ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಟಾಟಾ ಹೊಸ ಕ್ರಾಂತಿ: ‘ಇಂಟ್ರಾ ಇವಿ’ ಪಿಕಪ್ ₹11.95 ಲಕ್ಷಕ್ಕೆ ಲಾಂಚ್
ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್ Tata Motors ತನ್ನ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಪೋರ್ಟ್‌ಫೋಲಿಯೋವನ್ನು ಮತ್ತಷ್ಟು ವಿಸ್ತರಿಸುತ್ತಾ, ನೂತನ ‘ಟಾಟಾ ಇಂಟ್ರಾ ಇವಿ’ ಪಿಕಪ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ವಾಹನದ ಆರಂಭಿಕ ಎಕ್ಸ್ ಶೋರೂಂ ಬೆಲೆ ₹11.95 ಲಕ್ಷವಾಗಿದ್ದು, ಇದು ಲಾಸ್ಟ್ ಮೈಲ್ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಹೊಸ ಆಯ್ಕೆಯಾಗಿ ಕಾಣಿಸಿಕೊಂಡಿದೆ. ವಾಣಿಜ್ಯ ಬಳಕೆಗೆ ಸೂಕ್ತ ಎಲೆಕ್ಟ್ರಿಕ್ ಪಿಕಪ್ ಟಾಟಾ ಇಂಟ್ರಾ ಇವಿ ಪಿಕಪ್, ಇಂಟ್ರಾ ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದು, ವಿಶೇಷವಾಗಿ ಸರಕು ಸಾಗಣೆದಾರರ […]
ಮಣಿಪಾಲ: ವ್ಯಕ್ತಿಯ ಅಪಹರಣ ಪ್ರಕರಣ- ನಾಲ್ಕು ಆರೋಪಿಗಳ ಬಂಧನ

ಉಡುಪಿ: ಮಣಿಪಾಲದಲ್ಲಿ ನಡೆದ ವ್ಯಕ್ತಿಯೊಬ್ಬರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ತೆಲಂಗಾಣ ತಾಂಡ್ಯ ರಮಾನಾಥ ಶ್ರೀನು (30),ಪಡಮಡಿ ತಾಂಡ್ಯದ ಮೋಹನ್ ರಮವಾತ್ (22), ದೇವರಕೊಂಡ ಚಿಂತಾಲ್ ತಾಂಡಾದ ಪರಮೇಶ್ (30), ಚಿಂತಾಲ್ ತಾಂಡಾದ ಪಾಲ್ಯ ವಿಜಯ್ (25) ಬಂಧಿತ ಆರೋಪಿಗಳು. ಮಣಿಪಾಲದಲ್ಲಿ ರಾಜೇಶ್ ಎಂಬವರನ್ನು ಕಾರಿನಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿ ಅಪಹರಣ ಮಾಡಲಾಗಿತ್ತು. ತೆಲಂಗಾಣದಲ್ಲಿರುವ ವ್ಯವಹಾರದ ವಿಚಾರವಾಗಿ ಅಪಹರಣ ಮಾಡಲಾಗಿದೆ ಎಂದು ಅವರ ಸಹೋದರ ಮಣಿಪಾಲ […]
ಇನ್ ಟಚ್ ಮಾರ್ಕೆಟಿಂಗ್ ಸೊಲ್ಯೂಷನ್ಸ್: ಡಿಜಿಟಲ್ ಮಾರ್ಕೆಟಿಂಗ್ ಹಾಗು ವಿವಿಧ ರೀತಿಯ ಜಾಹಿರಾತು ಸರ್ವಿಸ್ ಗಳಿಗೆ ಹೆಸರುವಾಸಿ

ಇಂದಿನ ಆನ್‌ಲೈನ್ ಯುಗದಲ್ಲಿ, ವ್ಯವಹಾರವನ್ನು ಬೆಳೆಸಲು ಡಿಜಿಟಲ್ ಮಾರ್ಕೆಟಿಂಗ್ ಅತ್ಯಂತ ಮುಖ್ಯ ಸಾಧನವಾಗಿದೆ. ಡಿಜಿಟಲ್ ಮಾರ್ಕೆಟಿಂಗ್ ಅಂದರೆ ಇಂಟರ್‌ನೆಟ್ ಮತ್ತು ಡಿಜಿಟ ಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಉತ್ಪನ್ನ ಅಥವಾ ಸೇವೆಯನ್ನು ಪ್ರಚಾರ ಮಾಡುವುದು. ಇದರಲ್ಲಿ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಎಂಜಿನ್ ಆಪ್ಟಿಮೈಸೇಶನ್ (SEO), ಇಮೇಲ್ ಮಾರ್ಕೆಟಿಂಗ್, ಕಂಟೆಂಟ್ ಮಾರ್ಕೆಟಿಂಗ್, ಹಾಗೂ ಪೇಡ್ ಜಾಹೀರಾತುಗಳು ಸೇರಿವೆ.ಡಿಜಿಟಲ್ ಮಾರ್ಕೆಟಿಂಗ್‌ನ ಪ್ರಮುಖ ಉಪಯೋಗಗಳು:ಕಡಿಮೆ ವೆಚ್ಚದಲ್ಲಿ ಪ್ರಚಾರ – ಪಾರಂಪರಿಕ ಜಾಹೀರಾತಿಗೆ ಹೋಲಿಸಿದರೆ ಕಡಿಮೆ ವೆಚ್ಚ.ಲಕ್ಷ್ಮೀತ ಪ್ರೇಕ್ಷಕರಿಗೆ ತಲುಪುವುದು – ನೀವು […]
ಹುಲಿಕಲ್ ಘಾಟ್‌ನಲ್ಲಿ ಮತ್ತೆ ಭೂಕುಸಿತ: ತೀರ್ಥಹಳ್ಳಿ–ಕುಂದಾಪುರ ರಾಜ್ಯ ಹೆದ್ದಾರಿ ಸಂಚಾರ ನಿಷೇಧ

ತೀರ್ಥಹಳ್ಳಿ: ಭೂಕುಸಿತ ಸಂಭವಿಸಿದ ಹಿನ್ನೆಲೆ ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ Tirthahalli–Kundapura State Highwayನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶದಂತೆ ಈ ನಿರ್ಬಂಧ ತಕ್ಷಣದಿಂದ ಜಾರಿಗೆ ಬಂದಿದೆ ಮತ್ತು ರಸ್ತೆ ಸುರಕ್ಷತಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮುಂದುವರಿಯಲಿದೆ. ಭೂಕುಸಿತದಿಂದ ಹೆಚ್ಚಿದ ಅಪಾಯ ಹುಲಿಕಲ್ ಘಾಟ್ ಪ್ರದೇಶದಲ್ಲಿ ಸುಮಾರು 5 ಅಡಿ ಅಗಲದ ಭೂಕುಸಿತ ಸಂಭವಿಸಿದ್ದು, ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಈ ಕಾರಣದಿಂದಾಗಿ ಎಲ್ಲ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. […]
ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ

ಫೋಟೋ ಕೃಪೆ : ಪ್ರಥಮ್ ಕಾಮತ್ ಉಡುಪಿ: ತಿರುಪತಿ ತಿರುಮಲ ದೇವಸ್ಥಾನ ಸಮಿತಿ ವತಿಯಿಂದ ಕೆ.ಕೃಷ್ಣಮೋಹನ್ ಪೈ ಯುಎಸ್ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರಿಂದ ಕಟಪಾಡಿಯಲ್ಲಿ ಶನಿವಾರ ಎಸ್‌ವಿ ಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಕಟಪಾಡಿ ಪೇಟೆಯಿಂದ ಕಲ್ಯಾಣ ಮಂಟಪದ ವರೆಗೆ ಶೋಭಾಯಾತ್ರೆಯಲ್ಲಿ ಬಂದ ದೇವರನ್ನು ತಿರುಪತಿಯಿಂದಲೇ ಬಂದ ವೈದಿಕ ವೃಂದವರ ನೇತೃತ್ವ ದಲ್ಲಿ ಕಲ್ಯಾಣ ಮಂಟಪದಲ್ಲಿ ಸರ್ವಾಲಂಕಾರ ಪೂರ್ವಕ ಸ್ಥಾಪಿಸಿ, […]