“ಉಡುಪಿಯಲ್ಲಿ ವೈದ್ಯ ಸಾಹಿತ್ಯ ಸಮ್ಮೇಳನ “

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯಿಂದ ತಾರೀಕು 3 -5 -2026 ರವಿವಾರ ಉಡುಪಿಯ ಐಎಂಎ ಭವನದಲ್ಲಿ ಉಡುಪಿ ಕುಂದಾಪುರ ಹಾಗೂ ಕಾರ್ಕಳ ತಾಲೂಕನ್ನು ಒಳಗೊಂಡ ಐಎಂಎ ಸದಸ್ಯ ಸಾಹಿತಿಗಳನ್ನು ಒಗ್ಗೂಡಿಸಿಕೊಂಡು ಉಡುಪಿ ಜಿಲ್ಲಾ ವೈದ್ಯ ಸಾಹಿತ್ಯ ಸಮ್ಮೇಳನವು ಜರಗಲಿದೆ. ಉದ್ಘಾಟಕರಾಗಿ ಖ್ಯಾತ ಸಾಹಿತಿ ಐ ಎಂ ಎ ಬರಹಗಾರರ ಸಮಿತಿಯ ರಾಜ್ಯ ಅಧ್ಯಕ್ಷ್ಯೆ ಡಾ. ಇಂದಿರಾ ದೊಡ್ಡ ಬಳ್ಳಾಪುರ, ಐಎಂಎ ರಾಜ್ಯ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಉಡುಪಿ ಜಿಲ್ಲಾ ಸಂಯೋಜಕ ಡಾ. ಉಮೇಶ್ ಪುತ್ರನ್ ಆಗಮಿಸಲಿದ್ದಾರೆ. ವೈದ್ಯರಿಂದ ಸ್ವರಚಿತ ಕವನ ವಾಚನ, ಶ್ರೀ ಮನು ಹಂದಾಡಿ ಇವರಿಂದ ಹಾಸ್ಯ ಸಂಜೆ ,ಶಿವಮೊಗ್ಗದ ಖ್ಯಾತ ಮಾನಸಿಕ ತಜ್ಞೆ ಡಾ. ಪವಿತ್ರ ಕೆ ಎಸ್ ಇವರಿಂದ ಮಾತು ನೃತ್ಯ ಪ್ರಾತ್ಯಕ್ಷಿಕೆಗಳನ್ನೊಳಗೊಂಡ ಕಾರ್ಯಾಗಾರ, ಹಾಗೂ ವೈದ್ಯ ಪುಸ್ತಕ ಪ್ರಕಾಶಕರ ಚರ್ಚಾ ಗೋಷ್ಠಿ ನಡೆಯಲಿದೆ. ಸಮರೋಪ ಸಮಾರಂಭದಲ್ಲಿ ಕಥಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ,ಹಿರಿಯ ವೈದ್ಯ ಸಾಹಿತಿ ಡಾ ಸಾವಿತ್ರಿ ದೈತೋಟ ಹಾಗೂ ಡಾ ಭಾಸ್ಕರಾನಂದ ಕುಮಾರ್ ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಭಾಂಗಣದಲ್ಲಿ ಉಡುಪಿಯ ವೈದ್ಯರಿಂದ ಪ್ರಕಟಿಸಲ್ಪಟ್ಟ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕೊನೆಯಲ್ಲಿ ವೈದ್ಯ ಸಂಗೀತ ಕಲಾವಿದರ ಕೂಟವಾದ ಮಧುರ ಲಹರಿಯಿಂದ ಸಂಗೀತ ಸಂಜೆ ಇದೆ ಎಂದು ಸಂಘಟಕರ ಪರವಾಗಿ ಡಾ. ಅಶೋಕ್ ಕುಮಾರ್ ಕಾಮತ್, ಡಾ. ಮಾನಸ್, ಡಾ. ವೈ ಸುದರ್ಶನ್ ರಾವ್, ಡಾ. ವಿಜಯ ವೈ ಬಿ ತಿಳಿಸಿದ್ದಾರೆ.