1 ಕೆಜಿ ತೂಕ ಇಳಿಸಿಕೊಳ್ಳಲು ಎಷ್ಟು ಹೊತ್ತು ನಡೆಯಬೇಕು?

1 ಕೆಜಿ ಕೊಬ್ಬು ಸುಮಾರು 7700 ಕ್ಯಾಲರಿಗಳಿಗೆ ಸಮಾನ. ನಿಜವಾದ ಕೊಬ್ಬು ಸಂಗ್ರಹಿತ ಶಕ್ತಿಯಾಗಿರುವ ಕಾರಣದಿಂದ ಅದರ ನಷ್ಟಕ್ಕೆ ಸಮಯ ಬೇಕಾಗುತ್ತದೆ. ದಿನನಿತ್ಯವೂ ನಿರ್ದಿಷ್ಟ ಸಮಯ ನಡೆದರೂ ತೂಕ ಕಳೆದುಕೊಳ್ಳುವ ಸೂಚನೆಯೇ ಇರುವುದಿಲ್ಲ ಎಂದು ನಿಮಗೆ ಅನಿಸಿದ್ದಿದೆಯೆ? ಹಾಗಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ದೂರವನ್ನು ನೀವು ಕ್ರಮಿಸದೆ ಇರಬಹುದು. ಆದರೆ ಚಿಂತೆ ಬೇಡ. 1 ಕೆಜಿ ಕೊಬ್ಬನ್ನು ಕರಗಿಸಲು ಎಷ್ಟು ನಡಿಗೆ ಅಗತ್ಯವಿದೆ ಎನ್ನುವ ಲೆಕ್ಕಾಚಾರ ಬಹಳ ಸರಳ. ಕೊಬ್ಬು ಕರಗಿಸುವ ವಿಜ್ಞಾನಕ್ಕೆ ಸಂಬಂಧಿಸಿದ ತಜ್ಞರಾಗಿರುವ ಅಂಜಲಿ […]

ಡಿ.27ರಂದು ಉಡುಪಿ ಶ್ರೀಕೃಷ್ಣನಿಗೆ ‘ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆ

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶ್ರಮ ಸ್ವೀಕಾರ, ಪೀಠಾರೋಹಣದ ಸುವರ್ಣ ಮಹೋತ್ಸವದ ನೆನಪಿಗಾಗಿ ಅನ್ನಬ್ರಹ್ಮ, ಉತ್ಸವ ಬ್ರಹ್ಮನಾದ ಉಡುಪಿ ಶ್ರೀಕೃಷ್ಣನಿಗೆ ‘ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆ’ ಕಾರ್ಯಕ್ರಮ ಇದೇ ಡಿ.27ರಂದು ನಡೆಯಲಿದೆ. ಈ ಕುರಿತು ಉಡುಪಿ ಗೀತಾಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು, ಡಿ.26ರಂದು ಮಧ್ಯಾಹ್ನ 3.30ಕ್ಕೆ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಸುವರ್ಣ ರಥದ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಶ್ರೀಪಾದರು […]