ಉಡುಪಿ: ಆತ್ರಾಡಿ ಮುಖ್ಯ ರಸ್ತೆಯ ಬಳಿ ಶ್ರೀಮತಿ ಮೈತ್ರಿ ಕೆ ಏನ್, ಚಂದ್ರಶೇಖರ್ ಹಾಗೂ ಶ್ರೀಮತಿ ಚೈತ್ರ ಮುರಳೀಧರ ಕೆ ಏನ್ ರವರ -ಮಾಲೀಕತ್ವದಲ್ಲಿ ಟ್ರ್ಯಾಕ್ಟರ್ ಮತ್ತು ಅದರ ಸೇವೆ, ಬಿಡಿ ಭಾಗಗಳ ಮಾರಾಟ ಶೋ ರೂಮ್ ಶ್ರೀ ಬಾಲಾಜಿ ಟ್ರ್ಯಾಕ್ಟರ್ಸ್ ಆರಂಭ ಗೊಂಡಿತು.
ಶ್ರೀ ವಿನಯ ಗುರೂಜಿ ಗೌರಿ ಗದ್ದೆ ಯವರು ಆಗಮಿಸಿ ಆಶೀರ್ವಾಚನ ಮಾಡಿ ಸಂಸ್ಥೆ ಅಭಿವೃದ್ಧಿಯಾಗುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕಟ್ಟಡದ ಮಾಲೀಕ ಸತ್ಯಾನಂದ ನಾಯಕ್ ಆತ್ರಾಡಿ, ಮಹಿಂದ್ರಾ ಕಂಪನಿ ಏರಿಯಾ ಮ್ಯಾನೇಜರ್ ಪ್ರಜ್ವಲ್, ಶ್ರೀಮತಿ ಲೀಲಾವತಿ, ಎಲ್ ನಾಗರಾಜ್, ಶ್ರೀಮತಿ ಸಿಂಚನ, ದೀಕ್ಷಿತ್, ಸುದರ್ಶನ್ ಪೂಜಾರಿ, ಮುಂತಾದವರು ಹಾಜರಿದ್ದರು.

















