ಉಡುಪಿ:ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು: ಬಹುಮಾನ ವಿತರಣೆ ಮತ್ತು ಪ್ರತಿಭಾ ಕಾರ್ಯಕ್ರಮ.

ಉಡುಪಿ:”ಪ್ರತಿಭೆಯೊಂದಿಗೆ ಸೃಜನಶೀಲತೆಯು ಒಳಗೊಂಡಿರ ಬೇಕು.ಇಂದಿನ ಜಾಗತೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ಬದುಕಿನ ಸವಾಲುಗಳನ್ನು ಎದುರಿಸಿ ನಿಲ್ಲಬೇಕಾದರೆ ಅಂಕಗಳೊಂದೆ ಸಾಕಾಗುವುದಿಲ್ಲ ಇದರ ಜೊತೆಗೆ ವ್ಯಕ್ತಿತ್ವದ ಪರಿಪೂರ್ಣತೆಗೆ ಪಠ್ಯೇತರ ಚಟುವಟಿಕೆಗಳು ಕೂಡಾ ಅಷ್ಟೇ ಮುಖ್ಯ. ಶಿಕ್ಷಣದ ಅಂತಿಮ ಗುರಿ ಆತ್ಮದ ಕಣ್ಣನ್ನು ಬೆಳಕಿನೆಡೆ ತಿರುಗಿಸುವುದೇ ನಿಜವಾದ ಶಿಕ್ಷಣ ಇಂತಹ ಪರಿಪೂರ್ಣ ಶಿಕ್ಷಣ ನೀಡುವಲ್ಲಿ ಶ್ರೀ ಪೂಣ೯ ಪ್ರಜ್ಞಾ ಕಾಲೇಜು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ” ಎಂದು ಎಂಜಿಎಂ.ಕಾಲೇಜಿನ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು. ಅವರು ಉಡುಪಿ ಶ್ರೀ ಪೂರ್ಣಪ್ರಜ್ಞಾ […]
ಕಾರ್ಕಳ ಕ್ರೈಸ್ಟ್ ಕಿಂಗ್’ನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ -2025

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ, ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳು, ಕಾರ್ಕಳ ಇವರ ಜಂಟಿ ಸಹಯೋಗದಲ್ಲಿ ಕಾರ್ಕಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ – 2025 ಅದ್ದೂರಿಯಾಗಿ ನಡೆಯಿತು. ಕಾರ್ಕಳ ವಿಧಾನಸಭಾ ಸದಸ್ಯರಾದ ವಿ. ಸುನೀಲ್ ಕುಮಾರ್ ಅವರು ದೀಪ ಬೆಳಗಿ ತೆಂಗಿನ ಹೂ ಅರಳಿಸುವುದರ ಮೂಲಕ ಪ್ರತಿಭಾ ಕಾರಂಜಿಗೆ ವಿದ್ಯುಕ್ತ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಅದಕ್ಕೆ ನೀರೆರೆದು […]
ಮಂಗಳೂರು:“ನಾಲ್ಕು ದಶಕಗಳ ಶೈಕ್ಷಣಿಕ ಸಾರ್ಥಕತೆಗೆ ಸಾಕ್ಷಿಯಾದ 40ನೇ ಎಕ್ಸ್ಪರ್ಟ್ ಡೆ” ಉದ್ಘಾಟನಾ ಸಮಾರಂಭ

ಮಂಗಳೂರು:ಯಶಸ್ಸು ಒಂದು ದಿನದಲ್ಲಿ ಸಿಗುವುದಿಲ್ಲ, ನಿರಂತರಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ಆತ್ಮವಿಶ್ವಾಸ ಇದ್ದರೆ ಗುರಿಯನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ಸಮಯದ ಮೌಲ್ಯವನ್ನುಅರಿತುಕೊಳ್ಳುವುದು ಅತ್ಯಂತ ಮುಖ್ಯವೆಂದು ತಿಳಿಸಿದ ಅವರು ಸಮಯ ಪಾಲನೆ, ಧೈರ್ಯ ಮತ್ತು ಸತತ ಪ್ರಯತ್ನಗಳು ವ್ಯಕ್ತಿತ್ವ ವಿಕಾಸಕ್ಕೆನೆರವಾಗುತ್ತದೆ ಎಂದು ಎಕ್ಸ್ಪರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಖ್ಯಾತ ಮಕ್ಕಳ ವೈದ್ಯೆ ಡಾ. ಅರ್ಪಿತಾ ಎ.ರಂಜನ್ ಸಲಹೆ ನೀಡಿದರು. ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್‌ನ “ 40ನೇ ಎಕ್ಸ್ಪರ್ಟ್ ಡೆ” ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ […]
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಅಗಲಿ ಆರು ವರ್ಷಗಳು ಕಳೆದಿವೆ. ಮಂಗಳವಾರ ಅವರ ಆರಾಧನಾ ಮಹೋತ್ಸವ ನಡೆಯಿತು. ಮೂರು ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಆರಾಧನಾ ಮಹೋತ್ಸವ ಏರ್ಪಾಟ್ ಆಗಿದೆ. ದೆಹಲಿಯಲ್ಲಿ ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ ಜೋಶಿ ಶ್ರೀಗಳ ಆರಾಧನೆಯಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ. ಇದೆ ವೇಳೆ ಉಡುಪಿಯ ಮಠದಲ್ಲೂ ಆರಾಧನಾ ಮಹೋತ್ಸವ ನಡೆಸಲಾಯಿತು. ವಿವಿಧ ಗಣ್ಯರು ವಿದ್ವಾಂಸರು ಮದ್ಯಾರಾಧನೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ […]
ಕ್ರಿಸ್ಮಸ್ ಗೆ “ಡ್ರಿಪ್ಸ್ ಬೇಕರಿ ಅಂಡ್ ಕೆಫೆ”ಯಲ್ಲಿದೆ ಅದ್ಭುತ ರುಚಿಕರವಾದ ಕೇಕ್; ಒಮ್ಮೆ ರುಚಿ ನೋಡಿ!

ಉಡುಪಿ: ಕೇಕ್ ಅಂತಂದ್ರೆ ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಅದ್ರಲ್ಲೂ ನಿಮ್ಮದೇ ಊರಲ್ಲಿ ಆಗ ತಾನೇ ಮಾಡಿದ ಫ್ರೆಶ್ ಕೇಕ್, ನಿಮ್ಮನೆ ಬಾಗಿಲಿಗೇ ಬರೋದಾದ್ರೆ ಬೇಡ ಅನ್ನೋರು ಯಾರಿದಾರೆ. ಉಡುಪಿ, ಮಣಿಪಾಲ ಹಾಗೂ ಮಲ್ಪೆಯಲ್ಲಿ ವಿಧ ವಿಧದ, ನಿಮ್ಮಿಷ್ಟದ ಡಿಸೈನ್ ಗಳ ಕೇಕ್ ಗಳನ್ನು ನೀಡಲು, ಮನೆ ಬಾಗಿಲಿಗೆ ತಲುಪಿಸಲು ಸದಾ ಸಿದ್ಧವಾಗಿದೆ “ಡ್ರಿಪ್ಸ್ ಬೇಕರಿ ಅಂಡ್ ಕೆಫೆ” (drips bakery and cafe). ಕ್ರಿಸ್ಮಸ್ ಟೈಮ್ ಅಂದ್ರಂತೂ ಕೇಕ್ ಗಳ ಹಬ್ಬ. ಬಗೆ ಬಗೆಯ […]