ಉಡುಪಿ: ಯುವಜನರನ್ನು ಮಾದಕ ದ್ರವ್ಯಗಳ ಸೇವನೆಯಿಂದ ದೂರ ಉಳಿಯುವಂತೆ ಕ್ರಮವಹಿಸಿ; ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ, ಏಪ್ರಿಲ್ 01: ಯುವಜನರಲ್ಲಿ ಮಾದಕ ದ್ರವ್ಯ ಸೇವನೆಯಿಂದ ಭವಿಷ್ಯದಲ್ಲಿ ಆಗುವ ಉಂಟಾಗುವದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅವುಗಳಿಂದ ದೂರ ಉಳಿಯುವಂತೆ ನೋಡಿಕೊಳ್ಳಬೇಕು ಎಂದುಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ನಾಲ್ಕನೇ ತ್ರೆöÊಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಮಾದಕ ದ್ರವ್ಯಗಳ ಸೇವೆನೆಯಿಂದ ಮನುಷ್ಯನಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ […]
ಕೋಟ: ಸಿದ್ದಾಪುರ ಯುವಕನ ಅಪಹರಣ ಪ್ರಕರಣ; ಕೋಕಾ ಕಾಯ್ದೆಯಡಿ ಏಳು ಆರೋಪಿಗಳ ಬಂಧನ.

ಉಡುಪಿ: ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನದಲ್ಲಿ ನಡೆದ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.ಕೊಲ್ಲೂರು ಕೆಳಮನೆಯ ದೇವಿ ಪ್ರಸಾದ್ ಶೆಟ್ಟಿ ಯಾನೆ ದೀಕ್ಷಿತ್ (33), ಹಿರಿಯಡ್ಕದ ಸುಜಿತ್ (27), ಕಾಟಿಪಳ್ಳದ ಸುದೀಪ್ (22), ಕೃಷ್ಣಾಪುರ ಶ್ರೀಷಾ ಆನಂದ ಶೆಟ್ಟಿ (35), ಕೈಕಂಬ ಮಿಥುನ್ ಕೈಕಂಬ (20), ಕೆಮ್ಮಣ್ಣು ಸುಹಾಸ್ (31) ಹಾಗೂ ಹೂಡೆ ಮನೋಜ್ ವಿ. ಕೊಟ್ಯಾನ್ (34) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ […]
ಉಡುಪಿ: ಎ.3 ರಿಂದ 7ರವರೆಗೆ ಇಂದ್ರಾಳಿ ಶ್ರೀ ಮುಖ್ಯಪ್ರಾಣ- ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ.

ಉಡುಪಿ: ಇಂದ್ರಾಳಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀ ಆಂಜನೇಯ ದೇವರ ಗುಡಿ ಹಾಗೂ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಇದೇ ಎ. 3ರಿಂದ 7ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.ಇಂದ್ರಾಳಿ ಆಂಜನೇಯ ದೇವರ ದೇವಸ್ಥಾನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ. 3ರಂದು ಸಂಜೆ 6ರಿಂದ ವಾಸ್ತು ಪೂಜೆ, ವಾಸ್ತು ಬಲಿ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. ಎ. 4 ರಂದು ಬೆಳಿಗ್ಗೆ 6.48ರಿಂದ ಅಷ್ಟಬಂಧ ಸಹಿತ ಶ್ರೀ […]
ಉಡುಪಿ: ಎ. 4 ರಂದು ಕಲಾಸೌರಭ ಕಾರ್ಯಕ್ರಮ; ಆಟಿಸಂ ಸೊಸೈಟಿ ಉಡುಪಿ ಆಯೋಜನೆ.

ಉಡುಪಿ: ಕಳೆದ ನಾಲ್ಕು ವರ್ಷಗಳಿಂದ ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ “ಕಲಾಸೌರಭ” ಕಾರ್ಯಕ್ರಮವನ್ನು ಆಟಿಸಂ ಸೊಸೈಟಿ ಉಡುಪಿ ಮತ್ತು ಇನ್ನಿತರ ಸಮಾನ ಮನಸ್ಕ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಆಯೋಜಿಸುತ್ತಾ ಬಂದಿದ್ದೇವೆ.ಈ ವರ್ಷ “ಕಲಾಸೌರಭ” ಕಾರ್ಯಕ್ರಮವು “ವಿಶಿಷ್ಟತೆಗಳನ್ನು ಸಂಭ್ರಮಿಸಿ” ಎಂಬ ವಿಷಯವನ್ನು ಆಧರಿಸಿ ಎಪ್ರಿಲ್ 4ರ ಶನಿವಾರದಂದು ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ನಡೆಯಲಿದೆ ಎಂದು ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಈ […]
ಇಂದಿನಿಂದ ‘ಆದಾಯ ತೆರಿಗೆ’ಯಲ್ಲಿ ಮಹತ್ತರ ಬದಲಾವಣೆ: ಬದಲಾದ ನಿಯಮವೇನು?

ನವದೆಹಲಿ: ಆದಾಯ ತೆರಿಗೆ ನಿಯಮಗಳಲ್ಲಿ ಏಪ್ರಿಲ್ 1 ರಿಂದ ಮಹತ್ವದ ಬದಲಾವಣೆಯಾಗಿದೆ. ಮುಖ್ಯವಾಗಿ 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ಆದಾಯ ತೆರಿಗೆ ಕಾಯ್ದೆ 2025(Income Tax Act, 2025) ಜಾರಿಗೆ ಬರಲಿದೆ. ಹೊಸ ತೆರಿಗೆ ಪದ್ಧತಿಯಡಿ ವಾರ್ಷಿಕ 12 ಲಕ್ಷ ರೂ. ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50 ಸಾವಿರ ರೂ. ನಿಂದ 75 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಇದು ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ […]