ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಸಂಬಂಧದಲ್ಲಿ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಈ ಕೆಳಕಂಡ ಜಿಲ್ಲೆಗಳಲ್ಲಿ ಓಂಬುಡ್ಸ್ ಪರ್ಸನ್ವರವರ ಹುದ್ದೆಗಳನ್ನು ಆಯ್ಕೆ ಮೂಲಕ ತುಂಬಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಓಂಬುಡ್‌ಪರ್ಸನ್ಸ್ ಹುದ್ದೆ ಖಾಲಿಯಿರುವ / ಖಾಲಿಯಾಗಲಿರುವ ಜಿಲ್ಲೆಗಳು
ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಕೊಪ್ಪಳ, ಕೋಲಾರ, ಮೈಸೂರು ಮತ್ತು ಶಿವಮೊಗ್ಗ.
ಅರ್ಹತೆಗಳು
ಈ ಕೆಳಕಂಡ ಯಾವುದಾದರೊಂದು ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವಾನುಭವ ಹೊಂದಿರಬೇಕಾಗಿರುತ್ತದೆ.
ಅ) ಸಾರ್ವಜನಿಕ ಆಡಳಿತ
ಆ) ಕಾನೂನು
ಇ) ಶೈಕ್ಷಣಿಕ ಕ್ಷೇತ್ರ
ಈ) ಸಮಾಜ ಸೇವೆ
ಉ) ಮ್ಯಾನೇಜ್‌ಮೆಂಟ್
ಸಾರ್ವಜನಿಕರೊಂದಿಗೆ/ಸಮುದಾಯದ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವು ಒಂದು ಕಡ್ಡಾಯ ಅರ್ಹತೆಯಾಗಿರುತ್ತದೆ.
ಜಿಲ್ಲಾ ಮಟ್ಟದಲ್ಲಿ ಓಂಬುಡ್ ಪರ್ಸನ್‌ಗಳಾಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ವ್ಯಕ್ತಿಗಳು ಇಲಾಖೆಯ ವೆಬ್‌ಸೈಟ್ www.rdpr.karnataka.gov.in ನಲ್ಲಿ ನಿಗಧಿತ ಅರ್ಜಿ ನಮೂನೆಯೊಂದಿಗೆ ಇತರ ದಾಖಲೆಗಳನ್ನು ದಿನಾಂಕ 24.04.2026 ರಂದು 5.30 ರೊಳಗಾಗಿ ತಲುಪುವಂತೆ ಖುದ್ದಾಗಿ/ಅಂಚೆ ಮೂಲಕ ಆಯುಕ್ತರು ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 5ನೇ ಮಹಡಿ, ಪ್ಲಾಟ್ ನಂ.1243, ಕೆ.ಎಸ್.ಐ.ಐ.ಡಿ.ಸಿ.ಕಟ್ಟಡ, ಐ.ಟಿ. ಪಾರ್ಕ್, ಸೌತ್ ಬ್ಲಾಕ್, ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಟ್, ಬೆಂಗಳೂರು-560010. ಇವರಿಗೆ ಸಲ್ಲಿಸುವುದು.

















