ಕುಂದಾಪುರ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಗಮನ ಸೆಳೆಯುವ ಸಾಧನೆ !

ಕುಂದಾಪುರ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 624 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನಕ್ಕೇರಿರುವ ಅನ್ವರ್ಥ್ ಪೂಜಾರಿ ಶಾಲೆಯ ಅಗ್ರಸ್ಥಾನಿಯಾಗಿದ್ದಾರೆ.

ತಾನು ಸುಮಾರು 622 ಅಂಕಗಳ ನಿರೀಕ್ಷೆಯಲ್ಲಿದ್ದರೂ 624 ಅಂಕಗಳು ಬಂದಿರುವುದು ಸಂತೋಷ ತಂದಿದೆ ನಿಯಮಿತವಾಗಿ ಓದುವ ಅಭ್ಯಾಸವೇ ತನ್ನ ಯಶಸ್ಸಿಗೆ ಕಾರಣ, ಶಾಲಾ ಶಿಕ್ಷಕರ ಸಹಕಾರ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳು ಉತ್ತಮ ಫಲಿತಾಂಶಕ್ಕೆ ನೆರವಾದವು ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಇಂಜಿನಿಯರ್ ಆಗುವ ಕನಸಿದೆ ಎಂದು ಅನ್ವರ್ಥ್ ಹೇಳಿದ್ದಾರೆ.

ಇವರು ಬೆಂಗಳೂರಿನಲ್ಲಿ ಹೋಟೆಲ್ ಉದ್ಯೋಗಿಯಾಗಿರುವ ಅಶೋಕ್ ಎಸ್. ಪೂಜಾರಿ ಮತ್ತು ಗೃಹಿಣಿ ಸುಮಿತ್ರಾ ದಂಪತಿಯ ಪುತ್ರ.ಇನ್ನು ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಜಿ., ಸಾಥ್ವಿಕ್ ಎಸ್. ಭಟ್ ಮತ್ತು ತಕ್ಷಾ ಪಿ. ಶೆಟ್ಟಿ ತಲಾ 623 ಅಂಕಗಳನ್ನು ಪಡೆದು ರಾಜ್ಯದಲ್ಲಿ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇವರ ಸಾಧನೆಯೂ ಶಾಲೆಗೆ ಹೆಮ್ಮೆ ತಂದಿದೆ.