ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರದಲ್ಲಿ ಎ.5 ರಿಂದ ಶ್ರೀ ಮನ್ಮಹಾರಥೋತ್ಸವದ ಸಂಭ್ರಮ: ಸಾವಿರಾರು ಭಕ್ತರ ವೈಭವದ ಸಂಗಮ

ಕುಂದಾಪುರ: ಕಮಲಶಿಲೆಯಲ್ಲಿ ನೆಲೆಗೊಂಡಿರುವ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಮನ್ಮಹಾರಥೋತ್ಸವವು ಏಪ್ರಿಲ್ 5ರಿಂದ 10 ರವರೆಗೆ ಭಕ್ತಿಭಾವದಿಂದ ನಡೆಯಲಿದೆ. ದೇವಾಲಯದ ಪ್ರಮುಖ ಉತ್ಸವವಾಗಿರುವ ಮಹಾರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.ಇದರಲ್ಲಿಯೇ ಮುಖ್ಯ ಆಕರ್ಷಣೆಯಾಗಿರುವ ರಥೋತ್ಸವವು ಏಪ್ರಿಲ್ 8ರಂದು ಜರುಗಲಿದ್ದು, ಈ ದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಸಾಧ್ಯತೆ ಇದೆ. ದೇವಾಲಯ ಆಡಳಿತ ಮಂಡಳಿ ಎಲ್ಲಾ ಭಕ್ತರನ್ನು ಉತ್ಸವದಲ್ಲಿ ಭಾಗವಹಿಸಿ […]
ಕಾರ್ಕಳ: ಸಂಚಾರ ಮಾರ್ಗಗಳನ್ನು ಬೇಕಾಬಿಟ್ಟಿ ಬದಲಿಸುವ ಖಾಸಗಿ ಬಸ್ ಗಳು, ಗೊಂದಲದಲ್ಲೇ ಕಾದು ಹೈರಾಣಾಗುವ ಪ್ರಯಾಣಿಕರು,ನಿದ್ರೆಯಲ್ಲಿದೆ ವ್ಯವಸ್ಥೆ

ಕಾರ್ಕಳ: ಕಾರ್ಕಳದಿಂದ ಉಡುಪಿಗೆ ಮತ್ತು ಹೆಬ್ರಿ ಶಿವಮೊಗ್ಗದತ್ತ ಸಂಚರಿಸುವ ಕೆಲವೊಂದು ಎಕ್ಸ್ ಪ್ರೆಸ್ ಬಸ್ ಗಳು ಬಸ್ಸು ನಿಲ್ದಾಣದಿಂದ ಮಾರ್ಕೆಟು ರಸ್ತೆಯಾಗಿ ಉಡುಪಿಗೆ ಸಂಚರಿಸುವ ಬದಲು ನಗರದ ಮುಖ್ಯ ರಸ್ತೆ ರಥಬೀದಿ ಮೂಲಕ ಸಂಚರಿಸಿ ಪ್ರತೀ ದಿನ ನಿಯಮವನ್ನು ಉಲ್ಲಂಘಿಸುತ್ತಿವೆ. ಉಡುಪಿ, ಹೆಬ್ರಿ ಮಾರ್ಗದಲ್ಲಿ ಸಂಚರಿಸುವ ಬಸ್ ಗಳು ಕಾರ್ಕಳ ಮಾರ್ಕೆಟ್ ರಸ್ತೆಯ ಮೂಲಕ ಸಂಚರಿಸಿ, ಉಡುಪಿ,ಹೆಬ್ರಿಯಿಂದ ಮರಳಿ ಬರುವಾಗ ಮುಖ್ಯ ರಸ್ತೆಯ ಮೂಲಕ ಬಸ್ಸು ನಿಲ್ದಾಣಕ್ಕೆ ಬರಬೇಕು. ಆದರೆ ಹೆಚ್ಚಿನ ಬಸ್ಸುಗಳು ಉಡುಪಿಗೆ ಹೋಗುವಾಗಲೂ, ಬರುವಾಗಲೂ […]