ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮಂಜುನಾಥ ಭಂಡಾರಿ ಶುಭಹಾರೈಕೆ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಅದರಲ್ಲೂ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ತಮ ಅಂಕಗಳನ್ನು ಗಳಿಸಿ ತೋರಿದ ಅಪ್ರತಿಮ ಸಾಧನೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭಕೋರಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಎಸ್‌ಎಸ್‌ಎಲ್‌ಸಿ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಇಲ್ಲಿನ ಸಾಧನೆಯು ಅವರ ಮುಂದಿನ ಉನ್ನತ […]

ಕುಂದಾಪುರ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಗಮನ ಸೆಳೆಯುವ ಸಾಧನೆ !

ಕುಂದಾಪುರ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 624 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನಕ್ಕೇರಿರುವ ಅನ್ವರ್ಥ್ ಪೂಜಾರಿ ಶಾಲೆಯ ಅಗ್ರಸ್ಥಾನಿಯಾಗಿದ್ದಾರೆ. ತಾನು ಸುಮಾರು 622 ಅಂಕಗಳ ನಿರೀಕ್ಷೆಯಲ್ಲಿದ್ದರೂ 624 ಅಂಕಗಳು ಬಂದಿರುವುದು ಸಂತೋಷ ತಂದಿದೆ ನಿಯಮಿತವಾಗಿ ಓದುವ ಅಭ್ಯಾಸವೇ ತನ್ನ ಯಶಸ್ಸಿಗೆ ಕಾರಣ, ಶಾಲಾ ಶಿಕ್ಷಕರ ಸಹಕಾರ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳು ಉತ್ತಮ ಫಲಿತಾಂಶಕ್ಕೆ ನೆರವಾದವು ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ […]

ಬೈಲೂರು ಜೂನಿಯರ್‌ ಕಾಲೇಜಿನ ಲೀಸಾ ಬರ್ಬೋಜಗೆ 624 ಅಂಕ: ವಿದ್ಯಾರ್ಥಿನಿಗೆ ದೇಶ ಸೇವೆಯಲ್ಲಿ ತೊಡಗುವ ಕನಸು

ಕಾರ್ಕಳ : ಬೈಲೂರು ಸರಕಾರಿ ಜೂನಿಯರ್ ಕಾಲೇಜಿನ ಲೀಸಾ ಬರ್ಬೋಜಾ ಅವರು 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪೋಷಕರ ಮಾರ್ಗದರ್ಶನ ಹಾಗೂ ಶಾಲಾ ಶಿಕ್ಷಕರ ಬೋಧನೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದಿರುವ ಅವರಿಗೆ ಐಎಎಸ್ ಓದಿ, ದೇಶಸೇವೆಗೆ ತೊಡಗುವ ಕನಸಿದೆ. ಲೀಸಾ ಬರ್ಬೋಜಾ ಇವರು ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸ್ ನಾಯಕ್ ಕಿರಣ್‌ ಬರ್ಬೋಜಾ ಹಾಗೂ ಶಿಕ್ಷಕಿ ಲವಿನಾ ಮರಿಯಾ ಪಿಂಟೋ ದಂಪತಿಯ ಪುತ್ರಿ.

ಉರಿ ಮೂತ್ರ, ಮೂತ್ರನಾಳದ ಸೋಂಕು ಎಂದಿಗೂ ಕಡೆಗಣಿಸಬೇಡಿ: ಇಲ್ಲಿದೆ ಉಪಯುಕ್ತ ಮಾಹಿತಿ

ಮೂತ್ರನಾಳದ ಸೋಂಕು Urinary Tract Infection(UTI), ಮೂತ್ರ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಮೂತ್ರಪಿಂಡ, ಮೂತ್ರಾಶಯ (Bladder), ಮೂತ್ರನಾಳ (Urethra) ಗಳಲ್ಲಿ ಉಂಟಾಗುವ ಬ್ಯಾಕ್ಟೀರಿಯಾ ಸೋಂಕಾಗಿದೆ. ಇದು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದ್ದರೂ, ಪುರುಷರು ಮತ್ತು ಮಕ್ಕಳಲ್ಲೂ ಇದು ಕಾಣಿಸಿಕೊಳ್ಳಬಹುದು. ಪ್ರಮುಖ ಕಾರಣಗಳು ಮೂತ್ರನಾಳದ ಸೋಂಕು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಲಕ್ಷಣಗಳು ತಡೆಗಟ್ಟುವಿಕೆ ಕ್ರಮಗಳು UTI ಸಾಮಾನ್ಯ ಸಮಸ್ಯೆಯಾದರೂ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ […]

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಮಂಜುನಾಥ ಆರ್. ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಮಂಜುನಾಥ ಆರ್. (ಕೆಎಂಎಎಸ್) ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಕಾರಾವರ, ಹಾವೇರಿ, ಯಾದಗಿರಿ, ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿವಿಧ ದರ್ಜೆಯಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಖಾಲಿಯಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ.