ಉಡುಪಿ: ಅಪ್ರಾಪ್ತ ಪ್ರಾಯದ ಮಕ್ಕಳು ಹಾಗೂ ವಯಸ್ಕರು ಒಟ್ಟು ಸೇರಿ ನಲವತ್ತರಷ್ಟಿದ್ದ ಹೊರರಾಜ್ಯದ ಭೀಕ್ಷುಕರನ್ನು ಮನವೊಲಿಸಿ ಊರಿಗೆ ರವಾನಿಸುವ ಕಾರ್ಯಚರಣೆ ಉಡುಪಿಯಲ್ಲಿ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಾಜ ಸೇವಕ ಒಳಕಾಡು ಇವರ ನೇತೃತ್ವದಲ್ಲಿ ನಡೆದಿದೆ.
ಮನವೊಲಿಕೆ ಸ್ಪಂದಿಸಿದ ಭೀಕ್ಷುಕರನ್ನು ರೈಲು ಹತ್ತಿಸಿ ಊರಾದ ರಾಜಸ್ಥಾನಕ್ಕೆ ರವಾನಿಸಲಾಯಿತು. ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳ, ಶ್ರೀಕೃಷ್ಣ ಮಠದ ಪರಿಸರದಲ್ಲಿ, ಕಲಿಕೆಯಿಂದ ಹೊರವುಳಿದ ಅಪ್ರಾಪ್ತ ಪ್ರಾಯದ ಮಕ್ಕಳು, ಹೆತ್ತವರು ಭಿಕ್ಷಾಟನೆ ನಡೆಸುತ್ತಿರುವ ಬಗ್ಗೆ, ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆಯಿತು.
ಕಾರ್ಯಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ವಿಶಾಲ್, ರಮ್ಯ, ಅಕ್ಷತಾ, ವಿದ್ಯಾಶ್ರೀ, ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಆರಕ್ಷಕ ತುರ್ತು ಸಹಾಯವಾಣಿ 112 ಘಟಕದ ಸಿಬ್ಬಂದಿಗಳು ಹಾಗೂ ಯೋಗೀಶ್, ಸವಿತಾ ಭಾಗಿಯಾಗಿದ್ದರು.

















