ಬಿ. ಬಿ. ಹೆಗ್ಡೆ ಕಾಲೇಜು ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಕುಂದಾಪುರ: ವಿದ್ಯಾರ್ಥಿಗಳ ಪರಿಶ್ರಮ, ಸತತ ಪ್ರಯತ್ನದ ಫಲಕ್ಕೆ ಸಿಗುವ ಪುರಸ್ಕಾರವೇ ಯಶಸ್ಸು. ಈ ಯಶಸ್ಸು ನಿರಂತರವಾಗಿರಬೇಕಾದರೆ ಸಮಯ ಪ್ರಜ್ಞೆ, ಕೌಶಲ್ಯ, ಶಿಸ್ತು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ಪಡೆದ ಯಶಸ್ಸು ಶಾಶ್ವತವಾಗಿರಲು ಸಾಧ್ಯ ಎಂದು ಜಿಲ್ಲಾ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ, ಕಾಪು ತಾಲೂಕು ಶ್ರೀ ವಿಜಯ್ ಕುಮಾರ್, ಕೆ.ಎ.ಎಸ್., ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು. ಇನ್ನೋರ್ವ […]

ಕೊಲೆ ರಹಸ್ಯ ಬಿಚ್ಚಿಟ್ಟ ಗಿಳಿ! ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ ಈ ಪ್ರಕರಣ

ಕೊಲೆ ಪ್ರಕರಣಗಳ ತನಿಖೆಯಲ್ಲಿ ಸಾಮಾನ್ಯವಾಗಿ ಸಾಕ್ಷಿಗಳು, ಸಿಸಿಟಿವಿ ದೃಶ್ಯಗಳು ಅಥವಾ ಫೊರೆನ್ಸಿಕ್ ಪುರಾವೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಅಮೆರಿಕದ ಮಿಚಿಗನ್‌ನಲ್ಲಿ ನಡೆದ ಒಂದು ವಿಚಿತ್ರ ಪ್ರಕರಣದಲ್ಲಿ, ಮನೆಯಲ್ಲಿದ್ದ ಸಾಕು ಗಿಳಿಯೇ ತನಿಖೆಗೆ ಪ್ರಮುಖ ಸುಳಿವು ನೀಡಿದ ಘಟನ್ ನಡೆದಿದೆ. ಹೀಗಿದೆ ಘಟನೆ 2015ರಲ್ಲಿ ಅಮೆರಿಕದ ಮಿಚಿಗನ್ ರಾಜ್ಯದ ಸ್ಯಾಂಡ್ ಲೇಕ್‌ನಲ್ಲಿ 45 ವರ್ಷದ ಮಾರ್ಟಿನ್ ಡುರಾಮ್ ತಮ್ಮ ಮನೆಯಲ್ಲಿ ಗುಂಡೇಟಿನಿಂದ ಮೃತರಾಗಿದ್ದರು. ಘಟನೆಯ ವೇಳೆ ಅವರ ಪತ್ನಿ ಗ್ಲೆನ್ನಾ ಡುರಾಮ್ ಕೂಡ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. […]

ಕಂಪ್ಯೂಟರ್ ಕೀ ಬೋರ್ಡ್ ಆಗಾಗ ಕ್ಲೀನ್ ಮಾಡದಿದ್ದರೆ ಸಮಸ್ಯೆಗಳಿಗೆ ಹಾದಿ ಮಾಡಿಕೊಟ್ಟಂತೆ! ಹೇಗೆ ಇಲ್ಲಿ ನೋಡಿ

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಕೀಬೋರ್ಡ್ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಅತ್ಯಂತ ಮುಖ್ಯ ಸಾಧನವಾಗಿದೆ. ನಾವು ದಿನವೂ ಬಳಸುವ ಈ ಕೀಬೋರ್ಡ್ ಮೇಲೆ ಧೂಳು, ಮಣ್ಣು, ಆಹಾರದ ತುಂಡುಗಳು ಹಾಗೂ ಬ್ಯಾಕ್ಟೀರಿಯಾ ಕೂಡ ಸೇರುತ್ತವೆ. ಆದ್ದರಿಂದ ನಿಯಮಿತವಾಗಿ ಕೀಬೋರ್ಡ್ ಕ್ಲೀನ್ ಮಾಡುವುದು ಅತ್ಯಗತ್ಯ. ಯಾಕೆ ಕೀಬೋರ್ಡ್ ಕ್ಲೀನ್ ಮಾಡಬೇಕು? ಕೀ ಬೋರ್ಡ್ ಸಂದುಗಳಲ್ಲಿ ಕುಳಿತುಕೊಲ್ಳುವ ಧೋಳು ಹಾಗೂ ಕಸಗಳಿಂದ ಕೀಬೋರ್ಡ್ ನಲ್ಲಿ ಬ್ಯಾಕ್ಟೀರಿಯಾ ಮತ್ತು ಜರ್ಮ್ಸ್ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಕೀಲಿಗಳು ಸರಿ ಕೆಲಸ ಮಾಡದೇ ಬೇಗ ಹಾಳಾಗುವ […]

“ಉಡುಪಿಯಲ್ಲಿ ವೈದ್ಯ ಸಾಹಿತ್ಯ ಸಮ್ಮೇಳನ “

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯಿಂದ ತಾರೀಕು 3 -5 -2026 ರವಿವಾರ ಉಡುಪಿಯ ಐಎಂಎ ಭವನದಲ್ಲಿ ಉಡುಪಿ ಕುಂದಾಪುರ ಹಾಗೂ ಕಾರ್ಕಳ ತಾಲೂಕನ್ನು ಒಳಗೊಂಡ ಐಎಂಎ ಸದಸ್ಯ ಸಾಹಿತಿಗಳನ್ನು ಒಗ್ಗೂಡಿಸಿಕೊಂಡು ಉಡುಪಿ ಜಿಲ್ಲಾ ವೈದ್ಯ ಸಾಹಿತ್ಯ ಸಮ್ಮೇಳನವು ಜರಗಲಿದೆ. ಉದ್ಘಾಟಕರಾಗಿ ಖ್ಯಾತ ಸಾಹಿತಿ ಐ ಎಂ ಎ ಬರಹಗಾರರ ಸಮಿತಿಯ ರಾಜ್ಯ ಅಧ್ಯಕ್ಷ್ಯೆ ಡಾ. ಇಂದಿರಾ ದೊಡ್ಡ ಬಳ್ಳಾಪುರ, ಐಎಂಎ ರಾಜ್ಯ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಉಡುಪಿ ಜಿಲ್ಲಾ ಸಂಯೋಜಕ ಡಾ. ಉಮೇಶ್ […]

ಇಂದು ನಿಮ್ಮ ಮೊಬೈಲ್‌ನಲ್ಲಿ ಕೇಳಿಸಲಿದೆ ಅಲರ್ಟ್ ಸೌಂಡ್, ಒಮ್ಮೆಲೇ ಶಬ್ದ ಬಂದರೆ ಗಾಬರಿಯಾಗಬೇಡಿ!

ಬೆಂಗಳೂರು: ಇಂದು (ಶನಿವಾರ) ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಅಚಾನಕ್ ಜೋರಾಗಿ ಬೀಪ್ ಶಬ್ದ ಕೇಳಿಸಿಕೊಂಡರೂ ಅಥವಾ ತುರ್ತು ಎಚ್ಚರಿಕೆಯ ಸಂದೇಶ ಬಂದರೂ ಆತಂಕಪಡಬೇಕಿಲ್ಲ. ಕೇಂದ್ರ ಸರ್ಕಾರ ಹೊಸ ವಿಪತ್ತು ಎಚ್ಚರಿಕಾ ವ್ಯವಸ್ಥೆಯನ್ನು ಪರೀಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್‌ಗಳಿಗೆ ವಿಶೇಷ ಅಲರ್ಟ್ ಸಂದೇಶಗಳು ರವಾನೆಯಾಗಲಿವೆ. National Disaster Management Authority (NDMA) ಮೇ 2ರಂದು ದೇಶವ್ಯಾಪಿ ಹೊಸ ತುರ್ತು ಎಚ್ಚರಿಕಾ ವ್ಯವಸ್ಥೆಯ ಪರೀಕ್ಷೆ ನಡೆಸುತ್ತಿದೆ. ಇದರ ಭಾಗವಾಗಿ ಬೆಂಗಳೂರು ಸೇರಿದಂತೆ ಹಲವು ನಗರಗಳ ನಾಗರಿಕರ ಮೊಬೈಲ್‌ಗಳಿಗೆ ಜೋರಾದ ಸೈರನ್ ಧ್ವನಿಯೊಂದಿಗೆ […]