ಉಡುಪಿ: ಹಿರಿಯಡಕದಲ್ಲಿ ‘ಶ್ಯಾಮಿಲಿ ಸ್ಪ್ರಿಂಗ್ಸ್’ ಲಕ್ಸುರಿ ರೆಸಾರ್ಟ್ ಅದ್ಧೂರಿ ಉದ್ಘಾಟನೆ

ಉಡುಪಿ: ಹಿರಿಯಡಕ ರಾಷ್ಟ್ರೀಯ ಹೆದ್ದಾರಿ (169 ಎ) ಸಮೀಪ 5 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಉಡುಪಿ ಶ್ಯಾಮಿಲಿ ಸಮೂಹ ಸಂಸ್ಥೆಗಳ ಸಹಸಂಸ್ಥೆ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ ಮಂಗಳವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಜಿ. ಶಂಕರ್ ನೇತೃತ್ವದಲ್ಲಿ ಕುಟುಂಬಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸುವ ಮೂಲಕ ನೂತನ ರೆಸಾರ್ಟ್ ಅನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಯಶಪಾಲ್ ಎ. ಸುವರ್ಣ, […]
ಅಂತ್ಯವಾಗಲಿದೆಯೇ ಇರಾನ್- ಅಮೇರಿಕಾ, ಇಸ್ರೇಲ್ ಯುದ್ಧ? ಮಹತ್ವದ ನಿರ್ಧಾರ ಬಿಚ್ಚಿಟ್ಟ ಇರಾನ್ ಅಧ್ಯಕ್ಷ!

ಇರಾನ್ ದೇಶದ ವಿರುದ್ಧ ಜಾಗತಿಕ ಮಟ್ಟದಲ್ಲಿ ಅಮೇರಿಕಾ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧ ಇರಾನ್ ಅಧ್ಯಕ್ಷರ ಈ ಒಂದು ನಿರ್ಧಾರದಿಂದ ಆತಂಕಕ್ಕೀಡುಮಾಡಿದ್ದು, ಜಗತ್ತಿನ ಉಳಿವು-ಅಳಿವಿನ ಪ್ರಶ್ನೆ ಎದುರಾಗಿದೆ. ಟ್ರಂಪ್ ನೀಡಿದ್ದ ಗಡುವು ಮುಗಿಯುತ್ತಾ ಬಂದಂತೆ ಇರಾನ್ ಅಧ್ಯಕ್ಷ ಅಪಾಯಕಾರಿ ನಿಲುವು ತಾಳಿದ್ದಾರೆ. ಪ್ರಾಣ ತ್ಯಾಗಕ್ಕೆ ಸಿದ್ಧ ಎಂದ ಇರಾನ್ ಅಧ್ಯಕ್ಷ “ನಾನು ಸೇರಿದಂತೆ 14 ಮಿಲಿಯನ್‌ಗಿಂತ ಹೆಚ್ಚು ಇರಾನಿಯನ್ನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ, 14 ಮಿಲಿಯನ್‌ಗಿಂತ ಹೆಚ್ಚು ಹೆಮ್ಮೆಯ ಇರಾನಿಯನ್ನರು ಇರಾನ್ ರಕ್ಷಣೆಗಾಗಿ ತಮ್ಮ […]
ಉಡುಪಿ: ಹಿರಿಯ ಜಾನಪದ ಕಲಾವಿದ, ಗಾಯಕ ಡಾ.ಗಣೇಶ್ ಗಂಗೊಳ್ಳಿ ನಿಧನ

ಉಡುಪಿ: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ (64) ಅವರು ಮಂಗಳವಾರ ನಿಧನರಾದರು. ಕಳೆದ ರಾತ್ರಿ ಸಮಾರಂಭವೊಂದರಲ್ಲಿ ಗಾಯಕರಾಗಿ ಭಾಗವಹಿಸಿ ಮನೆಗೆ ಹಿಂದಿರುಗಿದ್ದ ಗಣೇಶ ಗಂಗೊಳ್ಳಿ ಅವರು ಏಕಾಏಕಿಯಾಗಿ ಕುಸಿದು ಬಿದ್ದಿದ್ದರು. ಬಳಿಕ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಬ್ರೈನ್ ಹೆಮರೇಜ್ ತುತ್ತಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮೃತರು ಪತ್ನಿ, ಇಬ್ನರು ಮಕ್ಕಳನ್ನು ಅಗಲಿದ್ದಾರೆ.
MSDC ವತಿಯಿಂದ ಆರ್ಟ್ & ಕ್ರಾಫ್ಟ್ ಕ್ಯಾಂಪ್: ಸೃಜನಶೀಲತೆಗೆ ಇಲ್ಲಿದೆ ಸೂಪರ್ ವೇದಿಕೆ

ಉಡುಪಿ: ಮಣಿಪಾಲ Manipal Skill Development Center ವತಿಯಿಂದ ಏಪ್ರಿಲ್ 20 ರಿಂದ ಏಪ್ರಿಲ್ 30ರವರೆಗೆ “ಆರ್ಟ್ & ಕ್ರಾಫ್ಟ್ ಕ್ಯಾಂಪ್” ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ನಡೆಯುವ ಈ ಶಿಬಿರದಲ್ಲಿ ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುವ ವಿವಿಧ ಚಟುವಟಿಕೆಗಳು ಇರಲಿವೆ. ಶಿಬಿರದಲ್ಲಿ ಮೂಲ ಚಿತ್ರಕಲೆ, ಪೆನ್ಸಿಲ್ ಶೇಡಿಂಗ್, ಕ್ಲೇ ಮಾದರಿಕರಣ, ಲ್ಯಾಂಡ್‌ಸ್ಕೇಪ್ ಡ್ರಾಯಿಂಗ್, ಪೇಂಟಿಂಗ್ ಹಾಗೂ ಹ್ಯಾಂಡ್‌ಕ್ರಾಫ್ಟ್ ತರಬೇತಿಗಳು ನೀಡಲಾಗುತ್ತದೆ. 10 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನವರಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು, ಎಲ್ಲಾ […]
ಸುಧಾರಾಣಿಗೆ ಇಷ್ಟವಾಗಿದ್ರೇ ಶಿವಣ್ಣ? ಸುಳ್ಳು ಸುದ್ದಿ ಹಬ್ಬಿಸುವವರಿಗೆ ಸುಧಾರಾಣಿ ಖಡಕ್ ವಾರ್ನಿಂಗ್

ಸ್ಯಾಂಡಲ್ ವುಡ್ ಇತಿಹಾಸದಲ್ಲಿ ʻಆನಂದ್ʼ, ʻಮನ ಮೆಚ್ಚಿದ ಹುಡುಗಿʼ, ʻರಣರಂಗʼ, ʻಸಂಯುಕ್ತಾʼ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ಈ ಜೋಡಿ ಶಿವರಾಜ್‌ಕುಮಾರ್ ಮತ್ತು ಸುಧಾರಾಣಿ ಅವರದ್ದು. ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಜೋಡಿ. ಇದೀಗ ಈ ಸಿನಿಜೋಡಿಗಳ ಬಗ್ಗೆ ಲೈಕ್ಸ್ ಮತ್ತು ವ್ಹೀವ್ಸ್‌ಗಾಗಿ ಕೆಲ ಸೋಶಿಯಲ್ ಮೀಡಿಯಾ ಪೇಜ್‌ಗಳು ಅತಿರೇಕದ ವರ್ತನೆ ತೋರಿದ್ದಾರೆ. ಹೀಗಿದೆ ಸೋಷಿಯಲ್ ಮೀಡಿಯಾ ಪೋಸ್ಟ್ ನಟಿ ಸುಧಾರಾಣಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್ ನಲ್ಲಿ “ಶಿವರಾಜ್‌ಕುಮಾರ್ ಅವರನ್ನ ಪ್ರೀತಿಸಿದ್ದೆ. […]