ಕಾರ್ಕಳ ಜ್ಞಾನಸುಧಾ: ಜೆಇಇ ಮೈನ್ ಸಾಧಕರಿಗೆ ಸನ್ಮಾನ

ಕಾರ್ಕಳ :ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧವಾದ ನಡೆ-ನಡವಳಿಕೆ ಇಟ್ಟುಕೊಂಡವನು ಶೈಕ್ಷಣ ಕ ಕ್ಷೇತ್ರದಲಿ ಸಾಧಕನಾಗಿ ಹೊರಹೊಮ್ಮಲು ಸಾಧ್ಯ. ಇದಕ್ಕೆ ಪೂರಕವಾದ ವಾತವರಣವು ಜ್ಞಾನಸುಧಾದಲ್ಲಿದೆ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನ ಹಾಗೂ ಜ್ಞಾನಸುಧಾ ಒಟ್ಟು ಕುಟುಂಬವಾಗಿ ದುಡಿಯುತ್ತಿರುವುದರ ಪ್ರತಿಫಲವೇ ಇಂತಹ ಅತ್ಯುತ್ತಮ ಫಲಿತಾಂಶಗಳಾಗಿವೆ ಎಂದು ಕಾರ್ಕಳ ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಕಾಲೇಜಿನ ಪೂರ್ವ ವಿದ್ಯಾರ್ಥಿ, CPU Formal Verification Engineer @ ಕ್ವಾಲ್ಕೋಮ್ಮ್ಮ ನ ಮನ್ವಿತ್ ಪ್ರಭು ನುಡಿದರು. ಅವರು ಕಾರ್ಕಳ ಜ್ಞಾನಸುಧಾದ ಪ್ರಾಂಗಣದಲ್ಲಿ ಜೆಇಇ ಮೈನ್ (ಬಿ.ಟೆಕ್) – 2026 […]
ಉಡುಪಿ:ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನದ ಆಚರಣೆ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆಯನ್ನು (ICCD) ಹೃದಯಸ್ಪರ್ಶಿ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಪಾಲಕರು ಹಾಗೂ ಕ್ಯಾನ್ಸರ್ ಗೆದ್ದ ಬದುಕಿನ ಹೋರಾಟಗಾರರು ಒಂದಾಗಿ ಸೇರಿ ಜಾಗೃತಿ ಮೂಡಿಸಿ, ಧೈರ್ಯಶಾಲಿ ಮಕ್ಕಳಿಗೆ ಬೆಂಬಲ ಸೂಚಿಸಿದರು. ಈ ಕಾರ್ಯಕ್ರಮವು 2024–2026 ರ ಅವಧಿಗೆ ರೂಪಿಸಲಾದ ಮೂರು ವರ್ಷದ ಅಭಿಯಾನದ ಭಾಗವಾಗಿದ್ದು, “ಇನ್ಸ್ಫೈರಿಂಗ್ ಆಕ್ಷನ್ ” ಎಂಬ ಧ್ಯೇಯವಾಕ್ಯವನ್ನು ಹೊಂದಿದೆ.ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಹಾಗೂ ಅವರ ಕುಟುಂಬಗಳ ಮನೋಬಲ ಹೆಚ್ಚಿಸುವ […]
ಉಡುಪಿ ಜ್ಞಾನಸುಧಾ : ಜೆಇಇ ಮೈನ್ ಸಾಧಕರಿಗೆ ಸನ್ಮಾನ

ಉಡುಪಿ:ಶೈಕ್ಷಣಿಕ ಜೀವನದಲ್ಲಿ ಉತ್ತಮ ಅಂಕಗಳೊ೦ದಿಗೆ ಶಿಸ್ತು, ಸದ್ಚಾರಿತ್ರ್ಯ ಬಹಳ ಮುಖ್ಯ. ಹೆತ್ತವರ ಎದುರು ಸನ್ಮಾನ ಸ್ವೀಕರಿಸುವುದೇ ನಿಜವಾದ ಸಾಧನೆ. ಬದುಕಿಗೆ ಉಸಿರು ಕೊಟ್ಟವರ ಕನಸನ್ನು ನನಸಾಗಿಸುವ ಹೆಮ್ಮೆಯ ಮಕ್ಕಳು ನೀವಾಗಿ ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಹೇಳಿದರು. ಇವರು ಉಡುಪಿ ಜ್ಞಾನಸುಧಾದಲ್ಲಿ ಜೆಇಇ ಮೈನ್ (ಬಿ.ಟೆಕ್) – 2026ರ ಮೊದಲ ಹಂತದ ಫಲಿತಾಂಶದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಉಡುಪಿ ಜ್ಞಾನಸುಧಾ […]
ಮಣಿಪಾಲದ MSDC ಯಲ್ಲಿ ಲುಕ್ & ಲರ್ನ್ ಕಾರ್ಯಾಗಾರ : ಈ ವೃತ್ತಿಪರ ತರಬೇತಿಯಲ್ಲಿ ನೀವು ಭಾಗವಹಿಸಬಹುದು

ಮಣಿಪಾಲ : ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್- MSDC (ಡಾ. ಟಿ.ಎಂ.ಎ. ಪೈ ಫೌಂಡೇಶನ್ನ ಘಟಕ)ನಲ್ಲಿ ಒರೇನ್ ಇಂಟರ್ನ್ಯಾಷನಲ್ ಸಹಯೋಗದಲ್ಲಿ ಲುಕ್ & ಲರ್ನ್ ಕಾರ್ಯಾಗಾರ ಕ್ರಿಸ್ಟಲ್ ಜೆಲ್ ಪ್ರೀಮಿಯಂ ಮ್ಯಾನಿಕ್ಯೂರ್ ಫೆ. 24 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ ಒರೇನ್ ಇಂಟರ್ನ್ಯಾಷನಲ್ ಎಂಎಸ್ಡಿಸಿ ಕಟ್ಟಡ, 3ನೇ ಮಹಡಿ ಈಶ್ವರನಗರ, ಮಣಿಪಾಲ ಇಲ್ಲಿ ನಡೆಯಲಿದೆ. ಕೋರ್ಸ್ ನ ಪ್ರಯೋಜನಗಳೇನು?: ಕಾರ್ಯಾಗಾರದ ಶುಲ್ಕ: ಕೇವಲ ₹199/- ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8123165068, ವೆಬ್ಸೈಟ್: https://msdcskills.org/beauty-wellness/ […]
ಫೆ.25 ರಂದು ಬಂಟಕಲ್ ಇಂಜಿನಿಯರಿ೦ಗ್ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ರೀಯ ಸೇವಾ ಯೋಜನೆ ಮತ್ತು ಮಹಿಳಾ ಸಬಲೀಕರಣ ಘಟಕವು ಜಂಟಿಯಾಗಿ ದಿನಾಂಕ 25 ಫೆಬ್ರವರಿ 2026 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಸಂಸ್ಥೆಯ ಸಾಮಾಜಿಕ ಸೇವಾ ಉಪಕ್ರಮದ ಅಂಗವಾಗಿ ಆಯೋಜಿಸಲಾಗಿದ್ದು ಸಾರ್ವಜನಿಕರಲ್ಲಿ ಆರೋಗ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಮತ್ತು ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚುವಿಕೆಯ ಮೂಲಕ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ, ಹೃದಯ ರೋಗ […]