NEET ಪೇಪರ್ ಲೀಕ್ ಪ್ರಕರಣ: ತನಿಖೆಯಿಂದ ಹೊರಬಿತ್ತು ಇನ್ನಷ್ಟು ಆಘಾತಕಾರಿ ಅಂಶಗಳು, ಆರೋಪಿಗಳಿಂದ ಸಿಕ್ಕಿತು ಸಿಕ್ರೆಟ್ ಫೈಲ್ಸ್!

ನವದೆಹಲಿ: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ವೇಳೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಪ್ರಕರಣದ ಪ್ರಮುಖ ಆರೋಪಿ ಮನೀಷಾ ಹವಾಲ್ದಾರ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಒದಗಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಸಿಬಿಐ ಅಧಿಕಾರಿಗಳು ಮನೀಷಾ ಹವಾಲ್ದಾರ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅತ್ಯಂತ ಗೌಪ್ಯ ದಾಖಲೆಗಳು ಪತ್ತೆಯಾಗಿವೆ. […]

ಭಟ್ಕಳ ಭೀಕರ ದುರಂತ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಮೃತ್ಯು

ಉತ್ತರ ಕನ್ನಡ: ಭಟ್ಕಳದಲ್ಲಿ ಚಿಪ್ಪಿಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 12 ಜನರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ಎಂಟು ಜನರ ಮೃತದೇಹ ಸಿಕ್ಕಿದೆ. ಇಬ್ಬರು ನಾಪತ್ತೆಯಾಗಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಭಟ್ಕಳದ ತಟ್ಟೆ ಹಕ್ಕಲು ಬಳಿ ಘಟನೆ ನಡೆದಿದೆ. ಎಂದಿನಂತೆ ನದಿ ಸಮುದ್ರ ತೀರಕ್ಕೆ ಕಪ್ಪೆ ಚಿಪ್ಪು ತರಲು ಕುಟುಂಬ ಮಕ್ಕಳು ಸೇರಿದಂತೆ 12 ಮಂದಿ ತೆರಳಿದ್ದಾರೆ. ದೊಡ್ಡ ಅಲೆಗೆ ಸಿಲುಕಿ 12 ಮಂದಿ ಕೊಚ್ಚಿ ಹೋಗಿದ್ದಾರೆ. ಇಬ್ಬರು ಪಾರಾಗಿದ್ದು, 8 ಮಂದಿ […]

ಮಣಿಪಾಲ ಎಂ.ಎಸ್.ಡಿ.ಸಿ ಯಿಂದ “ಮೆಟಾ ಆಡ್ಸ್ ಮಾಸ್ಟರ್‌ಕ್ಲಾಸ್” ಆನ್‌ಲೈನ್ ಕೋರ್ಸ್‌,ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳಿಗೆ ಇದು ಬೆಸ್ಟ್ ತರಬೇತಿ

ಮಣಿಪಾಲ: ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ “ಮೆಟಾ ಆಡ್ಸ್ ಮಾಸ್ಟರ್‌ಕ್ಲಾಸ್” ಆನ್‌ಲೈನ್ ಕೋರ್ಸ್‌ನ್ನು ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಆಯೋಜಿಸಿದ್ದು,ಜೂನ್ 8, 10 ಮತ್ತು 12ರಂದು ಸಂಜೆ 7ರಿಂದ 9 ಗಂಟೆಯವರೆಗೆ ತರಗತಿಗಳು ನಡೆಯಲಿವೆ. Meta ಜಾಹೀರಾತು ವೇದಿಕೆಗಳಾದ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ವಾಟ್ಸ್ಆ್ಯಪ್ ಬಿಸಿನೆಸ್‌ನಲ್ಲಿ ಜಾಹೀರಾತು ಕ್ಯಾಂಪೇನ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು ಈ ತರಬೇತಿಯಲ್ಲಿ ತಿಳಿಸಿಕೊಡಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಒಟ್ಟು 6 […]

ವೃದ್ದೆಯೊಬ್ಬರಿಗೆ ಡಿಜಿಟೆಲ್ ಅರೆಸ್ಟ್ ಮಾಡಿ 4 ಕೋಟಿ ದೋಚಿದ ಸೈಬರ್ ಕಳ್ಳರು, ರಾಜ್ಯದಲ್ಲೇ ಇದು ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ

ಬೆಂಗಳೂರು: ಮನಿ ಲಾಂಡರಿಂಗ್ ಹೆಸರಿನಲ್ಲಿ “ಡಿಜಿಟಲ್ ಅರೆಸ್ಟ್” ಮಾಡಿ ಸೈಬರ್ ಖದೀಮರು ವೃದ್ಧೆಯೊಬ್ಬರಿಂದ ಬರೋಬ್ಬರಿ 4 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇದು ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳಲ್ಲಿ ಒಂದಾಗಿದೆ. ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ಎಂಬ ವೃದ್ಧೆಯೇ ವಂಚನೆಗೆ ಒಳಗಾದವರು. ಅವರು ಪ್ರಾಪರ್ಟಿ ಮಾರಾಟದಿಂದ ಪಡೆದಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿದ್ದರು. ಈ ಬ್ಯಾಂಕ್ ವ್ಯವಹಾರಗಳ ಮಾಹಿತಿ ತಿಳಿದುಕೊಂಡ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇ […]

ಎಬೋಲಾ ವೈರಸ್ ಅಲರ್ಟ್ : ಆಫ್ರಿಕಾ, ಉಗಾಂಡಾ, ಸುಡಾನ್ ದೇಶಗಳಿಗೆ ಸದ್ಯ ಪಯಣ ಬೆಳೆಸಬೇಡಿ ಎಂದ ಕೇಂದ್ರ ಸರ್ಕಾರ

ನವದೆಹಲಿ: ಆಫ್ರಿಕಾದ ಕೆಲವು ದೇಶಗಳಲ್ಲಿ ಮಾರಕ ಎಬೋಲಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆ, ಕೇಂದ್ರ ಆರೋಗ್ಯ ಸಚಿವಾಲಯ ಭಾರತೀಯ ನಾಗರಿಕರಿಗೆ ಕಟ್ಟುನಿಟ್ಟಿನ ಪ್ರಯಾಣ ಮಾರ್ಗಸೂಚಿ ಪ್ರಕಟಿಸಿದೆ. Democratic Republic of the Congo, ಉಗಾಂಡಾ ಹಾಗೂ ಸೌತ್ ಸುಡಾನ್ ದೇಶಗಳಿಗೆ ಅತ್ಯಗತ್ಯವಿಲ್ಲದಿದ್ದರೆ ಪ್ರಯಾಣ ಕೈಗೊಳ್ಳಬಾರದು ಎಂದು ಸೂಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ World Health Organization ಈ ಪ್ರದೇಶಗಳಲ್ಲಿನ ಎಬೋಲಾ ಪರಿಸ್ಥಿತಿಯನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ ಬೆನ್ನಲ್ಲೇ ಭಾರತ ಸರ್ಕಾರ […]