ಡಾ. ಎನ್. ಎಸ್. ಎ. ಎಂ. ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4 ರ‍್ಯಾಂಕ್‌ಗಳು

ನಿಟ್ಟೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಪದವಿ ಪೂರ್ವ) ಯು ಮಾರ್ಚ್‌ 2026ರಲ್ಲಿ ನಡೆಸಿದ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ – 1ರಲ್ಲಿ ಡಾ. ಎನ್. ಎಸ್. ಎ. ಎಂ. ಪದವಿಪೂರ್ವ ಕಾಲೇಜು ನಿಟ್ಟೆಗೆ ರಾಜ್ಯ ಮಟ್ಟದಲ್ಲಿ 4 ರ‍್ಯಾಂಕ್‌ಗಳು ಲಭಿಸಿವೆ. ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಅಮೃತಾ ಕಾಮತ್‌ 600ರಲ್ಲಿ 596 ಅಂಕಗಳೊಂದಿಗೆ ರಾಜ್ಯ ಮಟ್ಟಕ್ಕೆ 5ನೇ ರ‍್ಯಾಂಕ್‌ ಹಾಗೂ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಆಡ್ಲಿನ್‌ ವಿಯಾನಾ ಮಥಾಯಸ್‌ 600ರಲ್ಲಿ […]

ಹೈದರಾಬಾದ್’ನಲ್ಲಿರುವ ಹೋಟೆಲ್’ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: 45 ವರ್ಷಗಳ ಪಾರಂಪರ್ಯ ಹೊಂದಿರುವ ಖ್ಯಾತ ಆತಿಥ್ಯ ಬ್ರ್ಯಾಂಡ್ ಹೈದರಾಬಾದ್‌ನಲ್ಲಿ ಹೊಸ ಔಟ್‌ಲೆಟ್ ಆರಂಭಿಸುತ್ತಿದ್ದು, ವಿವಿಧ ಹುದ್ದೆಗಳಿಗೆ ಕರಾವಳಿ ಭಾಗದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಲಭ್ಯವಿರುವ ಹುದ್ದೆಗಳು: ಮ್ಯಾನೇಜರ್CDP – ಸೌತ್ ಇಂಡಿಯನ್ ಕ್ಯುಸಿನ್, ಕಮೀ – ಸೌತ್ ಇಂಡಿಯನ್ ಜ್ಯೂಸ್ ಕೌಂಟರ್ ಸ್ಟಾಫ್ಚಾಟ್ ಸ್ಟಾಫ್ಡೆಸೆರ್ಟ್ ಸ್ಟಾಫ್ಕ್ಯಾಪ್ಟನ್ಆಯ್ಕೆಯಾದ ಅಭ್ಯರ್ಥಿಗಳಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9916737966

ಉಡುಪಿ: ಹೀರೋ ಶಕ್ತಿ ಮೋಟರ್ಸ್‌ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿ ಜಿಲ್ಲೆಯ ಹೀರೋ ಶಕ್ತಿ ಮೋಟರ್ಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು : 🔹ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ – 2 ಹುದ್ದೆಗಳು 🔹ಮೆಕ್ಯಾನಿಕ್ಸ್ – 10 ಹುದ್ದೆಗಳು 🔹ಅಡ್ವೈಸರ್ಸ್ – 4 ಹುದ್ದೆಗಳು 🔹 ಪಿ.ಡಿ.ಐ ಟೆಕ್ನಿಷಿಯನ್ – 2 ಹುದ್ದೆಗಳು ಫ್ರೆಶರ್ಸ್‌ಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಆಸಕ್ತರು ಸಂಪರ್ಕಿಸಿ :📞7996210666 📩[email protected]

ಜೀವನದಲ್ಲಿ ಲವಲವಿಕೆ, ಸಮಯಪ್ರಜ್ಞೆ ಮುಖ್ಯ: ಡಾ. ಎಂ. ಮೋಹನ ಆಳ್ವ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರ ಮೇಳದ ಉದ್ಘಾಟನೆ ಭಾನುವಾರ ಕನ್ನಡ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು, ಜೀವನದಲ್ಲಿ ಲವಲವಿಕೆ ಮತ್ತು ಸಮಯಪ್ರಜ್ಞೆ ಅತ್ಯಂತ ಮುಖ್ಯವೆಂದು ತಿಳಿಸಿದರು. ಡಾ. ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ನಡೆಯುತ್ತಿರುವ ಈ ರೀತಿಯ ಶಿಬಿರಗಳು ಮಕ್ಕಳ ಸಮಗ್ರ ಅಭಿವೃದ್ಧಿಗೆ ಬಹಳ ಉಪಯೋಗಕಾರಿಯಾಗಿವೆ […]

ಕಾರ್ಕಳ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ: ಡಾ.ಎಂ.ಎನ್.ರಾಜೇಂದ್ರಕುಮಾರ್

ಉಡುಪಿ: ಕಾರ್ಕಳದ ಗೊಮ್ಮಟೇಶ್ವರ ಬೆಟ್ಟದಲ್ಲಿ ಕ್ರಿ.ಶ.1432ರಲ್ಲಿ ಪ್ರತಿಷ್ಠಾಪನೆಗೊಂಡಿರುವ ಭಗವಾನ್ ಶ್ರೀಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಮುಂದಿನ ಕಾರ್ಯಕ್ರಮ 2027ರ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲಾ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಮಹಾಮಸ್ತಕಾಭಿಶೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ತಿಳಿಸಿದ್ದಾರೆ. ಕಾರ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಲಯದ ಉದ್ಘಾಟನೆ ಮತ್ತು ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆಯ ಕಾರ್ಯಕ್ರಮ ಎ.19ರಂದು ಬೆಳಿಗ್ಗೆ 10:30ಕ್ಕೆ ಕಾರ್ಕಳದ ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ […]