“ಮಲಬಾರ್ ಗೋಲ್ದ್ ನಲ್ಲಿ ಬ್ರಾಂಡ್ ವಾಚ್‌ಗಳ ವಿಶೇಷ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ”

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಉಡುಪಿ ಶಾಖೆಯಲ್ಲಿ ಜೂ.1ರವರೆಗೆ ಹಮ್ಮಿಕೊಳ್ಳಲಾಗಿರುವ ಪ್ರಸಿದ್ಧ ವಾಚ್ ಬ್ರಾಂಡ್‌ಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮೇ 15ರಂದು ಚಾಲನೆ ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಉದ್ಯಮಿಗಳಾದ ಯಾಕೂಬ್, ಸತೀಶ್ ಹೆಗ್ಡೆ, ಅಶ್ರಫ್,ಶೇಖ್ ವಹೀದ್, ಕಿರಣ್ ಶೆಟ್ಟಿ, ಇರ್ಫಾನ್ ಮೇಳವನ್ನು ಉದ್ಘಾಟಿಸಿ ವಿವಿಧ ಬ್ರಾಂಡ್‌ಗಳ ವಾಚ್‌ಗಳನ್ನು ಅನಾವರಣಗೊಳಿಸಿದರು.ಬಳಿಕ ಮಾತನಾಡಿದ ಉದ್ಯಮಿ ಅಶ್ರಫ್, ಈ ರೀತಿಯ ಬ್ರಾಂಡ್‌ಗಳ ವಾಚ್‌ಗಳು ಒಂದೇ ಕಡೆ ಸಿಗಬೇಕಾದರೆ ದೂರದ ಬೆಂಗಳೂರಿಗೆ ಹೋಗ ಬೇಕಾಗಿತ್ತು. ಇದೀಗ […]

“ಸಾರಾ ಸೆಂಟ್ರಲ್ ಬಟ್ಟೆ ಮಳಿಗೆ ಉದ್ಘಾಟನೆ”

ಉಡುಪಿ:ಉದ್ಯಾವರ ಸಾರಾ ಸೆಂಟ್ರಲ್ ಬಟ್ಟೆ ಮಳಿಗೆ ಇಂದು ಉದ್ಘಾಟನೆಗೊಂಡಿತು ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಮಾಬಿನ್ ಹಾಗು ಸದಾಫ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.ಇಲ್ಲಿ ಎಲ್ಲಾ ರೀತಿಯ ಮಹಿಳೆಯರ ಹಾಗೂ ಮಕ್ಕಳ ವಸ್ತ್ರಗಳು ಲಭ್ಯವಿದೆ.ಉದ್ಘಾಟನೆ ಪ್ರಯುಕ್ತ ಪ್ರತಿ ಬಟ್ಟೆ ಖರೀದಿಯ ಮೇಲೆ ವಿಶೇಷ ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ.

ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಲೋ ಆಗಿದೆಯೇ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಂಟರ್ನೆಟ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಕೆಲವೊಮ್ಮೆ ವಿಡಿಯೋ ಬಫರಿಂಗ್, ವೆಬ್‌ಸೈಟ್ ತೆರೆಯದಿರುವುದು, ಸೋಶಿಯಲ್ ಮೀಡಿಯಾ ನಿಧಾನಗೊಳ್ಳುವುದು ಮುಂತಾದ ಸಮಸ್ಯೆಗಳು ಕಿರಿಕಿರಿ ಉಂಟುಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಮೊಬೈಲ್ ಡೇಟಾ ವೇಗವನ್ನು ಸುಧಾರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಮೊಬೈಲ್ ರೀಸ್ಟಾರ್ಟ್ ಮಾಡಿ ಮೊಬೈಲ್ ಅನ್ನು ಒಮ್ಮೆ ರೀಸ್ಟಾರ್ಟ್ ಮಾಡುವುದರಿಂದ ತಾತ್ಕಾಲಿಕ ನೆಟ್‌ವರ್ಕ್ ಸಮಸ್ಯೆಗಳು ಸರಿಯಾಗಬಹುದು. ಜೊತೆಗೆ ಏರ್‌ಪ್ಲೇನ್ ಮೋಡ್ ಅನ್ನು ಕೆಲ ಸೆಕೆಂಡ್‌ಗಳ ಕಾಲ ಆನ್ […]

ಮಣಿಪಾಲ ಜ್ಞಾನಸುಧಾ: ನೈಜ ಆರ್ ಹೆಗ್ಡೆ ಭಾರತೀಯ ವಾಲಿಬಾಲ್ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆ

ಉಡುಪಿ: ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿವಿದ್ಯಾರ್ಥಿನಿ ನೈಜ ಆರ್ ಹೆಗ್ಡೆ ಇವರು ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಷನ್ ನಡೆಸುವ 18ರ ವಯೋಮಿತಿಯ ಬಾಲಕಿಯರ ವಿಭಾಗದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಕ್ಕೆ ಭಾರತೀಯ ವಾಲಿಬಾಲ್ ತಂಡದ ಆಯ್ಕೆಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಜಾರ್ಖಂಡ್ ನ ರಾಂಚಿಯಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಒಟ್ಟು 24 ಕ್ರೀಡಾಪಟುಗಳು ಆಯ್ಕೆಯಾಗಿದ್ದು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಇಬ್ಬರಲ್ಲಿ ಮಣಿಪಾಲ ಜ್ಞಾನಸುಧಾದ ನೈಜ ಆರ್ ಹೆಗ್ಡೆ ಕೂಡಾ ಒಬ್ಬರಾಗಿದ್ದಾರೆ. ಮುಂದೆ ಚೀನಾದ ಶಾಂಗ್ಲೋದಲ್ಲಿ […]

ಕಾಪು: ಹೆಂಡತಿ ಮನೆಯ ಮುಂಭಾಗದ ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಉಡುಪಿ: ಮನನೊಂದ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಮನೆಯ ಮುಂಭಾಗ ಇರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪುವಿನ ಬೆಳಪುವಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ.ಮೃತರನ್ನು ಗೋವಾ ಮೂಲದ ಝಹೀರ್ ಎಂದು ಗುರುತಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಳೂರಿನ SDPI ಆ್ಯಂಬುಲೆನ್ಸ್ ಮೂಲಕ ಜಲಾಲುದ್ದೀನ್ ಜಲ್ಲು ಉಚ್ಚಿಲ ಹಾಗೂ ಹಮೀದ್ ಉಚ್ಚಿಲ ಸೇರಿ ಮೃತ ಶರೀರವನ್ನು ಅಜ್ಜರಕಾಡಿನ ಶವಾಗಾರಕ್ಕೆ ಸೇರಿಸಿದರು.ಈ ಸಂದರ್ಭದಲ್ಲಿ ನಿಹಾದ್ ಮಜೂರು,ನಿಷಾದ್ ಮಜೂರು,ಇರ್ಫಾನ್ ಬೆಳಪು,ಶಮೀಮ್ ಬೆಳಪು ಹಾಗೂ ಶುಹೈಬ್ ಮಜೂರು ಕೂಡಾ ಸಹಕರಿಸಿದರು.ಪೊಲೀಸರು ಸ್ಥಳಕ್ಕೆ […]