ಮಣಿಪಾಲ: ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ “ಮೆಟಾ ಆಡ್ಸ್ ಮಾಸ್ಟರ್ಕ್ಲಾಸ್” ಆನ್ಲೈನ್ ಕೋರ್ಸ್ನ್ನು ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಆಯೋಜಿಸಿದ್ದು,ಜೂನ್ 8, 10 ಮತ್ತು 12ರಂದು ಸಂಜೆ 7ರಿಂದ 9 ಗಂಟೆಯವರೆಗೆ ತರಗತಿಗಳು ನಡೆಯಲಿವೆ.
Meta ಜಾಹೀರಾತು ವೇದಿಕೆಗಳಾದ ಇನ್ಸ್ಟಾಗ್ರಾಂ, ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ ಬಿಸಿನೆಸ್ನಲ್ಲಿ ಜಾಹೀರಾತು ಕ್ಯಾಂಪೇನ್ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು ಈ ತರಬೇತಿಯಲ್ಲಿ ತಿಳಿಸಿಕೊಡಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಒಟ್ಟು 6 ಗಂಟೆಗಳ ಈ ಆನ್ಲೈನ್ ತರಬೇತಿ ಮೂರು ತರಗತಿಗಳ ಮೂಲಕ ನಡೆಯಲಿದ್ದು, ಕೋರ್ಸ್ ಶುಲ್ಕವನ್ನು 349 ರೂಪಾಯಿಗಳಾಗಿ ನಿಗದಿಪಡಿಸಲಾಗಿದೆ.
ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುತ್ತಿದ್ದು, ತೃಪ್ತಿ ಇಲ್ಲದಿದ್ದರೆ ಹಣ ಮರುಪಾವತಿ ಸೌಲಭ್ಯವೂ ಇರುವುದಾಗಿ ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ. ದೇಶದ ಯಾವುದೇ ಭಾಗದಿಂದ ಆನ್ಲೈನ್ ಮೂಲಕ ತರಗತಿಗಳಿಗೆ ಹಾಜರಾಗುವ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8296615560 ಹಾಗೂ 7975078498 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗೆ:
kaushalmanipal.com

















