ಮಂಗಳೂರಿನ ಮೊದಲ ಬೋ ಸ್ಟ್ರಿಂಗ್ ಸೇತುವೆ ಕಾಮಗಾರಿ ಸೆಪ್ಟೆಂಬರ್ ನಲ್ಲಿ ಪೂರ್ಣ: ಬೆಂಗ್ರೆ- ತಣ್ಣೀರುಬಾವಿ ಜನಗಳ ಬಹುದಿನಗಳ ಕನಸು, ನನಸು

ಮಂಗಳೂರು: ಫಲ್ಗುಣಿ ನದಿಗೆ (ಗುರುಪುರ ನದಿ) ಅಡ್ಡಲಾಗಿ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿಯನ್ನು ಸಂಪರ್ಕಿಸುವ ಅತ್ಯಾಧುನಿಕ ತಂತ್ರಜ್ಞಾನದ ಬೋ ಸ್ಟ್ರಿಂಗ್ ಸೇತುವೆಯ ಕಾಮಗಾರಿ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಶುಕ್ರವಾರ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಯೋಜನೆಯು ಅತ್ಯಂತ ವೇಗವಾಗಿ ಪ್ರಗತಿಯಲ್ಲಿದ್ದು, ಸ್ಥಳೀಯ ನಿವಾಸಿಗಳಿಗೆ ನಗರದ ಸಂಪರ್ಕವನ್ನು ಇದು ಸುಲಭಗೊಳಿಸಲಿದೆ” ಎಂದರು. “ಸ್ಮಾರ್ಟ್ ಸಿಟಿ ಯೋಜನೆಯಡಿ […]
ನಿವೃತ್ತ ಅಧಿಕಾರಿಯನ್ನು ಬೀದಿಗೆ ತಳ್ಳಿ ಬಿಟ್ಟಿತು, ಆ ಒಂದು ವಾಟ್ಸಾಪ್ ಮೆಸೆಜ್: ಮೈಸೂರಿನ ಈ ಘಟನೆ ನಾಳೆ ನಮ್ಮೂರಲ್ಲೂ ಆಗಬಹುದು ಎಚ್ಚರವಾಗಿರಿ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದರೆ ನೆಮ್ಮದಿಯ ತಾಣ ಎಂದು ಹೇಳಲಾಗುತ್ತದೆ. ಆದರೆ ಇದೀಗ ಅದೇ ನಗರದಲ್ಲಿ ಸೈಬರ್ ಖದೀಮರು ಡಿಜಿಟಲ್ ದರೋಡೆಗೆ ಇಳಿದಿರುವ ಘಟನೆಗಳು ಹೆಚ್ಚಾಗುತ್ತಿವೆ. ನಿವೃತ್ತ ಅಧಿಕಾರಿಯನ್ನು ಬೀದಿಗೆ ತಳ್ಳಿ ಬಿಟ್ಟಿತು ಸೈಬರ್ ಕಳ್ಳರ ಆ ಒಂದು ಮೆಸೆಜ್, ಹೌದು ಕಷ್ಟಪಟ್ಟು ದುಡಿದು ನಿವೃತ್ತಿ ಜೀವನವನ್ನು ಸುಖವಾಗಿ ಕಳೆಯಬೇಕೆಂದಿದ್ದ ಅಧಿಕಾರಿಯೊಬ್ಬರು ಇದೀಗ ಕೋಟಿ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇವಲ ಒಂದು ವಾಟ್ಸಾಪ್ ಮೆಸೇಜ್ ಇಡೀ ಬದುಕನ್ನೇ ಉಲ್ಟಾಪಲ್ಟಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. […]
ಭಾರತೀಯ ರೈಲ್ವೆಯಿಂದ ಪ್ರಯಾಣಿಕರಿಗೆ ಸಿಹಿ ಸುದ್ದಿ: ಹೊಸ AI ಆಧಾರಿತ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ!

ನವದೆಹಲಿ: Indian Railways ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಆಗಸ್ಟ್ 2026ರಿಂದ ಹೊಸ ತಲೆಮಾರಿನ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಅನ್ನು ಹಂತ ಹಂತವಾಗಿ ಜಾರಿಗೆ ತರಲು ಸಿದ್ಧವಾಗಿದೆ. ಸುಮಾರು 40 ವರ್ಷಗಳ ಹಳೆಯ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನವೀಕರಿಸಲಾಗುತ್ತಿದ್ದು, ಇದರ ಮೂಲಕ ವೇಗವಾದ ಟಿಕೆಟ್ ಬುಕ್ಕಿಂಗ್, ಹೆಚ್ಚಿದ ಪಾರದರ್ಶಕತೆ ಹಾಗೂ ಉತ್ತಮ ಪ್ರಯಾಣಿಕ ಸೇವೆ ದೊರೆಯಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ರೈಲ್ವೆ ಮೂಲಗಳ ಪ್ರಕಾರ, ಹೊಸ PRS ವ್ಯವಸ್ಥೆ ಒಂದು ನಿಮಿಷಕ್ಕೆ […]
ಉಡುಪಿ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯೂನೇಜ್ಮೆಂಟ್’ನಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ

ಉಡುಪಿ: ಉಡುಪಿ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯೂನೇಜ್ಮೆಂಟ್, ಉಡುಪಿ ಮ್ಯೂನೇಜ್ಮೆಂಟ್ ಅಸೋಸಿಯೇಷನ್ ಸಹಯೋಗದಲ್ಲಿ, 2026ರ ಏ. 24 ಮತ್ತು 25 ರಂದು “ಜಾಗತಿಕ ವ್ಯಾಪಾರ ವೃದ್ಧಿ ಮತ್ತು ಉದ್ಯಮಶೀಲ ಅಭಿವೃದ್ಧಿಗೆ ತಂತ್ರಜಾನವು ಉತ್ತೇಜಕ ಶಕ್ತಿಯಾಗಿ” ಎಂಬ ವಿಷಯದ ಮೇಲೆ ಎರಡು ದಿನನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ಯಶಸ್ಟಿಯಾಗಿ ಆಯೋಜಿಸಿತು. ಈ ಸಮ್ಮೇಳನವನ್ನು ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ನ ಅಧ್ಯಕ್ಷರು ಶ್ರೀ ಶ್ರೀ ಪ್ರಿಯತೀರ್ಥ ಸ್ವಾಮೀಜಿ ಅವರುಸಂಪ್ರದಾಯಬದ್ದ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಸ್ವಾಮೀಜಿಗಳು ಸಮಾರಂಭವನ್ನು […]
ಮೇ 10ರಂದು ಕೃಷ್ಣ ಮಂತ್ರ ಲೇಖನಯಜ್ಞ ಲೋಕಾರ್ಪಣೆ

ಉಡುಪಿ: ಕಲಿಯುಗದಲ್ಲಿ ಕೃಷ್ಣ ಮಂತ್ರ ಜಪ ಹೆಚ್ಚು ಲದಾಯಕ. ಹೀಗಾಗಿ ಶ್ರೀಕೃಷ್ಣ ಮಠದಲ್ಲಿ ಕೃಷ್ಣಮಂತ್ರ ಜಪ-ಲೇಖನ ಯಜ್ಞ ಆರಂಭಿಸಲಾಗಿದ್ದು, ಮೇ 10ರಂದು ಕೃಷ್ಣ ಮಂತ್ರ ಲೇಖನಯಜ್ಞ ಲೋಕಾರ್ಪಣೆಗೊಳ್ಳಲಿದೆ ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನ ಶ್ರೀಪಾದರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರೆದಾದ ಮೇಲೆ ಪುಸ್ತಕವನ್ನು ನಿಗದಿತ ದಿನದಂದು ಮಠಕ್ಕೆ ಬಂದು ಕೃಷ್ಣನಿಗೆ ಅರ್ಪಿಸಬಹುದು ಎಂದರು. ದಿವಾನ್ ಡಾ. ಉದಯ್ ಸರಳತ್ತಾಯ ಮಾತನಾಡಿ, ಮೇ 10ರಂದು ಸಂಜೆ 5.30ಕ್ಕೆ ಕೃಷ್ಣ ಮಂತ್ರ ಜಪ ಲೇಖನ ಯಜ್ಞಕ್ಕೆ […]