“ಒಂದು ವರ್ಷ ಚಿನ್ನ ಖರೀದಿಸಬೇಡಿ!”- ಯಾಕೆ ಗೊತ್ತಾ?

ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ತಪ್ಪಿಸಲು ಮನವಿ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆ ವಿದೇಶಿ ವಿನಿಮಯ ಉಳಿಸುವ ಅಗತ್ಯವಿದೆ ಎಂದು ಹೇಳಿದರು. “ದೇಶಭಕ್ತಿಯ ದೃಷ್ಟಿಯಿಂದ ವಿದೇಶಿ ವಿನಿಮಯ ಉಳಿಸೋಣ” ಎಂದು ಕರೆ ನೀಡಿದ ಅವರು, ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಚಿನ್ನ ಖರೀದಿಯನ್ನು ಮಿತಿಗೊಳಿಸುವಂತೆ […]

ಇಂಜಿನಿಯರ್ ಗಳಿಗಿಂತ ಹೆಚ್ಚಿನ ದುಡಿಮೆ ಕೃಷಿಯಲ್ಲಿ ಸಾಧ್ಯ- ಅಶೋಕ್ ಕೆ.ಎಸ್.

ಮೂಡುಬಿದಿರೆ : ವಿದೇಶಗಳಲ್ಲಿ ದುಡಿಯುವ ಎಂಜಿನಿಯರ್ ಗಳಿಗಿಂತ ಲಾಭದಾಯಕ ಕೃಷಿ. ನಾವು ಉನ್ನತ ಶಿಕ್ಷಣ ಪಡೆದಿದ್ದರೂ ಹಲಸಿನ ಕೃಷಿಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆದಾಯದೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ ಎಂದು ದೊಡ್ಡಬಳ್ಳಾಪುರದ ಕೃಷಿಕ ಅಶೋಕ್ ಕೆ. ಎಸ್. ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪವ‌ರ್ ಫ್ರೆಂಡ್ಸ್ ಬೆದ್ರ, ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಬೃಹತ್ […]

ಚಾಣಕ್ಯ ನಲಿಕಲಿ ಬೇಸಗೆ ಶಿಬಿರಕ್ಕೆ ತೆರೆ

ಹೆಬ್ರಿ: ಬೇಸಗೆ ಶಿಬಿರವು ಕೇವಲ ಮನರಂಜನೆಗೆ ಸೀಮಿತವಲ್ಲ, ಅದು ಮಕ್ಕಳ ಭವಿಷ್ಯ ರೂಪಿಸುವ ಸೃಜನಾತ್ಮಕ ಪಾಠಶಾಲೆಯಾಗಿದ್ದು ಅಂತಹ ವೈವಿಧ್ಯಮಯ ಬೇಸಗೆ ಶಿಬಿರವನ್ನು ಕಳೆದು 11ವರ್ಷಗಳಿಂದ ಆಯೋಜಿಸುತ್ತಿರುವ ಚಾಣಕ್ಯ ಸಂಸ್ಥೆಯ ಬೇಸಿಗೆ ಶಿಬಿರ ಕೇವಲ ಮಕ್ಕಳು ಮಾತ್ರವಲ್ಲ ಪೋಷಕರ ಮನ ಗೆದ್ದಿದ್ದು ಸಂಘಟಕರಾದ ಉದಯ ಕುಮಾರ್ ಶೆಟ್ಟಿ ದಂಪತಿಯ ಪರಿಶ್ರಮ ಶ್ಲಾಘನೀಯ ಎಂದು ಹೆಬ್ರಿ ಸರಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು. ಅವರು ಹೆಬ್ರಿ ಸರಕಾರಿ ಪ. ಪೂ. ಕಾಲೇಜಿನ ಪ್ರೌಢಶಾಲಾ ಸಭಾಂಗಣದಲ್ಲಿ […]