ಉಡುಪಿ: ಆತ್ರಾಡಿ ಸವ್ಯ ಸಾಚಿ ಶಿಶುಮಂದಿರದ ಸಂಭ್ರಮದ ವಾರ್ಷಿಕೋತ್ಸವ.

ಉಡುಪಿ: ಸರ್ವ ಸಾಚಿ ಶಿಶು ಮಂದಿರ ಆತ್ರಾಡಿ ಇದರ ವಾರ್ಷಿಕೋತ್ಸವವು ಪರ್ಕಳ ಪ್ರೌಡ ಶಾಲಾ ಸಭಾಂಗಣದಲ್ಲಿ ಶ್ರೀ ಭವಾನಿ ಶಂಕರ ದೇವಸ್ಥಾನ ಭೈರoಜೆಯ ಆಡಳಿತ ಮೊಕ್ತೇಸರರಾದ ದೇವೇಂದ್ರ ವಾಗ್ಲೆ ಇವರ ಅದ್ಯಕ್ಷತೆಯಲ್ಲಿ ಜರಗಿತು. ಶಿಶು ಮಂದಿರದ ಅಧ್ಯಕ್ಷರಾದ ಕೃಷ್ಣ ಮೂರ್ತಿ ಪ್ರಭುರವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತಾಡುತ್ತ ಶಿಶು ಮಂದಿರರಾದ 15 ವರ್ಷಗಳ ಇತಿಹಾಸವನ್ನು ತಿಳಿಸುತ್ತಾ ಆರಂಭದಿಂದ ಇಂದಿನ ವರೆಗೆ ಸಹಕರಿಸಿದ ಮಹನೀಯರನ್ನು ಪ್ರಶಂಸಿದರು. ಪುಟಾಣಿಗಳಾದ ಅಶ್ವ ಮತ್ತು ಶ್ಲೋಕ್ ರವರು ದೇಶ ಭಕ್ತಿ ಗೀತೆಯ ಪ್ರಾರ್ಥನೆ […]
ಉಡುಪಿ: ಏ.10 ರಂದು ನೇರ ಸಂದರ್ಶನ

ಉಡುಪಿ: ನಗರದ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ ಟರ‍್ಸ್ನ ಹರ್ಷ ರೀಟೇಲ್ ಪ್ರೈ.ಲಿ ಇಲ್ಲಿ ಏಪ್ರಿಲ್ 10 ರಂದು ಬೆಳಗ್ಗೆ 10.30 ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ -ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್‌ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ ಉಡುಪಿ ಮೊ.ನಂ: 8105618291, […]
ಮೃತ ವ್ಯಕ್ತಿಯ ವಾರಸುದಾರರಿಗೆ ಸೂಚನೆ

ಉಡುಪಿ: ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ 70 ವರ್ಷದ ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ದೂ.ಸಂಖ್ಯೆ: 0820-2520555, ಮೊ.ನಂ: 9449827833 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಪ್ರಸ್ತುತ ಬೇಸಿಗೆಯ ಹಿನ್ನೆಲೆ, ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದ್ದು, ಶಾಖದ ಹೊಡೆತದಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಹೊರಡಿಸಲಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. […]
ಉಡುಪಿ: ಬುಸಿನೆಸ್ ಡೆವಲಪ್ಮೆಂಟ್ ಆಫೀಸರ್ ಹಾಗೂ ಅಕೌಂಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಬುಸಿನೆಸ್ ಡೆವಲಪ್ಮೆಂಟ್ ಆಫೀಸರ್ ಹಾಗೂ ಅಕೌಂಟ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. 1.Business development officer (male) Vacancy: 02 Qualification: B.Com/ MBA Experience: Fresher/Experienced Salary: 18000+ 2500 TA+ Incentive 2.Account Assistant (female) Vacancy: 02 Qualification: B.Com Experience: Fresher/ Experienced Salary: Best in industry ಸ್ಥಳ: ಉಡುಪಿ, ಉಡುಪಿ ಜಿಲ್ಲೆಯ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಕಂಪನಿ: ಪರಶುಭೂಮಿ ಚಿಟ್ಸ್ ಪ್ರೈ.ಲಿ. ನಿಮ್ಮ ರೆಸ್ಯೂಮ್ ಅನ್ನು […]