ಮೂಡ್ಲಕಟ್ಟೆ ಐ.ಎಂ.ಜೆ ಸಂಸ್ಥೆಯಲ್ಲಿ ಸಂಭ್ರಮದ ‘ಸಂಸ್ಥಾಪಕರ ದಿನಾಚರಣೆ’

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಪ್ರತಿಷ್ಠಿತ ಐ.ಎಂ.ಜೆ (IMJ) ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶುಕ್ರವಾರದಂದು ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ದಿವಂಗತ ಐ.ಎಂ. ಜಯರಾಮ ಶೆಟ್ಟಿ ಅವರ ದೂರದೃಷ್ಟಿಯ ಫಲವಾಗಿ 2004ರಲ್ಲಿ ‘ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (MITK) ಉದಯಿಸಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಿಗಬೇಕೆಂಬ ಅವರ ಕನಸು ಇಂದು ಐ.ಎಂ.ಜೆ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದೆ. […]
ಉಡುಪಿ: ದೆಂದೂರುಕಟ್ಟೆ ಮನೋಜ್ ಬಾರ್ ಮಾಲೀಕ, ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷ ಸಕಾರಾಮ್ ಶೆಟ್ಟಿ ನಿಧನ

ಉಡುಪಿ: ಉದ್ಯಮಿ, ದೆಂದೂರುಕಟ್ಟೆ ಮನೋಜ್ ಬಾರ್ ಮಾಲೀಕ, ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷ ಸಕಾರಾಮ್ ಶೆಟ್ಟಿ(65) ಅಲ್ಪಕಾಲದ ಅಸೌಖ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ದೊಂದೂರುಕಟ್ಟೆ, ಮಣಿಪುರ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಕ್ರೀಡಾ ಪ್ರೋತ್ಸಾಹಕರಾಗಿ ತನ್ನನ್ನು ತಾನು ತೊಡಗಿಸಿಕೊಂಡ ಸಕಾರಾಮ್ ಶೆಟ್ಟಿ ಅವರು ಕೊಡುಗೈ ದಾನಿಯಾಗಿದ್ದರು. ದೆಂದೂರುಕಟ್ಟೆಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಖಾಸಗಿ ಬಸ್ ಮತ್ತು ಪೆಟ್ರೋಲ್ ಪಂಪ್ ಮಾಲಕರಾಗಿ, ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ ದುಡಿದಿದ್ದರು. ಮೃತರು ಪತ್ನಿ ಓರ್ವ ಪುತ್ರ, […]
ಮಣಿಪಾಲ MSDC ಯಲ್ಲಿಏ.20 ರಿಂದ ರೆಸಿನ್ ಆರ್ಟ್ ಸಮ್ಮರ್ ಕ್ಯಾಂಪ್: ಇಲ್ಲಿದೆ ಕ್ರಿಯಾಶೀಲತೆಗೆ ವೇದಿಕೆ

ಉಡುಪಿ: Manipal Skill Development Center ವತಿಯಿಂದ ಏಪ್ರಿಲ್ 20ರಿಂದ 24ರವರೆಗೆ ರೆಸಿನ್ ಆರ್ಟ್ ಸಮರ್ ಕ್ಯಾಂಪ್‌ನ್ನು ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ತರಗತಿಗಳು ನಡೆಯಲಿವೆ. ಈ ಶಿಬಿರದಲ್ಲಿ ಭಾಗವಹಿಸುವವರು coasters, ocean art, bookmark ಹಾಗೂ key chain ಮೊದಲಾದ ರೆಸಿನ್ ಕಲಾಕೃತಿಗಳನ್ನು ತಯಾರಿಸುವ ವಿಧಾನವನ್ನು ಕಲಿಯಲಿದ್ದಾರೆ. ಎಲ್ಲಾ ಅಗತ್ಯ ವಸ್ತುಗಳನ್ನು ಸಂಸ್ಥೆಯೇ ಒದಗಿಸಲಿದೆ. ಶಿಬಿರದಲ್ಲಿ ಭಾಗವಹಿಸಲು ಕನಿಷ್ಠ 14 ವರ್ಷ ವಯಸ್ಸು ಅಗತ್ಯವಾಗಿದ್ದು, ಪ್ರತಿ ಭಾಗವಹಿಸುವವರಿಂದ ₹2000 ಶುಲ್ಕವನ್ನು ನಿಗದಿಪಡಿಸಲಾಗಿದೆ. ಆಸಕ್ತರು […]
ಉಡುಪಿ: ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನಲ್ಲಿ ಏ.18 ರಂದು ಉದ್ಯೋಗ ಕೌನ್ಸಿಲಿಂಗ್: ಇಲ್ಲಿ ಸಿಗುತ್ತೆ ಶೈಕ್ಷಣಿಕ, ಉದ್ಯೋಗ ಜಗತ್ತಿನ ಕುರಿತು ಮಾರ್ಗದರ್ಶನ

ಉಡುಪಿ: ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು (ಯುಪಿಎಂಸಿ), ಉಡುಪಿ ವತಿಯಿಂದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ವಿಶೇಷ “Career Counselling” ಕಾರ್ಯಕ್ರಮವನ್ನು ಏಪ್ರಿಲ್ 18 ರಂದು ಬೆಳಿಗ್ಗೆ 9:30ರಿಂದ ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ವಿ ರೀಚ್ ಅಕಾಡೆಮೆ V Reach Academy, ಉಡುಪಿ ವತಿಯಿಂದ ನಡೆಸಲಾಗುತ್ತಿದ್ದು, Chartered Accountancy (CA), Company Secretary (CS) ಮತ್ತು Cost and Management Accounting (CMA) ಕ್ಷೇತ್ರಗಳಲ್ಲಿ ವೃತ್ತಿ […]
ಇರಾನ್–ಅಮೆರಿಕಾ ಸಂಘರ್ಷ: ಕುವೈತ್‌ನಲ್ಲಿ ಸಿಲುಕಿದ್ದ 181 ಕನ್ನಡಿಗರು ಮಂಗಳೂರಿಗೆ ಸುರಕ್ಷಿತ ಆಗಮನ

ಮಂಗಳೂರು: ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಗಲ್ಪ್ ಪ್ರದೇಶದಲ್ಲಿ ಉಂಟಾದ ವಿಮಾನ ಸಂಚಾರ ವ್ಯತ್ಯಯದ ನಡುವೆ ಕುವೈತ್‌ನಲ್ಲಿ ಸಿಲುಕಿದ್ದ ಕನ್ನಡಿಗರಿಗೆ ಕೊನೆಗೂ ನೆರವು ದೊರಕಿದೆ. ವಿಶೇಷ ವಿಮಾನದ ಮೂಲಕ ಒಟ್ಟು 181 ಮಂದಿ ಪ್ರಯಾಣಿಕರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ವಿಶೇಷ ವಿಮಾನದಿಂದ ರಕ್ಷಣಾ ಕಾರ್ಯಾಚರಣೆ ಕುವೈತ್ ಮೂಲದ ವಿಮಾನಯಾನ ಸಂಸ್ಥೆ Jazeera Airways ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಿ, ಪ್ರಯಾಣಿಕರನ್ನು ಕುವೈತ್‌ನಿಂದ ಸೌದಿ ಅರೇಬಿಯಾದ ದಮ್ಮಾಮ್ ಮೂಲಕ ಮಂಗಳೂರಿಗೆ ತಲುಪಿಸಿತು. […]