ಉಡುಪಿ: ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ನಿರಾಮಯ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಬಂಟಕಲ್‌ನ ಉಪ ಪ್ರಾಂಶುಪಾಲ ಹಾಗೂ ಉದ್ಯಾವರದ ಎಸ್‌ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಹಿರಿಯ ಸಂಶೋಧನಾ ಅಧಿಕಾರಿ ಪ್ರೊ| ನವೀನ್ ಚಂದ್ರ ಅವರು ಎಂಐಟಿಯ ಪ್ರಾಧ್ಯಾಪಕ ಡಾ। ಲೆವಿಲಿನ್ ಲೆಸ್ಟರ್‌ರಾಜ್ ರೊಡ್ರಿಗಸ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಬಯಲಾಜಿಕಲ್ ಸಿಮಿಲೇಶನ್ ವಿಥ್ ಸ್ಪೆಷಲ್ ಎಂಪಾಸಿಸ್ ಆನ್ ವಾಟರ್‌ಬೇಸ್ಡ್ ಡಿಸೀಸ್ ಪ್ರೊಪಗೇಶನ್ ಎಂಬ ಬಯೋಟೆಕ್ನಾಲಜಿ ವಿಭಾಗದ ಮಹಾಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಪಿಎಚ್.ಡಿ. ಪದವಿ ನೀಡಿದೆ.
ಅವರು ಮಣಿಪಾಲದ ದಿ। ಹಿರಿಯಣ್ಣ ಮತ್ತು ಸುಲೋಚನಾ ದಂಪತಿಯ ಪುತ್ರ. ಅವರು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸೊಸೈಟಿಯ ಸ್ಥಾಪಕ ಹಾಗೂ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.

















