ಜೀವನದಲ್ಲಿ ನಿಮ್ಮದೇ ಕಾರು ಬೇಕೆಂಬ ಕನಸು ಇದೆಯಾ? ₹10 ಲಕ್ಷದ ಕಾರನ್ನು ಕೇವಲ ₹2 ಲಕ್ಷಕ್ಕೆ ಕೊಳ್ಳುವ ಸುವರ್ಣಾವಕಾಶ—ಮಿಸ್ ಮಾಡಿಕೊಳ್ಳಬೇಡಿ!

ನಮ್ಮದೇ ಆದ ಸ್ವಂತ ಕಾರನ್ನು ಕೊಳ್ಳಬೇಕೆಂಬ ಕನಸು ಯಾರಿಗಿರಲ್ಲ ಹೇಳಿ. ಆದ್ರೆ ಹಲವರಿಗೆ ಇದು ಕೈಗೆಟುಕದ ಕನಸು. ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಲು ಆಗದಷ್ಟು ಹಣಕಾಸಿನ ಸಮಸ್ಯೆ ಮಧ್ಯದಲ್ಲೂ ಒಂದೊಳ್ಳೆ ಕಾರ್‌ ಖರೀದಿ ಮಾಡೋ ಆಸೆ ಇರುವವರಿಗೆ ಇಲ್ಲಿದೆ ಸುವರ್ಣಾವಕಾಶ ಭಾರತದಲ್ಲಿ, ಹಲವು ಸರ್ಕಾರಿ ಇಲಾಖೆಗಳು ಮತ್ತು ಬ್ಯಾಂಕುಗಳು ಕಾಲಕಾಲಕ್ಕೆ ಹಳೆಯ ಕಾರುಗಳನ್ನು ಹರಾಜು ಮೂಲಕ ಮಾರಾಟ ಮಾಡುತ್ತವೆ. ಈ ಹರಾಜುಗಳಲ್ಲಿ ಕಾರುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುವ ಕಾರಣ, ಲಾಭ ಗಳಿಸುವುದು ಅಲ್ಲ, ಬದಲಾಗಿ […]

ಉಡುಪಿ: ಪರ್ಕಳದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ನೂತನ ಆಡಿಟೋರಿಯಂ ಲೋಕಾರ್ಪಣಾ ಸಮಾರಂಭ.

ಉಡುಪಿ: ಜಿಲ್ಲೆಯ ಪರ್ಕಳದ ಹೆರ್ಗ ಗ್ರಾಮದಲ್ಲಿರುವ ನಾರಾಯಣಗುರು ರಸ್ತೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ವತಿಯಿಂದ ನೂತನವಾಗಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣಗುರು ಆಡಿಟೋರಿಯಂ ಇದರ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ಎ.5 ರಂದು ಜರುಗಿತು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಆಡಿಟೋರಿಯಂ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ದೊಡ್ಡ ಕೊಡುಗೆ ಅನ್ನುವ ರೀತಿಯಲ್ಲಿ ನಾರಾಯಣ ಗುರುಗಳ‌ ಹೆಸರಿನಲ್ಲಿ ನವೀಕೃತ ಸಭಾಭವನವನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಸಂಘವನ್ನು ಇನ್ನಷ್ಟು ಸಂಘಟಿತಗೊಳಿಸುವ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಯೋಜನೆ ಸಂಘದ್ದು […]

ಅಪಾಯಕಾರಿಯಾಗಿದೆ ಬೆಂಗಳೂರಿನ ಏರ್ ಕ್ವಾಲಿಟಿ; ಇಲ್ಲಿದೆ ಉಡುಪಿ, ಮಂಗಳೂರು ವಾಯು ಗುಣಮಟ್ಟದ ಡೀಟೈಲ್ಸ್

ಬೆಂಗಳೂರು, ಏಪ್ರಿಲ್ 06: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ವಾಯು ಗುಣಮಟ್ಟದಲ್ಲಿ ಏರಿಳಿತ ಕಂಡು ಬರುತ್ತಿದೆ. ಇಂದಿನ ಸ್ಥಿತಿಯಲ್ಲಿ ಬೆಳಗಾವಿ ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಏರ್ ಕ್ವಾಲಿಟಿಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ. ಆದರೆ, ಬೆಂಗಳೂರಿನ ವಾಯು ಗುಣಮಟ್ಟ ಇನ್ನೂ ಅಪಾಯಕಾರಿ ಮಟ್ಟದಲ್ಲಿಯೇ ಉಳಿದಿದ್ದು, ಇದರಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ AQI ಇಂದು […]

ಕ್ರಿಯೇಟಿವ್ ಸಂಸ್ಥೆಯ ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ

ಕಾರ್ಕಳ: 2026 -27ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ 90%ಕ್ಕಿಂತ ಅಧಿಕ ಅಂಕ ಗಳಿಸಿದ ಕಾರ್ಕಳದ ಸ್ಥಳೀಯ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನು ಸೇರಬಯಸುವುದಾದರೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೊಂಗಿರಣ ಯೋಜನೆಯಡಿಯಲ್ಲಿ ವಿಶೇಷ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಸಾನ್ವಿರಾವ್ ಎಂಬ ವಿದ್ಯಾರ್ಥಿನಿ 598 ಅಂಕಗಳನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಗುರುತಿಸಿಕೊಂಡಿರುವುದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಸಿಎ ಫೌಂಡೇಶನ್ […]

ಅಮಾಸೆಬೈಲು: ಗೂಡ್ಸ್ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ- ಮೂವರ ಬಂಧನ

ಉಡುಪಿ: ಬೆಂಗಾವಲು ಕಾರಿನೊಂದಿಗೆ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮಂದಿಯನ್ನ ಅಮಾಸೆಬೈಲು ಪೊಲೀಸರು ಎ.5ರಂದು ಬೆಳಗಿನ ಜಾವಾ ಹೊಸಂಗಡಿ ಚೆಕ್‌ ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ. ಬೆಳಗಾಂ ಜಿಲ್ಲೆಯ ರಾಮದುರ್ಗಾದ ಮುಸ್ತಾಕ್ ಹುಸೇನ್(29), ಸಲೀಂ ಹುಸೇನ್ ಸಾಬ್ ನದಾಫ್(33), ಕಂಡ್ಲೂರಿನ ನದೀಂ ಅಬ್ದುಲ್ ಖಾದರ್(34) ಬಂಧಿತ ಆರೋಪಿಗಳು. ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಚೆಕ್ ಪೋಸ್ಟ್ ಕಡೆಗೆ ಬರುತ್ತಿದ್ದ ವಾಹನವನ್ನು ತಡೆದು ತಾಪಸಣೆ ಮಾಡಿ ದಾಗ ಮೂರು ಎತ್ತು ಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಇದರಲ್ಲಿದ್ದ […]