ಉಡುಪಿ: ನಾರಿ ಶಕ್ತಿ ವಂದನ ಮಸೂದೆ ಜಾರಿಯಾಗದಂತೆ ತಡೆಹಿಡಿದ ವಿಪಕ್ಷಗಳ ವಿರುದ್ಧ ನಾರಿ ಶಕ್ತಿ ಫೋರಂನಿಂದ ಪ್ರತಿಭಟನೆ

ಉಡುಪಿ: ಉಡುಪಿಯಲ್ಲಿ ನಾರಿ ಶಕ್ತಿ ಫೋರಂ ನವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾರಿ ಶಕ್ತಿ ವಂದನ ಅಧಿನಿಯಮವನ್ನು ಜಾರಿಯಾಗದಂತೆ ತಡೆಹಿಡಿದ ಕೇಂದ್ರದ ವಿಪಕ್ಷಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಲಾಯಿತು. ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿರುವುದು ಮಹಿಳಾ ವಿರೋಧಿ ನಿಲುವಾಗಿದೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿವೆ. ಕೇವಲ ಬಿಜೆಪಿ ಬೆಂಬಲಿತ ಮಹಿಳೆಯರು ಮಾತ್ರವಲ್ಲ ಸಾರ್ವಜನಿಕವಾಗಿ ವಿಪಕ್ಷಗಳ ಈ ನಿಲುವನ್ನು ವಿರೋಧಿಸಬೇಕು. ಕಾಂಗ್ರೆಸ್ ಪಕ್ಷದ ಮಹಿಳೆಯರು ಕೂಡ ನಮ್ಮನ್ನು ಬೆಂಬಲಿಸಬೇಕು ಎಂದು […]

ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯ: “ಎ ಐ ಕೋಡಿಂಗ್ ವಿತ್ ನ್ಯಾಚುರಲ್ ಲ್ಯಾಂಗ್‌ವೇಜ್” ಎಂಬ ವಿಷಯದ ಕುರಿತು ಕಾರ್ಯಾಗಾರ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗವು ಮಹಿಳಾ ಸಬಲೀಕರಣ ಕೋಶದ ಸಹಯೋಗದೊಂದಿಗೆ “ಎ ಐ ಕೋಡಿಂಗ್ ವಿತ್ ನ್ಯಾಚುರಲ್ ಲ್ಯಾಂಗ್‌ವೇಜ್” ಎಂಬ ವಿಷಯದ ಕುರಿತು ಎಪ್ರಿಲ್ 24 ರಂದು ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಗಾರವನ್ನು ಸಂಸ್ಥೆಯ ಹಳೆ ವಿದ್ಯಾರ್ಥಿನಿ ಬೆಂಗಳೂರಿನ ರ‍್ಯಾಕಲ್ ಸಂಸ್ಥೆಯ ಸಾಫ್ಟ್ ಸೊಲ್ಯೂಶನ್ ಇಂಜಿನಿಯರ್ ಆಗಿರುವ ವಿಧಿಶಾ ಶೇಟ್ ಹಾಗೂ ಡಾಟಾ ಮತ್ತು ಎ ಐ ವಿಭಾಗದ ಸಾಫ್ಟ್ ಸೊಲ್ಯೂಶನ್ ಇಂಜಿನಿಯರ್ ಆಗಿರುವ ನಿವೇದಿತಾ ಭಟ್ ನಡೆಸಿಕೊಟ್ಟರು. ಈ […]

ಕುಂದಾಪುರ: ವಾರಾಹಿ ಕಾಲುವೆಗೆ ಬಿದ್ದ ಕಾಡುಕೋಣದ ರಕ್ಷಣಾ ಕಾರ್ಯಾಚರಣೆ

ಕುಂದಾಪುರ: ಉಡುಪಿ ಜಿಲ್ಲೆಯ ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೋಡು ಶ್ರೀ ಕುಮಾರಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ವಾರಾಹಿ ಕಾಲುವೆಗೆ ಬಿದ್ದ ಬೃಹತ್ ಗಾತ್ರದ ಕಾಡುಕೋಣವನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಕಾಡಿನಿಂದ ನಾಡಿನತ್ತ ಬಂದಿದ್ದ ಕಾಡುಕೋಣ ಕಾಲುವೆಗೆ ಬಿದ್ದಿದ್ದು, ಸುಮಾರು 20 ಗಂಟೆಗಳ ಕಾಲ ಕಾಲುವೆಯಲ್ಲೇ ಸಿಲುಕಿಕೊಂಡಿತ್ತು. ಇದು ನೀರು ಮತ್ತು ಆಹಾರಕ್ಕಾಗಿ ನಾಡಿನತ್ತ ಬಂದಿತ್ತು. ರಾತ್ರಿಯಿಡೀ ಕಾಲುವೆಯಲ್ಲೇ ಕಳೆದಿದ್ದ ಕಾಡುಕೋಣವನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತು. ಮೊದಲು […]

ಪೆರ್ಡೂರು ಶ್ರೀ‌ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ: ಮೇ 3ರಂದು ಸಾರ್ವಜನಿಕ ಸಮಾಲೋಚನಾ ಸಭೆ

ಉಡುಪಿ: ಪೆರ್ಡೂರು ಮಹತೋಭಾರ ಶ್ರೀ‌ ಅನಂತಪದ್ಮನಾಭ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಮೇ 3ರಂದು ಸಂಜೆ 4ಗಂಟೆಗೆ ದೇವಸ್ಥಾನದ ಪ್ರಾಂಗಣದಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಾಂತಾರಾಮ ಸೂಡ ಅವರು, ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಬಗ್ಗೆ ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಈ ಜೀರ್ಣೋದ್ಧಾರ ಕಾರ್ಯದಲ್ಲಿ ಗ್ರಾಮಸ್ಥರು, ಊರ ಪರವೂರಿನ ಭಕ್ತಾಧಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಯಾವುದೇ […]

ಕುಪ್ಮ ಕರ್ನಾಟಕ ಬೇಡಿಕೆಗೆ ಸ್ಪಂಧಿಸಿದ ಶಿಕ್ಷಣ ಇಲಾಖೆ.

ಮಂಗಳೂರು: ಕುಪ್ಮ ಕರ್ನಾಟಕ ವತಿಯಿಂದ ಏಪ್ರಿಲ್ ೨೨ ರಂದು ವಿಕಾಸಸೌಧದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ರಶ್ಮಿ ಮಹೇಶ್, ಪಿ.ಯು. ಬೋರ್ಡ್ನ ನಿರ್ದೇಶಕರಾದ ಶ್ರೀ ಭರತ್ ಹಾಗೂ ಕುಪ್ಮಾ ಸಂಘಟನೆಯ ಬೆಂಗಳೂರು ಉತ್ತರ ಜಿಲ್ಲೆಯ ಕುಪ್ಮಾ ಕಾರ್ಯದರ್ಶಿಯಾದ ಡಾ. ದೇವರಾಜ್ ಬಿ ಕೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಕುಪ್ಮಾ ಅಧ್ಯಕ್ಷರಾದ ಡಾ. ಜಯರಾಮ್ ಶೆಟ್ಟಿ ಹಾಗೂ ಇತರ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ […]