ಭಾರತೀಯ ಸೇನೆಯ ಡಿಜಿಟಲ್ ನೀತಿಯಲ್ಲಿ ಮಹತ್ವದ ಬದಲಾವಣೆ: ಸೈನಿಕರಿಗೆ ಸಾಮಾಜಿಕ ಜಾಲತಾಣ ವೀಕ್ಷಣೆಗೆ ಅನುಮತಿ!

ಭಾರತೀಯ ಸೇನೆಯು ತನ್ನ ಸಿಬ್ಬಂದಿಯ ಸಾಮಾಜಿಕ ಮಾಧ್ಯಮ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ತಂದಿದ್ದು, ಹೊಸ ನೀತಿಯನ್ನು ಬಿಡುಗಡೆ ಮಾಡಿದೆ. ಈ ಮೊದಲು ಹೇರಲಾಗಿದ್ದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಸಡಿಲಿಸಿರುವ ಸೇನೆಯು, ಸೈನಿಕರು ಈಗ ಸಾಮಾಜಿಕ ಜಾಲತಾಣಗಳಲ್ಲಿನ ವಿಷಯಗಳನ್ನು ವೀಕ್ಷಿಸಲು ಅನುಮತಿ ನೀಡಿದೆ. ಆದರೆ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕೆಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಸೈನಿಕರು ಫೇಸ್‌ಬುಕ್, ಎಕ್ಸ್ (ಟ್ವಿಟರ್), ಮತ್ತು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ಗಳಲ್ಲಿನ ಪೋಸ್ಟ್‌ಗಳನ್ನು ಓದಬಹುದು ಅಥವಾ ವೀಕ್ಷಿಸಬಹುದು. ಆದರೆ ಯಾವುದೇ ಪೋಸ್ಟ್‌ಗಳಿಗೆ ಲೈಕ್ ಮಾಡುವುದು, ಕಾಮೆಂಟ್ […]

ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ರೂ.1 ಕೋಟಿಯ ಅಪಘಾತ ವಿಮೆ: ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಅರಣ್ಯ ಇಲಾಖೆಯ ಕಾಯಂ ಅಧಿಕಾರಿ ಮತ್ತು ಸಿಬ್ಬಂದಿಗೆ ₹1 ಕೋಟಿ ಮೊತ್ತದ ಅಪಘಾತ ವಿಮೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ₹20 ಲಕ್ಷ ಮೊತ್ತದ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ. ಗುರುವಾರ ಪ್ರಕಟಣೆ ಹೊರಡಿಸಿರುವ ಅವರು, ‘ಇಲಾಖೆಯ ಸಿಬ್ಬಂದಿಗೆ ವಿಮೆ ಭದ್ರತೆ ಒದಗಿಸುವ ಉದ್ದೇಶದಿಂದ ಬ್ಯಾಂಕ್‌ ಆಫ್‌ ಬರೋಡಾದ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ‘ಕಾಡು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಮುಂಚೂಣಿ ಸಿಬ್ಬಂದಿ, ಹಸಿರು ಸೈನಿಕರು […]

ಡಿ. 29, 30 : ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ

ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ “ರಂಗಭೂಮಿ ರಂಗ ಶಿಕ್ಷಣ” ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250 ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳ ಪ್ರದರ್ಶನ `ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ‘ ಡಿ.29 ಮತ್ತು ಡಿ.30 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ತನಕ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಡಿ.29 ರಂದು ಬೆಳಗ್ಗೆ […]

2026ರಲ್ಲಿ Gmail ವಿಳಾಸ ನಿರ್ವಹಣೆಗೆ ಹೊಸ ಫೀಚರ್ ಪರಿಚಯಿಸುವ ಸಾಧ್ಯತೆ – ಬಳಕೆದಾರರಲ್ಲಿ ಕುತೂಹಲ

Gmail ಬಳಸುವವರಲ್ಲಿ ಬಹುತೇಕ ಜನರಿಗೆ ಒಂದೇ ಸಮಸ್ಯೆ ಇರುತ್ತದೆ ವರ್ಷಗಳ ಹಿಂದೆ ತಯಾರಿಸಿದ ಇಮೇಲ್ ವಿಳಾಸ ಈಗ ಇಷ್ಟವಿಲ್ಲ. ಇದುವರೆಗೆ Gmailನಲ್ಲಿ ವಿಳಾಸ ಬದಲಿಸುವ ಅವಕಾಶ ಇರಲಿಲ್ಲ. ಆದರೆ ಈಗ ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗುವ ಸೂಚನೆಗಳು ಕಾಣಿಸುತ್ತಿವೆ. ಗೂಗಲ್ ತನ್ನ Gmail ಸೇವೆಯಲ್ಲಿ ಹೊಸ ಆಯ್ಕೆಯೊಂದನ್ನು ಪರೀಕ್ಷಿಸುತ್ತಿದ್ದು, ಬಳಕೆದಾರರಿಗೆ ತಮ್ಮ ಇಮೇಲ್ ವಿಳಾಸವನ್ನು ನವೀಕರಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ. ಈ ಹೊಸ ಫೀಚರ್ ಮೂಲಕ ಈಗಿರುವ Gmail ಖಾತೆಯನ್ನೇ ಮುಂದುವರಿಸಿಕೊಂಡು, ಇಮೇಲ್ ಹೆಸರನ್ನು ಬದಲಿಸಬಹುದು. […]

PAN-Aadhar ಜೋಡಣೆಗೆ ಡಿ.31 ಕೊನೆಯ ದಿನಾಂಕ

ಹೊಸದಿಲ್ಲಿ: ವಿಳಂಬ ಶುಲ್ಕವನ್ನು ಪಾವತಿಸದ ಮತ್ತು ಆಧಾರ್ ಕಾರ್ಡ್‌ನ್ನು ತಮ್ಮ ಪಾನ್ ಕಾರ್ಡ್‌ ನೊಂದಿಗೆ ಜೋಡಣೆ ಮಾಡದವರಿಗೆ ಆ ಕಾರ್ಯವನ್ನು ಮುಗಿಸಲು ಡಿ.31 ಕೊನೆಯ ದಿನಾಂಕವಾಗಿದೆ ಮತ್ತು ಅಷ್ಟರೊಳಗೆ ಆಧಾರ್‌ ನೊಂದಿಗೆ ಜೋಡಣೆಯಾಗಿರದ ಪಾನ್ ಕಾರ್ಡ್‌ ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಆದಾಯ ತೆರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ. ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವ ಅಪಾಯದ ಜೊತೆಗೆ ಅಂತಹವರು ಪಾನ್ ಕಾರ್ಡ್‌ಗಳ ಬಳಕೆಯನ್ನೊಳಗೊಂಡಿರುವ ಸೇವೆಗಳ ಅಲಭ್ಯತೆಯ ಸಂಭಾವ್ಯ ಅಪಾಯವನ್ನೂ ಎದುರಿಸಬೇಕಾಗಬಹುದು. ಜುಲೈ 1,2017ರಂದು ಅಥವಾ ಅದಕ್ಕೂ ಮುನ್ನ ಪಾನ್ ಕಾರ್ಡ್ […]