ಚಿನ್ನ ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ – ಇಲ್ಲಿದೆ ಚಿನ್ನ-ಬೆಳ್ಳಿ ದರಗಳ ಮಾಹಿತಿ

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಮತ್ತು ವಿಶ್ವದಾದ್ಯಂತ ತೈಲ ಬೆಲೆ ಏರಿಕೆಯಿಂದಾಗಿ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಕೆ ಭಯವಿತ್ತು. ಆದರೆ, ಈ ವಾರದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆಯನ್ನು ಕಂಡಿದೆ. ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ. ಇಂದಿನ ಚಿನ್ನದ ಬೆಲೆ 10 ಗ್ರಾಂ ₹1,49,840 (₹820 ಇಳಿಕೆ), 1 ಗ್ರಾಂ ಬೆಲೆ ₹14,984 (₹82 ಇಳಿಕೆ) 10 ಗ್ರಾಂ ಬೆಲೆ ₹1,37,350 (₹750 ಇಳಿಕೆ) 1 ಗ್ರಾಂ ₹13,735 (₹75 ಇಳಿಕೆ) ಬೆಳ್ಳಿಯ ಬೆಲೆ ಬೆಳ್ಳಿ ಬೆಲೆ […]

ಗ್ಯಾಸ್ ಸಿಲಿಂಡರ್ ಕನೆಕ್ಷನ್ ತಗೋಳೋಕೆ ನಿಯಮ ಬದಲು. ಈಗ ಸುಲಭದಲ್ಲಿ 5 ಕೆಜಿ ಸಿಲಿಂಡರ್ ಪಡೀಬೋದು… ಇಲ್ಲಿದೆ ಸರಳ ವಿಧಾನ

ಪಶ್ಚಿಮ ಏಷ್ಯಾದ ಯುದ್ಧದ ತೀವ್ರತೆ ಮತ್ತು ಇಂಧನ ಪೂರೈಕೆಯಲ್ಲಿ ಉಂಟಾದ ಅಡಚಣೆಗಳ ನಡುವೆಯೂ, ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಮಹತ್ವದ ಸಡಿಲಿಕೆ ನೀಡಿದೆ. ಈಗ ದೇಶಾದ್ಯಂತ ವಿಳಾಸದ ಪುರಾವೆ ಇಲ್ಲದಿದ್ದರೂ 5 ಕೆಜಿ ತೂಕದ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸುಲಭವಾಗಿ ಖರೀದಿಸಬಹುದು. ಈ ಸೌಲಭ್ಯ ಪಡೆಯಲು ಕೇವಲ ಒಂದು ಅಧಿಕೃತ ಗುರುತಿನ ಚೀಟಿ ಸಾಕು. ವಲಸೆ ಕಾರ್ಮಿಕರು, ಬಾಡಿಗೆ ಮನೆಯಲ್ಲಿರುವವರಿಗೆ ಸಹಾಯ ಇತ್ತೀಚಿನ ದಿನಗಳಲ್ಲಿ ಈ 5 ಕೆಜಿ ಸಿಲಿಂಡರ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸರ್ಕಾರವೂ ಜನರ […]

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿದೆ ಉದ್ಯೋಗಾವಕಾಶ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಸಂಬಂಧದಲ್ಲಿ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಈ ಕೆಳಕಂಡ ಜಿಲ್ಲೆಗಳಲ್ಲಿ ಓಂಬುಡ್ಸ್‌ ಪರ್ಸನ್ವರವರ ಹುದ್ದೆಗಳನ್ನು ಆಯ್ಕೆ ಮೂಲಕ ತುಂಬಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಓಂಬುಡ್‌ಪರ್ಸನ್ಸ್ ಹುದ್ದೆ ಖಾಲಿಯಿರುವ / ಖಾಲಿಯಾಗಲಿರುವ ಜಿಲ್ಲೆಗಳು ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ಕೋಲಾರ, ಮೈಸೂರು ಮತ್ತು ಶಿವಮೊಗ್ಗ. ಅರ್ಹತೆಗಳು ಈ ಕೆಳಕಂಡ ಯಾವುದಾದರೊಂದು ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವಾನುಭವ ಹೊಂದಿರಬೇಕಾಗಿರುತ್ತದೆ. […]

ಕಾರ್ಕಳ ಕ್ರೈಸ್ಟಿಂಗ್ ಪದವಿಪೂರ್ವ ಕಾಲೇಜಿಗೆ ರಜತ ಸಂಭ್ರಮ

ಕಾರ್ಕಳ: ಕಾರ್ಕಳ ನಗರ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿದ್ದುಶಿಸ್ತು, ಗುಣಮಟ್ಟ, ಚಟುವಟಿಕಾ ಪೂರ್ಣ ಜ್ಞಾನಾಧಾರಿತ ಶಿಕ್ಷಣ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಸಿದ್ಧಿಯಾಗಿರುವ ಸಂಸ್ಥೆ ಕ್ರೈಸ್ಟಿಂಗ್ ಪದವಿಪೂರ್ವ ಕಾಲೇಜು. ಅತೀ ಕಡಿಮೆ ಶುಲ್ಕ ಹಾಗೂ ಅಂಕಗಳ ಮಿತಿ ಇಲ್ಲದೆ ದಾಖಲಾತಿಯನ್ನುಅಳವಡಿಸಿಕೊಂಡಿರುವ ವಿದ್ಯಾರ್ಥಿಸ್ನೇಹಿಯಾಗಿರುವ ಕ್ರೈಸ್ಟಿಂಗ್ ಪದವಿಪೂರ್ವ ಕಾಲೇಜು ತನ್ನ ಶೈಕ್ಷಣಿಕ ಸೇವಾ ಪಯಣದಲ್ಲಿ 25 ವರ್ಷಗಳ ಸಾರ್ಥಕ ಮೈಲುಗಲ್ಲನ್ನು ತಲುಪಿದೆ. 25 ವರ್ಷಗಳ ಸಾರ್ಥಕ-ಸಾಧಕ ಪಯಣವನ್ನು ಪೂರ್ಣಗೊಳಿಸಿರುವ ಈಸಂದರ್ಭದಲ್ಲಿ ಸಂಸ್ಥೆಗೆ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಂದರ ಹಾಗೂ ಬೃಹತ್ ಕಾಲೇಜು […]

ಆಧುನಿಕ ಸೌಲಭ್ಯಗಳೊಂದಿಗೆ ಹವಾನಿಯಂತ್ರಿತ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಬೆಳ್ಳಂಪಳ್ಳಿ ಶಾಖೆ ಉದ್ಘಾಟನೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಬೆಳ್ಳಂಪಳ್ಳಿ ಶಾಖೆಯು ಹವಾನಿಯಂತ್ರಿತವಾಗಿ ನವೀಕೃತಗೊಂಡಿದ್ದು, ಉದ್ಘಾಟನಾ ಸಮಾರಂಭ ದಿ. 08-04-2026, ಬುಧವಾರ ದಂದು ಬೆಳಗ್ಗೆ 11 ಗಂಟೆಗೆ ನೆರವೇರಲಿದೆ. ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಆನೆಗುಂದಿ ಮಹಾಸಂಸ್ಥಾನ ಹಾಗೂ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿಗಳವರು, ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ಅರೆಮಾದನಹಳ್ಳಿ ಇವರಿಂದ ಉದ್ಘಾಟನೆ, ದೀಪ ಪ್ರಜ್ವಲನೆ ಮತ್ತು ಆಶೀರ್ವಚನ ನೆರವೇರಲಿದೆ. […]