ಉಡುಪಿ:ಜ.26 ರಿಂದ 28 ರವರೆಗೆ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ–2026


ಉಡುಪಿ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ–2026 ಅನ್ನು ಆಯೋಜಿಸಲಾಗಿದೆ.

ಈ ಪ್ರದರ್ಶನವು ಜನವರಿ 26 ರಿಂದ 28 ರವರೆಗೆ ಉಡುಪಿಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ, ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ನಡೆಯಲಿದೆ.

ಪ್ರದರ್ಶನದಲ್ಲಿ ವಿವಿಧ ಪುಷ್ಪಗಳಿಂದ ತಯಾರಿಸಿದ ಕಲಾಕೃತಿಗಳು, ವಿವಿಧ ಮಾದರಿಗಳ ಹೂವಿನ ಜೋಡಣೆ,ವಿವಿಧ ವಿನ್ಯಾಸಗಳಲ್ಲಿ ಹೂಕುಂಡಗಳ ಜೋಡಣೆ, ಮಾದರಿ ಕೈತೋಟ, ಕೃಷಿ ಸಂಬಂಧಿತ ಇಲಾಖೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು,ಕೃಷಿ ಸಂಬಂಧಿತ ಪರಿಕರಗಳು,ಯಂತ್ರೋಪಕರಣಗಳು ಹಾಗೂ ಸಸ್ಯ ಸಾಮಾಗ್ರಿಗೆ ಸಂಬಂಧಿಸಿದ ಮಳಿಗೆಗಳು,ಇಲಾಖೆಯಿಂದ ವಿವಿಧ ತೋಟಗಾರಿಕೆ ಬೆಳೆಯ ತಾಂತ್ರಿಕತೆಗಳ ಬಗ್ಗೆ ವಿಚಾರ ಸಂಕಿರಣಗಳು ಇವೆಲ್ಲವು ಇದರ ವಿಶೇಷ ಆಕರ್ಷಣೆಗಳಾಗಿವೆ.

ಮಳಿಗೆ ತೆರೆಯಲು ಉದ್ದೇಶಿಸಿರುವವರು ಸುನೀಲ್ ಕುಮಾರ್ (9741255168) ರವರನ್ನು ಸಂಪರ್ಕಿಸಿ.ತೋಟಗಾರಿಕೆ ಪ್ರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.