ಸಕಲೇಶಪುರ: ರಾಜಹಂಸ ಬಸ್- ಸ್ವಿಫ್ಟ್ ಡಿಸೈರ್ ಕಾರು ಮಧ್ಯೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು

ಸಕಲೇಶಪುರ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಸಕಲೇಶಪುರ ತಾಲ್ಲೂಕಿನ ಗುಂಡ್ಯ ಗಡಿ ದೇವಸ್ಥಾನದ ಸಮೀಪ ಈ ದಾರುಣ ಘಟನೆ ನಡೆದಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಮತ್ತು ಮಂಗಳೂರಿನಿಂದ ಹೊರಟಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. […]

ಉಡುಪಿ: ಪ್ರೊ| ನವೀನ್ ಚಂದ್ರ ಅವರಿಗೆ ಪಿಎಚ್.ಡಿ. ಪದವಿ

ಉಡುಪಿ: ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ನಿರಾಮಯ ಕಾಲೇಜ್‌ ಆಫ್ ಅಲೈಡ್ ಹೆಲ್ತ್ ಸೈನ್ಸ್ ಬಂಟಕಲ್‌ನ ಉಪ ಪ್ರಾಂಶುಪಾಲ ಹಾಗೂ ಉದ್ಯಾವರದ ಎಸ್‌ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಹಿರಿಯ ಸಂಶೋಧನಾ ಅಧಿಕಾರಿ ಪ್ರೊ| ನವೀನ್ ಚಂದ್ರ ಅವರು ಎಂಐಟಿಯ ಪ್ರಾಧ್ಯಾಪಕ ಡಾ। ಲೆವಿಲಿನ್ ಲೆಸ್ಟರ್‌ರಾಜ್ ರೊಡ್ರಿಗಸ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಬಯಲಾಜಿಕಲ್‌ ಸಿಮಿಲೇಶನ್ ವಿಥ್ ಸ್ಪೆಷಲ್ ಎಂಪಾಸಿಸ್ ಆನ್ ವಾಟರ್‌ಬೇಸ್ಡ್ ಡಿಸೀಸ್ ಪ್ರೊಪಗೇಶನ್ ಎಂಬ ಬಯೋಟೆಕ್ನಾಲಜಿ ವಿಭಾಗದ ಮಹಾಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯ […]

ಬ್ರಹ್ಮಾವರದ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ, ನರ್ಸಿಂಗ್ ,ಆಸ್ಪತ್ರೆ ಆಡಳಿತ , ಪ್ಯಾರಾಮೆಡಿಕಲ್ ಕೋರ್ಸ್ ಗಳಿಗೆ ಪ್ರವೇಶಾತಿ ಶುರು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಉಡುಪಿ: ಬ್ರಹ್ಮಾವರದ ಫಾರ್ಚೂನ್ ಅಕಾಡೆಮಿಕ್ & ಚಾರಿಟೆಬಲ್ ಟ್ರಸ್ಟ್ (ರಿ.), ಬ್ರಹ್ಮಾವರ ಇದರ ಘಟಕ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ (Fortune Academy of Health Sciences)ಸಂಸ್ಥೆಯಲ್ಲಿ ನರ್ಸಿಂಗ್ ,ಆಸ್ಪತ್ರೆ ಆಡಳಿತ , ಪ್ಯಾರಾಮೆಡಿಕಲ್ ಕೋರ್ಸ್ಗಳಿಗೆ ಪ್ರವೇಶ ಆರಂಭಗೊಂಡಿದೆ. B.Sc. ನರ್ಸಿಂಗ್ GNM (ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ), ಬ್ಯಾಚುಲರ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಪ್ಯಾರಾಮೆಡಿಕಲ್ ಕೋರ್ಸ್ಗಳಾದ ಡಿಪ್ಲೊಮಾ ಇನ್ ಎಕ್ಸ್-ರೇ ಟೆಕ್ನಾಲಜಿ, ಡಿಪ್ಲೊಮಾ ಇನ್ ಓಟಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ […]

ಉಡುಪಿ:ತ್ರಿಶಾ ವಿದ್ಯಾ ಕಾಲೇಜಿಗೆ ನಾಲ್ಕನೇ ಬಾರಿ ಸಮಗ್ರ ಚಾಂಪಿಯನ್ ಕಿರೀಟ

ಕಟಪಾಡಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ‘ಕ್ಷಿತಿವಂಶ’ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸತತ ನಾಲ್ಕನೇ ವರ್ಷವೂ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಾಕ್ಯುಮೆಂಟರಿ ವಿಭಾಗದಲ್ಲಿ ತರುಣ್ ಪ್ರಥಮ ,ಪೇಪರ್ ಪ್ರೆಸೆಂಟೇಶನ್ನಲ್ಲಿ ಓಂಕಾರ್ ವರ್ಣೇಕರ್ ಮತ್ತು ಶ್ರೇಷ್ಠ ದ್ವಿತೀಯ . ಬಾಟಲ್ ಪೈಂಟಿಂಗ್ ನಲ್ಲಿ ರಾಧಿಕಾ ಪ್ರಥಮ, ಸರ್ಪ್ರೈಸ್ ಈವೆಂಟ್ನಲ್ಲಿ ರಂಜನ್ ಪ್ರಥಮ, ಕನ್ನಡ ವಾದವಿವಾದ ಸ್ಪರ್ಧೆಯಲ್ಲಿ ನಾಗೇಂದ್ರ ಮತ್ತು ಮೀನಾಕ್ಷಿ ಪ್ರಥಮ, ಸ್ಟ್ಯಾಂಡ್ ಅಪ್ ಕಾಮಿಡಿಯಲ್ಲಿ ರಂಜನ್ […]

ವಾಣಿಜ್ಯ ಸಿಲಿಂಡರ್ ಅಭಾವ ಎರಡು ದಿನದೊಳಗೆ ಪರಿಹರಿಸಲು ಪ್ರಯತ್ನ- ಸಂಸದ ಕೋಟ

ಉಡುಪಿ: ಕೊಲ್ಲಿ ರಾಷ್ಟ್ರದಲ್ಲಿ ಯುದ್ಧಭೀತಿಯಿಂದ ಉಂಟಾಗಿರುವ ಅನಿಲ ವ್ಯತ್ಯಯದಿಂದಾಗಿ ಹೊಟೇಲ್ ಮಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಎರಡು ದಿನಗಳೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಉಡುಪಿ ಜಿಲ್ಲಾ ಹೋಟೇಲ್ ಮಾಲಕರ ಸಂಘದ ವತಿಯಿಂದ ನಗರದ ಡಯಾನ ಹೋಟೇಲ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಣಿಜ್ಯ ಬಳಕೆಯ ಅನಿಲ ಅಲಭ್ಯತೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಒಂದು ವಾರದೊಳಗೆ […]