ಉಡುಪಿ: ಎರಡು ಬೈಕ್ ಮುಖಾಮುಖಿ ಡಿಕ್ಕಿ- ಸಿಟಿ ಬಸ್ ಚಾಲಕ ಮೃತ್ಯು, ಮತ್ತೋರ್ವ ಗಂಭೀರ

ಉಡುಪಿ: ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ 11:30ಕ್ಕೆ ಅಂಬಾಗಿಲು ಪೆರಂಪಳ್ಳಿ ಕ್ರಾಸ್ ಬಳಿಯ ನ್ಯೂ ಜಯಲಕ್ಷ್ಮೀ ಸ್ಟೀಲ್ಸ್ ಎದುರುಗಡೆ ಸಂಭವಿಸಿದೆ. ಮೃತನನ್ನು ಉಡುಪಿ ಸಿಟಿ ಬಸ್ ಚಾಲಕ ಸಂದೀಪ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ಸಾಗರ ತಾಲೂಕಿನವರಾಗಿದ್ದು, ಅವಿವಾಹಿತರಾಗಿದ್ದಾರೆ ಎನ್ನಲಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂಬಾಗಿಲು-ಕಲ್ಸಂಕ ರಸ್ತೆಯಲ್ಲಿ ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಕಲ್ಸಂಕ ಕಡೆಯಿಂದ ಅಂಬಾಗಿಲು ಕಡೆಗೆ […]
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಶ್ರೀಮನ್ನಾಗಮಂಡಲ: ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಉಡುಪಿ: ಕೃಷಿಲೋಕ ಮುನಿಯಾಲಿನ ಗೋಧಾಮವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 21 ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗುರುವಾರ ಭಕ್ತಿ ವೈಭವದ ಚಾಲನೆ ನೀಡಲಾಯಿತು. ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್ ಮತ್ತು ಕುಟುಂಬಸ್ಥರು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು […]
ಮಣಿಪಾಲ: ಫೆ.22ಕ್ಕೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ “300ನೇ ರಕ್ತದಾನ ಶಿಬಿರ”

ಉಡುಪಿ: ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ವತಿಯಿಂದ 300ನೇ ರಕ್ತದಾನ ಶಿಬಿರ “ಹೆಗ್ಗುರುತು- 300” ಅನ್ನು ಇದೇ ಫೆ. 22ರಂದು ಬೆಳಿಗ್ಗೆ 8.30ರಿಂದ 1ಗಂಟೆಯವರೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ.ಟಿಎಂಎ ಪೈ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ […]
MSDC ಯಲ್ಲಿದೆ ಉಚಿತ ಬೋಷ್ ಪ್ರಮಾಣೀಕೃತ ಆಟೋಮೊಟಿವ್ ತರಬೇತಿ, ಆಸಕ್ತರು ಮಿಸ್ ಮಾಡ್ಕೊಬೇಡಿ

ಮಣಿಪಾಲ: ಬೋಷ್ ಮತ್ತು MSDC ಸಹಯೋಗದಲ್ಲಿ ಉಚಿತ ಬೋಷ್ ಪ್ರಮಾಣೀಕೃತ ಆಟೋಮೊಟಿವ್ ತರಬೇತಿಗೆ ಪ್ರವೇಶ ಆರಂಭವಾಗಿದೆ. ನಿಮ್ಮಲ್ಲಿ ಪದವಿ ಇಲ್ಲದಿದ್ದರೂ ಈ ತರಬೇತಿ ಪಡೆಯಬಹುದು, ಬೋಷ್ ಮತ್ತು MSDC ಜೊತೆಗೆ ಕೇವಲ 8 ವಾರಗಳಲ್ಲಿ ನಿಮ್ಮ ಆಟೋಮೊಟಿವ್ ವೃತ್ತಿ ಜೀವನವನ್ನು ಆರಂಭಿಸಲು ಇದೊಂದು ಅದ್ಬುತ ಅವಕಾಶ.ಇದು ಶೇ. 100 ಉದ್ಯೋಗ ಕೇಂದ್ರೀಕೃತ ಕಾರ್ಯಕ್ರಮವಾಗಿದೆ. ತರಬೇತಿ ಯಾಕೆ ಮಾಡಬೇಕು? • ಸರ್ವಿಸ್ ಅಡ್ವೈಸರ್ ಕಾರ್ಯಕ್ರಮ • ಆಟೋಮೊಟಿವ್ ಟೆಕ್ನಿಷಿಯನ್ (2 ಚಕ್ರ ವಾಹನ) •ಆಟೋಮೊಟಿವ್ ಟೆಕ್ನಿಷಿಯನ್ (4 ಚಕ್ರ […]
ಉಡುಪಿ: ವಸತಿ ಯೋಜನೆಯ ಸಹಾಯಧನ ಹೆಚ್ಚಳಕ್ಕೆ ಆಗ್ರಹಿಸಿ ಸಮತಾ ಸೈನಿಕ ದಳದಿಂದ ಧರಣಿ

ಉಡುಪಿ: ಗ್ರಾಮೀಣ ಭಾಗದ ಎಸ್ ಸಿ, ಎಸ್ ಟಿ ಹಾಗೂ ಒಬಿಸಿ ಜನಾಂಗದವರಿಗೆ ಡಾ. ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಕನಿಷ್ಠ 9 ಲಕ್ಷ ರೂ. ಸಹಾಯಧನ ಹಾಗೂ ಬಸವ ಇಂದಿರಾ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 5ಲಕ್ಷ ರೂ. ಸಹಾಯಧನ ನೀಡಲು ಬಜೆಟ್ ನಲ್ಲಿ ಅಧಿಕೃತವಾಗಿ ಘೋಷಿಸಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಸಮತಾ ಸೈನಿಕ ದಳದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಧರಣಿ ನಡೆಸಲಾಯಿತು. ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ನೂರಾರು ಸಂಖ್ಯೆಯಲ್ಲಿ ಸಮತಾ […]