ಪದವಿ ಮಾತ್ರವಲ್ಲ ಪದವಿ ಜೊತೆಗೆ ಪಡೆಯಿರಿ ಕೌಶಲ್ಯಾಧಾರಿತ ಡಿಪ್ಲೋಮಾ ಶಿಕ್ಷಣ: ಉಡುಪಿ ಉಪೇಂದ್ರ ಪೈ ಕಾಲೇಜು-MSDC ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಆಫರ್.

ಉಡುಪಿ: ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು -Upendra Pai Memorial College (UPMC) ಸಂಸ್ಥೆ, Manipal Skill Development Centre (MSDC) ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಉದ್ಯೋಗಮುಖಿ ಶಿಕ್ಷಣ ಒದಗಿಸುವ ನೂತನ ಕಾರ್ಯಕ್ರಮಗಳನ್ನು ಘೋಷಿಸಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳು ಡಿಗ್ರಿಯೊಂದಿಗೆ ಪ್ರೊಫೆಷನಲ್ ಸ್ಕಿಲ್ ಡಿಪ್ಲೋಮಾವನ್ನು ಒಂದೇ ಸಮಯದಲ್ಲಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಸಾಮಾನ್ಯವಾಗಿ ಡಿಗ್ರಿ ಮತ್ತು ಡಿಪ್ಲೋಮಾ ಪಡೆಯಲು ನಾಲ್ಕು ವರ್ಷ ಬೇಕಾಗುತ್ತದೆ. ಆದರೆ ಈ ಸಂಯೋಜಿತ ಕಾರ್ಯಕ್ರಮದ ಮೂಲಕ ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ […]

ಎನ್.ಡಿ.ಎ ಪ್ರವೇಶ ಪರೀಕ್ಷೆ ಜ್ಞಾನಸುಧಾದ ಹನ್ನೊಂದು ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರಮಟ್ಟದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೆವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ. ಲಿಖಿತ ಪರೀಕ್ಷೆಯಲ್ಲಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಅಭಿಷೇಕ್ ಡಿ ಜಿ, ಕೆ. ಎಸ್ ಗಣೇಶ, ಕಾನಿಷ್ಕ್ ಎಸ್. ಅಮೀನ್, ಮೋದಕ್ ಪಿ. ಆರ್,ಎನ್ ಎಸ್ ವಿವೇಕ್, ನಿಧೀಶ್ ಸುದೀಪ್ ಕುಮಾರ್, ರೋಚಕ್ ಪ್ರಮೋದ್ ಬಡಿಗೇರ್, ಸಾಯಿರಾಘವೇಂದ್ರ ಬಿ.ಎಸ್, ಶ್ರೀನಿವಾಸ ರೆಡ್ಡಿ […]

ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಧ್ಯಾಯ ಶುರು

ತಮಿಳುನಾಡು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿ ಜೊಸೆಫ್ ವಿಜಯ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. Tamilaga Vettri Kazhagam (ಟಿವಿಕೆ) ಪಕ್ಷದ ಮುಖ್ಯಸ್ಥರಾಗಿರುವ ವಿಜಯ್ ಅವರ ರಾಜಕೀಯ ಪ್ರವೇಶ ಇದೀಗ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗಿದೆ. ಪ್ರಾರ್ಥನೆಯೊಂದಿಗೆ ಆರಂಭವಾದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲರು ವಿಜಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. “ನಾನು ಸಿ. ಜೋಸೆಫ್ ವಿಜಯ್ ಎನ್ನುವ ನಾನು…” ಎಂದು ಪ್ರಮಾಣ ವಚನ ಆರಂಭಿಸಿದ ವೇಳೆ ಸಭಾಂಗಣದಲ್ಲಿ ಭಾರೀ […]

ಬನವಾಸಿಗೆ ಒಲಿದು ಬಂದ ಕೇರಳ ಅರಣ್ಯ ಇಲಾಖೆಯ ವನಮಿತ್ರ ಪ್ರಶಸ್ತಿ

ನೀರ್ಚಾಲು: ನೀರ್ಚಾಲು ಸಮೀಪದ ಬುರುಡಡ್ಕ ಎಂಬ ಬರಡು ನೆಲವನ್ನು ಹದಗೊಳಿಸಿ, ಕೃಷಿಭೂಮಿಯನ್ನಾಗಿ ಪರಿವರ್ತಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ರತ್ನಾಕರ ಮಲ್ಲಮೂಲೆ ಕೇರಳ ಸರಕಾರದ ಅರಣ್ಯ ಇಲಾಖೆಯವರು ನೀಡುವ ಪ್ರತಿಷ್ಠಿತ ವನಮಿತ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಮಲ್ಲಮೂಲೆಯವರು ಕೇವಲ ಮೂರ್ನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಬನವಾಸಿ ಎಂಬ ಹೆಸರಿನಲ್ಲಿ ರೂಪಿಸಿದ ಈ ಸ್ಥಳವು ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರಜಾಗೃತಿಯ ಸ್ಥಳವಾಗಿ ರೂಪುಗೊಂಡಿದೆ. ಅದೇ ರೀತಿಯಲ್ಲಿ ಇವರ ಪರಿಸರಸ್ನೇಹಿ ಮನೆಯು ಜನರ ಆಕರ್ಷಣೆಯ ಕೇಂದ್ರವಾಗಿದೆ. ದಿನನಿತ್ಯ […]

ಉಡುಪಿಯ ವಿದ್ಯಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಪ್ರವೇಶಾತಿ ಶುರು: ಆಸಕ್ತರು ವಿವಿಧ ತರಗತಿಗೆ ಅರ್ಜಿ ಸಲ್ಲಿಸಿ

ಉಡುಪಿ: ಉಡುಪಿಯ ಹೆಸರಾಂತ ವಿದ್ಯಾ ಟ್ಯುಟೋರಿಯಲ್ ಕಾಲೇಜ್ ನಲ್ಲಿ ವಿವಿಧ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಎಸ್.ಎಸ್.ಎಲ್.ಸಿ. ಪಾಸಾದವರು ಅಥವಾ ಪ್ರಥಮ ಪಿ.ಯು.ಸಿ ಫೇಲಾಧವರು ನೇರವಾಗಿ ದ್ವಿತೀಯ ಪಿ.ಯು.ಸಿ ಮಾಡಬಹುದು. 7,8 ಅಥವಾ 9 ನೇ ತರಗತಿ ಫೇಲಾದವರು ನೇರವಾಗಿ ಎಸ್.ಎಸ್.ಎಲ್.ಸಿ ಮಾಡಬಹುದು. ಇದಲ್ಲದೆ 8,9 ಮತ್ತು 10 ನೇ ತರಗತಿಯ ಎಲ್ಲಾ ವಿಷಯಗಳು, ಪಿ.ಯು.ಸಿ ಯ ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್, ಬಿಸಿನೆಸ್ ಸ್ಟಡೀಸ್ ಹಾಗೂ ಕಂಪ್ಯೂಟರ್ ಸೈನ್ಸ್ ಮುಂತಾದ ವಿಷಯಗಳಿಗೆ ತರಬೇತಿ ನೀಡಲಾಗುವುದು. ಇಂದೇ ಭೇಟಿಯಾಗಿ ವಿದ್ಯಾ ಟ್ಯುಟೋರಿಯಲ್ […]