ಮುಂದಿನ ತಿಂಗಳು ಮಂಗಳೂರು–ಬೆಂಗಳೂರು ವಂದೇ ಭಾರತ್ ಲಾಂಚ್, ಮಂಗಳೂರಿಗೆ ಸಿಗಲಿದೆ ಇನ್ನೊಂದಷ್ಟು ರೈಲ್ವೇ ಯೋಜನೆಗಳು

ಮಂಗಳೂರು–ಬೆಂಗಳೂರು ನಡುವೆ ಬಹುನಿರೀಕ್ಷಿತ ವಂದೇ ಭಾರತ್ ರೈಲು Vande Bharat Express ರೈಲು ಸೇವೆ ಮುಂದಿನ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಮಂಗಳೂರು–ಬೆಂಗಳೂರು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನಿ ಅವರು ದೇಶದ ವಿವಿಧ ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದು, ಆ ಪಟ್ಟಿಯಲ್ಲಿ ಮಂಗಳೂರು–ಬೆಂಗಳೂರು ಮಾರ್ಗವೂ ಸೇರಿದೆ. ಈ ರೈಲು ಸೇವೆಯಿಂದ ಕರಾವಳಿ ಭಾಗದ ಜನರು, ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳಿಗೆ ವೇಗವಾದ ಮತ್ತು […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಹಳ್ಳಿಗಳಲ್ಲಿ ಸೌರಶಕ್ತಿ ಚಾಲಿತ ನೀರು ಶುದ್ಧೀಕರಣ ವ್ಯವಸ್ಥೆಯ ಅಭಿವೃದ್ಧಿ

ಉಡುಪಿ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಸೌರಶಕ್ತಿ ಚಾಲಿತ ನೀರು ಶುದ್ಧೀಕರಣ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ವಿದ್ಯಾರ್ಥಿಗಳಾದ ಸೃಜನ್, ಶರಣ್ ಧೋಂಡ್ಯ, ಸುರೇಶ್ ನಾಯಕ್ ಮತ್ತು ಉಜ್ವಲ್ ಯು.ನಾಯಕ್ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಜಯಶ್ರೀ ಎಂ. ಮತ್ತು ಶಶಿಕಲಾ ಆರ್. ಮಾರ್ಗದರ್ಶನ ದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ವ್ಯವಸ್ಥೆಯು ಸೂರ್ಯನ ಬೆಳಕನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲು ದ್ಯುತಿವಿದ್ಯುಜ್ಜನಕ ಫಲಕವನ್ನು […]
ಉಡುಪಿ: ಕರಾವಳಿ ಬೈಪಾಸ್ ಬಳಿಯ ಪೂಜಾ ಬೇಕರಿ ಮಾಲೀಕರೊಬ್ಬರಿಗೆ ಚಾಕು ತೋರಿಸಿ ಬೆದರಿಕೆ, ಹಲ್ಲೆ.

ಆರೋಪಿಯ ಕೃತ್ಯ ಮೊಬೈಲ್’ನಲ್ಲಿ ಸೆರೆ.! ಉಡುಪಿ: ನಗರದ ಕರಾವಳಿ ಬೈಪಾಸ್ ನಲ್ಲಿ ಬೇಕರಿ ಮಾಲೀಕರೊಬ್ಬರಿಗೆ ಚಾಕು ತೋರಿಸಿ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.ಪೂಜಾ ಬೇಕರಿಯ ಮಾಲೀಕ ಮುರಳೀಧರ ಹಲ್ಲೆಗೆ ಒಳಗಾದವರಾಗಿದ್ದು, ಪಕ್ಕದಲ್ಲಿರುವ ಕೃಷ್ಣ ಬೇಕರಿಯ ಮಾಲೀಕ ಅಶೋಕ್ ವಿರುದ್ಧ ಆರೋಪ ಕೇಳಿಬಂದಿದೆ.ಮುರಳೀಧರ ಅವರು ಕಳೆದ ಸುಮಾರು 20 ವರ್ಷಗಳಿಂದ ಕರಾವಳಿ ಬೈಪಾಸ್ ಬಳಿ ಬೇಕರಿ ಉದ್ಯಮ ನಡೆಸುತ್ತಿದ್ದು, ಅಶೋಕ್ ಅವರು ಸುಮಾರು ಒಂದು ವರ್ಷದ ಹಿಂದೆ ಅಲ್ಲಿ ಹೊಸದಾಗಿ ಬೇಕರಿ ಆರಂಭಿಸಿದ್ದರೆಂದು ತಿಳಿದುಬಂದಿದೆ.ಶನಿವಾರ ಸಂಜೆ ಅಶೋಕ್ ಏಕಾಏಕಿ […]