ಮುನಿಯಾಲ್ ಆಯುರ್ವೇದ ಆಸ್ಪತ್ರೆ: ಮೇ 18 ರಿಂದ 23 ರವರೆಗೆ ವಿಶ್ವ ಅಸ್ಥಿಸಂಧಿವಾತ ಜಾಗೃತಿ ಮಾಸ- ‘ಉಚಿತ ನೋವು ನಿವಾರಕ ಆರೋಗ್ಯ ತಪಾಸಣಾ ಶಿಬಿರ.

ಮಣಿಪಾಲ: ವಿಶ್ವ ಅಸ್ಥಿಸಂಧಿವಾತ ಜಾಗೃತಿ ಮಾಸದ ಅಂಗವಾಗಿ ಮುನಿಯಾಲ್ ಆಯುರ್ವೇದ ಆಸ್ಪತ್ರೆ ಮತ್ತು ಕುಟುಂಬ ಆರೋಗ್ಯ ಕೇಂದ್ರದ ಶಲ್ಯತಂತ್ರ ವಿಭಾಗ, ಕಾಯಚಿಕಿತ್ಸಾ ವಿಭಾಗ ಹಾಗೂ ಪಂಚಕರ್ಮ ವಿಭಾಗಗಳ ವತಿಯಿಂದ “ವೇದನಾಹರ ಕಲ್ಪ” ಉಚಿತ ನೋವು ನಿವಾರಕ ಆರೋಗ್ಯ ತಪಾಸಣಾ ಶಿಬಿರವನ್ನು ಮೇ 18 ರಿಂದ 23 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಅಪರಾಹ್ನ 4:30 ರವರೆಗೆ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಬೆನ್ನುನೋವು, ದೀರ್ಘಕಾಲದ ಬೆನ್ನುನೋವು, ಕುತ್ತಿಗೆ ನೋವು ಮತ್ತು ಬಿಗಿತ, ಮಾಂಸಖಂಡಗಳ ನೋವು ಮತ್ತು ಸೆಳೆತ, […]

ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಚೊಚ್ಚಲ ಹಿರಿಯ ವಿದ್ಯಾರ್ಥಿಗಳ ಸಮಾವೇಶ: ಆಳ್ವಾಸ್ ಸಂಸ್ಥೆ ಭಾರತೀಯ ಸಂವಿಧಾನದ ಮೌಲ್ಯಗಳ ಪ್ರತೀಕ – ಡಾ. ಪಿ. ಎಲ್. ಧರ್ಮ

ಮೂಡುಬಿದಿರೆ: ಆಳ್ವಾಸ್ ಭಾರತೀಯ ಸಂವಿಧಾನದ ಮೌಲ್ಯಗಳನ್ನು ಅನುಸರಿಸಿ ವಿದ್ಯಾರ್ಥಿಗಳಲ್ಲಿ ಉತ್ತಮ ನಾಗರಿಕತ್ವವನ್ನು ಬೆಳೆಸುವ ಆದರ್ಶ ಶಿಕ್ಷಣ ಸಂಸ್ಥೆ ಎಂದು ಮಂಗಳೂರು ವಿವಿಯ ಕುಲಪತಿ ಡಾ ಪಿ ಎಲ್ ಧರ್ಮ ನುಡಿದರು.ಅವರು ಶನಿವಾರ  ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಚೊಚ್ಚಲ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದರು.ಆಳ್ವಾಸ್ ಶಿಕ್ಷಣ ಸಂಸ್ಥೆಯು ಕೇವಲ ಶಿಕ್ಷಣ ನೀಡುವುದಲ್ಲ; ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ರಾಷ್ಟ್ರೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತಿದೆ. ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಒಂದೇ ಕುಟುಂಬದAತೆ ಬೆರೆತು ಬದುಕುವುದು ಭಾರತದ ಏಕತೆಯ ಸಂಕೇತವಾಗಿದೆ […]

ಉಡುಪಿ: ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ ,ಕ್ಷೇತ್ರದಲ್ಲಿ ಅಧಿಕಾರಿಗಳ ದರ್ಬಾರ್ – ಬಿಜೆಪಿ ಶಾಸಕರ ಆರೋಪ, ಬಿಸಿ ಬಿಸಿ ಚರ್ಚೆ

ಉಡುಪಿ : ಉಡುಪಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ ಎಂದು ಜಿಲ್ಲೆಯ ಬಿಜೆಪಿ ಶಾಸಕರುಗಳು ಆರೋಪಿಸಿದ್ದು ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬಿಜೆಪಿ ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಸಭೆಯಲ್ಲಿ ನಡೆಯಿತು.ಕಾರ್ಕಳ ಶಾಸಕಸುನಿಲ್ ಕುಮಾರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಅವರು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಹಕ್ಕು ಪತ್ರ ವಿತರಣೆಯಂತಹ […]

ಮಾಹೆ ಆನ್‌ಲೈನ್ ಶಿಕ್ಷಣದ 3ನೇ ಘಟಿಕೋತ್ಸವ: ಸೀಮಾತೀತ ಶಿಕ್ಷಣದ ಹೊಸ ಅಲೆ, ಭವಿಷ್ಯಕ್ಕೆ ಸಜ್ಜಾದ ವಿದ್ಯಾರ್ಥಿಗಳು

ಮಂಗಳೂರು, ಮೇ 16, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದುಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಆನ್‌ಲೈನ್ ಶಿಕ್ಷಣ ನಿರ್ದೇಶನಾಲಯದ 3ನೇ ಘಟಿಕೋತ್ಸವ ಯಶಸ್ವಿಯಾಗಿಜರುಗಿತು. ಮಾಹೆಯ ಡಿಜಿಟಲ್ ಶಿಕ್ಷಣದ ಬೆಳವಣಿಗೆಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದ್ದು, ಆನ್‌ಲೈನ್‌ ಮೂಲಕಶಿಕ್ಷಣ ಪಡೆದ ದೇಶ-ವಿದೇಶದ ವಿದ್ಯಾರ್ಥಿಗಳ ಸಾಧನೆಯನ್ನು ಇಲ್ಲಿ ಸಂಭ್ರಮಿಸಲಾಗಿತು.2020ರಲ್ಲಿ ಆರಂಭವಾದ ಮಾಹೆಯ ಈ ಆನ್‌ಲೈನ್ ಶಿಕ್ಷಣ ವಿಭಾಗವು ಇಂದು ಬರೋಬ್ಬರಿ 59 ದೇಶಗಳಿಗೆ ವಿಸ್ತರಿಸಿದೆ. ಪ್ರಸ್ತುತ, ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ರೂಪಿಸಲಾದ ಪದವಿ, ಸ್ನಾತಕೋತ್ತರ ಪದವಿ […]

ಬಡ ಹಿಂದು ಮಹಿಳೆಯ ಪರ ನೆರವು ಕೇಳಿಕೊಂಡು ಬಂದ ಮುಸ್ಲಿಂ ಮಹಿಳೆಯರು ! ಇದು ನಮ್ಮ ಭಾರತ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿಯಲ್ಲಿ ಅಪರೂಪದ ಘಟನೆಗೆ ಸಾಕ್ಷಿ

ಉಡುಪಿ: 35 ವರ್ಷಗಳ ಹಿಂದೆ ಸರ್ಕಾರದಿಂದ ನಿವೇಶನ ಮಂಜೂರು ಆಗಿದ್ದರೂ ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಮನೆ ಕಟ್ಟಲಾಗದೆ ದಿಕ್ಕೆಟ್ಟು ಹೋಗಿದ್ದ ವಿಧವೆ ಹಿಂದು ಮಹಿಳೆಯೊಬ್ಬರ ಪರವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿದ ಅಪರೂಪದ ಪ್ರಸಂಗ ಉಡುಪಿಯಲ್ಲಿ ನಡೆದಿದೆ. ಉಡುಪಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ಮುಸ್ಲಿಂ ಮಹಿಳೆಯರು ನೆರವು ಯಾಚಿಸಿದ್ದು ಹಿಂದು – ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ. ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ವಯಸ್ಕ ಮಹಿಳೆ […]