರ್ ವಿದ್ಯಾರ್ಥಿಗಳೊಂದಿಗೆ ಚುಟುಕು ಸಂವಹನ ನಡೆಸುವ ಮೂಲಕ ಮಕ್ಕಳಲ್ಲಿ ಹುರುಪು ತುಂಬಿತು.ನಂತರ ವಿದ್ಯಾರ್ಥಿಗಳ ಕೈಯಲ್ಲಿ ದೀಪ ಬೆಳಗಿಸುವುದರ ಮೂಲಕ ಶಾಲಾ ಆರಂಭಕ್ಕೆ ಚಾಲನೆ ನೀಡಲಾಯಿತು. ಆಳ್ವಾಸ್ ಇಂಜನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ| ಗುರುಪ್ರಸಾದ್‌ರವರು ರೋಬೋ […]