ಉಡುಪಿ:ಜ.26 ರಿಂದ 28 ರವರೆಗೆ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ–2026

ಉಡುಪಿ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ–2026 ಅನ್ನು ಆಯೋಜಿಸಲಾಗಿದೆ. ಈ ಪ್ರದರ್ಶನವು ಜನವರಿ 26 ರಿಂದ 28 ರವರೆಗೆ ಉಡುಪಿಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ, ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ನಡೆಯಲಿದೆ. ಪ್ರದರ್ಶನದಲ್ಲಿ ವಿವಿಧ ಪುಷ್ಪಗಳಿಂದ ತಯಾರಿಸಿದ ಕಲಾಕೃತಿಗಳು, ವಿವಿಧ ಮಾದರಿಗಳ ಹೂವಿನ ಜೋಡಣೆ,ವಿವಿಧ ವಿನ್ಯಾಸಗಳಲ್ಲಿ ಹೂಕುಂಡಗಳ ಜೋಡಣೆ, ಮಾದರಿ ಕೈತೋಟ, ಕೃಷಿ ಸಂಬಂಧಿತ ಇಲಾಖೆಗಳ […]

ಉಡುಪಿ ಪರ್ಯಾಯ ಪ್ರತಿಭೆಗಳ ಅನಾವರಣದ ಮಹೋತ್ಸವ: ಡಾ.ತಲ್ಲೂರು ಶಿವರಾಮ

ಉಡುಪಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿ ಪರ್ಯಾಯ ಮಹೋತ್ಸವ ಕೇವಲ ಧಾರ್ಮಿಕ ಉತ್ಸವ ಮಾತ್ರವಲ್ಲ, ಇದು ಪ್ರತಿಭೆಗಳ ಸಂಗಮದ ಮಹೋತ್ಸವವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಉಡುಪಿಯಲ್ಲಿ ಶಿರೂರು ಮಠದ ಪರ್ಯಾಯೋತ್ಸವದ ಸಂದರ್ಭದಲ್ಲಿ ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉಡುಪಿ ವತಿಯಿಂದ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರ್ಯಾಯ ಮಹೋತ್ಸವದಂದು ಉಡುಪಿ ನಗರವಿಡೀ ಶೃಂಗಾರಗೊoಡು ಹತ್ತಿಪ್ಪತ್ತು ವೇದಿಕೆಗಳಲ್ಲಿ ವಿವಿಧ ರಸಮಂಜರಿ, ಸಂಗೀತ, ನೃತ್ಯ ಮೊದಲಾದ ಮನೋರಂಜನಾ […]

ಉಡುಪಿ: ಪ್ರೌಢಶಾಲಾ ವಿದ್ಯಾರ್ಥಿನಿ ನೇಣಿಗೆ ಶರಣು

ಉಡುಪಿ: ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀಡಿನಗುಡ್ಡೆಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಬರ್ಮವ್ವ (15) ಎಂದು ಗುರುತಿಸಲಾಗಿದೆ. ಈಕೆ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಹೆತ್ತವರೊಂದಿಗೆ ಗೀತಾ ಶೆಟ್ಟಿ ಎಂಬವರ ನಿವೇಶನದಲ್ಲಿದ್ದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಮನೆ ಮಂದಿ ಬೆಳಿಗ್ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ‌. ನಗರ ಪೋಲಿಸ್ ಠಾಣೆಯ ಎಸ್ ಐ, ಗಂಗಪ್ಪ,‌ಮುಖ್ಯ ಆರಕ್ಷಕಿಯರಾದ ಆಶಾ ಲತಾ, ಜಾಸ್ವ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು […]

ಉಡುಪಿ:ರೋಟರಿ ಕ್ಲಬ್ ಬ್ರಹ್ಮಾವರ, 37ನೇ ರಸ್ತೆ ಸುರಕ್ಷತಾ ಮಾಸಾಚರಣೆ

ಉಡುಪಿ:ರೋಟರಿ ಕ್ಲಬ್ ಬ್ರಹ್ಮಾವರ, ರೋಟರ್ಯಾಕ್ಟ್ ಕ್ಲಬ್ ಬ್ರಹ್ಮಾವರ, ಇಂಟರ್ಯಾಕ್ಟ್ ಕ್ಲಬ್ ಶಾರದ ಹೈಸ್ಕೂಲ್ ಚೇರ್ಕಾಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ 2026 ಶಾರದ ಹೈಸ್ಕೂಲು ಚೇರ್ಕಾಡಿಯ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಉದ್ಘಾಟಿಸಿ ರಸ್ತೆ ಸುರಕ್ಷತಾ ಮಾಸಾಚರಣೆಯ ಮಹತ್ವ ತಿಳಿಸಿದರು. ಮೋಟಾರು ವಾಹನ ನಿರೀಕ್ಷಕರಾದ ಶ್ರೇಯಸ್ ಕುಮಾರ್ ಕುಕ್ಕೆ ವಿದ್ಯಾರ್ಥಿಗಳಿಗೆ ದೃಶ್ಯ ಮಾಧ್ಯಮದ ಮೂಲಕ ಸಂಚಾರ […]

ಯುಎಇ ಅಧ್ಯಕ್ಷರ ಭಾರತ ಪ್ರವಾಸ; ಭಾರತ ಮತ್ತು ಯುಎಇ ಮಹತ್ವದ ಒಪ್ಪಂದಕ್ಕೆ ಸಹಿ!

ನವದೆಹಲಿ: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರದಂದು ಭಾರತ ಪ್ರವಾಸ ಕೈಗೊಂಡಿದ್ದಾರೆ. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣಾ ವಲಯ ಸೇರಿದಂತೆ ಬೃಹತ್ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಯುಎಇ ಅಧ್ಯಕ್ಷರನ್ನು ‘ಸಹೋದರ’ ಎಂದು ಸಂಬೋಧಿಸಿದ್ದಾರೆ.ಮಾತುಕತೆಯಲ್ಲಿ ಭಾರತ ಹಾಗೂ ಯುಎಇ ನಡುವಣ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ವಿಸೃತವಾದ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. […]