ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ.

ಢಾಕಾ: ದೀಪು ಚಂದ್ರದಾಸ್ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜನರು ಥಳಿಸಿ ಕೊಂದಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಅಮೃತ್ ಮೊಂಡಲ್ ಅಲಿಯಾಸ್ ಸಾಮ್ರಾಟ್ (29) ಎಂದು ಗುರುತಿಸಲಾಗಿದ್ದು, ಬುಧವಾರ ರಾತ್ರಿ 11 ಗಂಟೆ ಸಮಯದಲ್ಲಿ ರಾಜ್ಬಾರಿಯ ಪಾಂಗ್ಶಾ ಎಂಬಲ್ಲಿ ಈತನ ಹತ್ಯೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಮೃತ ವ್ಯಕ್ತಿ ಅಮೃತ್, ಕಾಳಿಮೊಹರ್ ಬಳಿಯ ಹೊಸೇನ್‌ದಂಗಾ ಗ್ರಾಮದವನಾಗಿದ್ದು, ‘ಸಾಮ್ರಾಟ್ ವಾಹಿನಿ’ ಎಂಬ ಸುಲಿಗೆಕೋರರ ತಂಡಕ್ಕೆ ನಾಯಕನಾಗಿದ್ದ ಎಂದು ಸ್ಥಳೀಯರು […]
ಉಡುಪಿ: ಪೋಷಕರ ಜೊತೆ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತರು : ಮಕ್ಕಳ ರಕ್ಷಣಾ ಘಟಕದಿಂದ ರಕ್ಷಣಾ ಕಾರ್ಯಾಚರಣೆ

ಉಡುಪಿ: ಅಪ್ರಾಪ್ತ ಪ್ರಾಯದ ಮಕ್ಕಳು ಹಾಗೂ ವಯಸ್ಕರು ಒಟ್ಟು ಸೇರಿ ನಲವತ್ತರಷ್ಟಿದ್ದ ಹೊರರಾಜ್ಯದ ಭೀಕ್ಷುಕರನ್ನು ಮನವೊಲಿಸಿ ಊರಿಗೆ ರವಾನಿಸುವ ಕಾರ್ಯಚರಣೆ ಉಡುಪಿಯಲ್ಲಿ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಾಜ ಸೇವಕ ಒಳಕಾಡು ಇವರ ನೇತೃತ್ವದಲ್ಲಿ ನಡೆದಿದೆ. ಮನವೊಲಿಕೆ ಸ್ಪಂದಿಸಿದ ಭೀಕ್ಷುಕರನ್ನು ರೈಲು ಹತ್ತಿಸಿ ಊರಾದ ರಾಜಸ್ಥಾನಕ್ಕೆ ರವಾನಿಸಲಾಯಿತು. ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳ, ಶ್ರೀಕೃಷ್ಣ ಮಠದ ಪರಿಸರದಲ್ಲಿ, ಕಲಿಕೆಯಿಂದ ಹೊರವುಳಿದ ಅಪ್ರಾಪ್ತ ಪ್ರಾಯದ ಮಕ್ಕಳು, ಹೆತ್ತವರು ಭಿಕ್ಷಾಟನೆ ನಡೆಸುತ್ತಿರುವ ಬಗ್ಗೆ, ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರಿಂದ ದೂರುಗಳು […]
ಆನ್‌ಲೈನ್ ಬೆಟ್ಟಿಂಗ್ ಸುಳಿಗೆ ಸಿಲುಕಿ 18 ವರ್ಷದ ಯುವಕ ಆತ್ಮಹತ್ಯೆಗೆ ಶರಣು!

ತೆಲಂಗಾಣ: 18 ವರ್ಷದ ಯುವಕನೊಬ್ಬ ಬೆಟ್ಟಿಂಗ್ ಆ್ಯಪ್ ಮೂಲಕ 1 ಲಕ್ಷ ರೂ. ಕಳೆದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಗರೆಡ್ಡಿ ಜಿಲ್ಲೆಯ ಕಂದುಕೂರು ಪ್ರದೇಶದ ನಿವಾಸಿ ವಿಕ್ರಮ್ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ಹೈದರಾಬಾದ್‌ನಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಪಡೆದ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವಾರಗಳ ನಂತರ ಮತ್ತೊಂದು ಪ್ರಕರಣ ದಾಖಲಾಗಿದೆ. […]
ಇಂದ್ರಾಳಿ ಮೇಲ್ಸೇತುವೆ ಬಳಿ ಮೆಟ್ಟಿಲು ಸ್ಥಾಪನೆಗೆ ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯ ನವೀಕೃತ ಮೇಲ್ಸೇತುವೆ ಬಳಿ ರಸ್ತೆ ದಾಟಲು ಸಮರ್ಪಕವಾದ ದಾರಿ ವ್ಯವಸ್ಥೆ ಇಲ್ಲದೆ ಪಾದಚಾರಿಗಳು ಪ್ರಯಾಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ದಿಬ್ಬ ಹತ್ತಬೇಕಾದ ಸ್ಥಿತಿಯು ನಿರ್ಮಾಣವಾಗಿದೆ. ಸಾರ್ವಜನಿಕರು ರಸ್ತೆ ದಾಟಬೇಕಾದ ಸ್ಥಳವು ಬಹಳ ಎತ್ತರ ಪ್ರದೇಶದಲ್ಲಿದ್ದು, ಮೆಟ್ಟಿಲುಗಳಿಲ್ಲದೆ ಸಮಸ್ಯೆ ಉದ್ಭವಿಸಿದೆ. ಚಿಕ್ಕಪುಟ್ಟ ಮಕ್ಕಳು, ಹಿರಿಯನಾಗರಿಕರು, ಮಹಿಳೆಯರು, ಕಂಕುಳದಲ್ಲಿ ಮಗು ಹೊತ್ತುಕೊಂಡು ಸಾಗುವವರು ರಸ್ತೆ ದಾಟುವುದೇ ಸಾಹಸವಾಗಿದೆ. ದಿನ ನಿತ್ಯ ಸಾವಿರಾರು ಜನರು ಇಂದ್ರಾಳಿಯ ಹಳೆ ಮೇಲ್ಸೇತುವೆ ಹೆದ್ದಾರಿಯಿಂದ ಹೊಸ […]
ಜ.4ರಂದು ಉಡುಪಿ ಜಿಲ್ಲಾ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಮಹೋತ್ಸವ

ಉಡುಪಿ: ಉಡುಪಿ ಜಿಲ್ಲಾ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಜ.4ರಂದು ಕಿದಿಯೂರು ಹೋಟೆಲ್ ನ ಶೇಷಶಯನ ಹಾಲ್ ನಲ್ಲಿ ನಡೆಯಲಿದೆ. ಹಾಗೆಯೇ ಇದೇ ಸಂದರ್ಭದಲ್ಲಿ ಸಂಘದ ನೂತನ ವರ್ಷದ ಡೈರಿ ಬಿಡುಗಡೆ, ನಿವೃತ್ತ ಉಪ ವಲಯ ಅರಣ್ಯ ಅಧಿಕಾರಿಗಳಿಗೆ ಸನ್ಮಾನ, ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ರಕ್ತದಾನಿಗಳಿಗೆ ಗೌರವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಾಗೇಶ ಬಿಲ್ಲವ ತಿಳಿಸಿದರು. ಉಡುಪಿ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ […]