ಉಡುಪಿ: ಸರ್ವ ಸಾಚಿ ಶಿಶು ಮಂದಿರ ಆತ್ರಾಡಿ ಇದರ ವಾರ್ಷಿಕೋತ್ಸವವು ಪರ್ಕಳ ಪ್ರೌಡ ಶಾಲಾ ಸಭಾಂಗಣದಲ್ಲಿ ಶ್ರೀ ಭವಾನಿ ಶಂಕರ ದೇವಸ್ಥಾನ ಭೈರoಜೆಯ ಆಡಳಿತ ಮೊಕ್ತೇಸರರಾದ ದೇವೇಂದ್ರ ವಾಗ್ಲೆ ಇವರ ಅದ್ಯಕ್ಷತೆಯಲ್ಲಿ ಜರಗಿತು.
ಶಿಶು ಮಂದಿರದ ಅಧ್ಯಕ್ಷರಾದ ಕೃಷ್ಣ ಮೂರ್ತಿ ಪ್ರಭುರವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತಾಡುತ್ತ ಶಿಶು ಮಂದಿರರಾದ 15 ವರ್ಷಗಳ ಇತಿಹಾಸವನ್ನು ತಿಳಿಸುತ್ತಾ ಆರಂಭದಿಂದ ಇಂದಿನ ವರೆಗೆ ಸಹಕರಿಸಿದ ಮಹನೀಯರನ್ನು ಪ್ರಶಂಸಿದರು.
ಪುಟಾಣಿಗಳಾದ ಅಶ್ವ ಮತ್ತು ಶ್ಲೋಕ್ ರವರು ದೇಶ ಭಕ್ತಿ ಗೀತೆಯ ಪ್ರಾರ್ಥನೆ ಮಾಡಿದರು. ಪುಟಾಣಿಗಳಾದ ನಿಧಿ ಮತ್ತು ವಿಷ್ಣು ರಾತ್ ರವರು ಶುಭಾಷಿತ ವನ್ನು ಕಂಠ ಪಾಠದಿಂದ ವಾಚಿಸಿದರು. ಮಾತಾಜಿ ಶ್ರೀಮತಿ ಅನಿತಾ ರವರ ಅರ್ಥಪೂರ್ಣ ವಾರ್ಷಿಕ ವರದಿ ನೆರೆದ ಸಭಿಕರ ಪ್ರಶಂಸೆಗೆ ಒಳಗಾಯಿತು.
ಮಕ್ಕಳ ಪೋಷಕರಾದ ಸುಬ್ರಾಯ ಕೃಷ್ಣ ಭಟ್, ಶ್ರೀ ನಿಧಿ ಮತ್ತು ಶ್ರೀ ರತ್ನಾಕರ್ ಶೆಟ್ಟಿ ಯವರು ತಮ್ಮ ಮಕ್ಕಳು ಸೇವಾ ಸಂಗಮಕ್ಕೆ ಸೇರಿದ ನಂತರ ಮನೆಗಳಲ್ಲಿ ಆಗಿರುವ ಪರಿವರ್ತನೆ ಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಶ್ರೀಮತಿ ಜ್ಯೋತಿ, ಶ್ರೀಮತಿ ದಿವ್ಯಾ, ಶ್ರೀಮತಿ ಸಂಗೀತ ರವರು ವಾಚಿಸಿದರು.
ಅತಿಥಿಗಳ ಪೂರ್ಣ ಪರಿಚಯವನ್ನು ಶ್ರೀಮತಿ ಶ್ರೀದೇವಿ ಮತ್ತು ಶ್ರೀಮತಿ ಅಖಿಲಾ ರವರು ಮಾಡಿದರು. ಮುಖ್ಯ ಅತಿಥಿ ಕುಂದಾಪುರ ಸೇವಾ ಸಂಗಮ (ರಿ )ಟ್ರಸ್ಟ್ ಇದರ ಸಂಚಾಲಕರಾದ ಡಾ. ವಿನಾಯಕ ಶೆಣೈ ಯವರು ಮಾತಾಡುತ್ತ ಶಿಶು ಮಂದಿರಕ್ಕೆ ಬರುವ ಮಕ್ಕಳು ದೇವರಿಗೆ – ತಂದೆ ತಾಯಿಯರಿಗೆ ನಮಸ್ಕಾರ ಮಾಡುವ ಮತ್ತು ಮನೆಗಳಲ್ಲಿ ದೇವರಿಗೆ ದೀಪವನ್ನು ಬೆಳಗಿಸುವಾಗ ನೇರವಾಗುವುದು ಮುಂತಾದ ಕಾರ್ಯಗಳಿಂದ ಮನೆ ಮನೆಗಳಲ್ಲಿ ಸಂಸ್ಕಾರ, ಸನಾತನ ಧರ್ಮದ ಪರಂಪರೆಯನ್ನು ಮುಂದುವರೆಸುವ ಪುಣ್ಯ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಮಕ್ಕಳಿಂದಲೇ ಧರ್ಮ, ದೇಶ ಉಳಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷರಾದ ದೇವೇಂದ್ರ ವಾಗ್ಲೆ ಯವರು ಮಾತಾಡುತ್ತ ಮನೆಗಳಲ್ಲಿ ತುಂಟಾಟ ಮಾಡುವ ಪುಟಾಣಿಗಳ ದೇಶ ಭಕ್ತಿ ಗೀತೆ ಮತ್ತು ಸಂಸ್ಕೃತ ಶ್ಲೋಕ, ಶುಭಾಷಿತ ಗಳ ಕಂಠ ಪಾಠವನ್ನು ಪ್ರಶಂಸೆ ಮಾಡುತ್ತ ಅವರನ್ನು ತಯಾರಿ ಮಾಡಿದ ಮಾತಾಜಿ ಯವರ ಶ್ರಮವನ್ನು ಮೆಚ್ಚುಗೆ ವ್ಯಕ್ತ ಪಡಿಸಿದರು ಮತ್ತು ಸನಾತನ ಸಂಸ್ಕೃತಿ ಯನ್ನು ಬಾಲ್ಯದಿಂದಲೇ ಕಳಿಸುವ ಸವ್ಯ ಸಾಚಿ ಶಿಶು ಮಂದಿರಕ್ಜೆ ಸರ್ವರೂ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಪರ್ಕಳ ಪ್ರೌಡ ಶಾಲಾ ಮುಖ್ಯ ಅಧ್ಯಾಪಕರಾದ ಮನೋಹರ್ ನಾಯಕ್ ರವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ನೀಡಿದರು.
ಪುಟಾಣಿ ಮಕ್ಕಳು, ಬಾಲ ಗೋಕುಲದ ಕಿಶೋರರು ಮತ್ತು ಶಿಶುಮಂದಿರದ ಪೋಷಕರಿಂದ ದೇಶ ಭಕ್ತಿ, ಸನಾತನ ಸಂಸ್ಕೃತಿ ಯನ್ನು ಬಿಂಬಿಸುವ ವಿವಿಧ ನೃತ್ಯಗಳು ನಡೆದವು.
ಕಾರ್ಯಕ್ರಮದ ಪೂರ್ಣ ನಿರ್ವಹಣೆಯನ್ನು ಸಂಪತ್ ಆಚಾರ್ಯ ಮತ್ತು ಶ್ರೀಮತಿ ಸುಪ್ರಭಾ ರವರು ಮಾಡಿದರು. ಕೊನೆಯಲ್ಲಿ ಲಕ್ಷ್ಮೀನಾರಾಯಣ ಅವರು ಸರ್ವರಿಗೂ ಧನ್ಯವಾದವನ್ನಿತ್ತರು.

















