ಲೋಕಾಯುಕ್ತ ದಾಳಿ: ಸಹಕಾರಿ ಸಂಘದ ಸಿಇಒ ಆಸ್ತಿ ಮೌಲ್ಯವೇ ₹9.89 ಕೋಟಿ!

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿವಿಧ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ₹19.20 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ಈ ಪೈಕಿ ಸಹಕಾರಿ ಸಂಘವೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಆಸ್ತಿಯ ಮೌಲ್ಯವೇ ₹9.89 ಕೋಟಿಯಷ್ಟಾಗುತ್ತದೆ. ವಿವಿಧ ಇಲಾಖೆಗಳ ನಾಲ್ವರು ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರು ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಮತ್ತು ರಾಯಚೂರು ಜಿಲ್ಲೆಯ 17 ಸ್ಥಳಗಳಲ್ಲಿ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದರು. […]
ಅಯೋಧ್ಯೆಗೆ ₹ 2.5 ಕೋಟಿ ಮೌಲ್ಯದ ರಾಮನ ಮೂರ್ತಿ ನೀಡಿದ ಬೆಂಗಳೂರು ಮೂಲದ ರಾಮಭಕ್ತೆ

ಬೆಂಗಳೂರು: ಚಿನ್ನದ ಕುಸುರಿ, ಅಮೂಲ್ಯ ರತ್ನ ಹಾಗೂ ಹರಳುಗಳನ್ನು ಬಳಸಿ ತಯಾರಿಸಿದ 800 ಕೆ.ಜಿ ತೂಕದ, ₹2.5 ಕೋಟಿ ಬೆಲೆ ಬಾಳುವ ಸಾಂಪ್ರದಾಯಿಕ ತಂಜಾವೂರು ಶೈಲಿಯಲ್ಲಿರುವ ಶ್ರೀರಾಮನ ಕಲಾಕೃತಿಯನ್ನು ಅಂಚೆ ಇಲಾಖೆ ಲಾಜಿಸ್ಟಿಕ್ಸ್ ಮೂಲಕ ಬೆಂಗಳೂರಿನಿಂದ ಅಯೋಧ್ಯೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.ಈ ಕಲಾಕೃತಿಯನ್ನು ಬೆಂಗಳೂರಿನ ಜಯಶ್ರೀ ಫಣೀಶ್ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ. ಈ ಕಲಾಕೃತಿ 12 ಅಡಿ ಅಗಲ ಮತ್ತು 8 ಅಡಿ ಎತ್ತರವಿದೆ. […]
ಮಣಿಪಾಲ: ರಿಸೆಪ್ಷನಿಷ್ಟ್ ಹುದ್ದೆಗೆ ನೇಮಕಾತಿ

ಉಡುಪಿ:ಮಣಿಪಾಲದಲ್ಲಿ ರಿಸೆಪ್ಷನಿಷ್ಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಮಾಹಿತಿಗಾಗಿ ಸಂಪರ್ಕಿಸಿ: +91 8618629503
ಚಳಿ ಚಳಿ ತಾಳೆನು ಈ ಚಳಿಯಾ ಎಂದು ಸುಮ್ಮನೆ ಕೂತ್ಕೊಬೇಡಿ, ಚಳಿಗೆ ಈ ಆರೋಗ್ಯಕರ ಹಣ್ಣುಗಳನ್ನು ತಿನ್ನಿ!

ಬೆಂಗಳೂರು: ಮಾನವನ ದೇಹದ ಪ್ರಮುಖ ಅಂಗವಾದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ. ನಾವು ಸೇವಿಸುವ ಆಹಾರ ಪದಾರ್ಥಗಳು ಅನುಸರಿಸುವ ಜೀವನಶೈಲಿ ಮತ್ತು ದೈನಂದಿನ ದೈಹಿಕ ಚಟುವಟಿಕೆಗಳು ಶ್ವಾಸಕೋಶದ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತವೆ. ಉಸಿರಾಟಕ್ಕೆ ಸಂಬಂಧಿಸಿದ ಯೋಗಾಸನಗಳನ್ನು ಪ್ರತಿದಿನ ಅಭ್ಯಾಸ ಮಾಡಿದರೆ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ. ಜೊತೆಗೆ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಆಹಾರ ಕ್ರಮವನ್ನು ಅನುಸರಿಸುವುದು ಸಹ ಬಹಳ ಮುಖ್ಯ. ಚಳಿಗಾಲದಲ್ಲಿ ಶೀತ, ಕೆಮ್ಮು, ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಇಂತಹ ಸಂದರ್ಭದಲ್ಲಿ […]
ಕಾರಂತರ ಕಾದಂಬರಿಗಳು ವರ್ತಮಾನದ ತಲ್ಲಣ ಎದುರಿಸುವ ಅಸ್ತ್ರ- ಚಿಂತಕ ಕೆ.ಪಿ.ಸುರೇಶ್ ಕಂಜರ್ಪಣೆ

ಉಡುಪಿ: ಈ ದೇಶದ ಎಲ್ಲ ಜ್ವಲಂತ ಸಮಸ್ಯೆಗಳ ಹೋರಾಟಗಳಲ್ಲಿ ಬಹಳ ಸ್ಪೂರ್ತಿಯ ನೆಲೆಯಾಗಿ ಬಹಳ ನೇರವಾಗಿ ಇದ್ದವರು ಶಿವರಾಮ ಕಾರಂತರು. ಅವರು 10 ವಿಶ್ವವಿದ್ಯಾನಿಲಯ ಮಾಡುವ ಕೆಲಸವನ್ನು ಹಾಗೂ 10 ಸಂಘಟನೆಗಳು ಮಾಡುವ ಗ್ರಾಮೀಣಾಭಿವೃದ್ಧಿ ಬೇಕಾದ ಕೆಲಸವನ್ನು ಕಾರಂತರು ಒಬ್ಬರೇ ಮಾಡಿದ್ದಾರೆ. ನಾಗರಿಕತೆ ಬೆಳೆಯಲು ಬೇಕಾದ ಶಿಕ್ಷಣ, ಸಾಹಿತ್ಯ, ಕಲೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಕಾರಂತರು ಬೌದ್ಧಿಕವಾಗಿ ಮಾಡಿದ್ದಾರೆ ಎಂದು ಚಿಂತಕ ಕೆ.ಪಿ.ಸುರೇಶ್ ಕಂಜರ್ಪಣೆ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ.ಶಿವರಾಮ ಕಾರಂತ […]