ಉಡುಪಿ:ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ: ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ (ಕೋಟ್ಪಾ) ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ತಂಬಾಕು ನಿಯಂತ್ರಣ ತನಿಖಾ ದಳವು ಅನಿರೀಕ್ಷಿತ ದಾಳಿ ನಡೆಸಿ, ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಪಡೆಯದೇ ಇರುವ ಅಂಗಡಿ-ಮುಂಗಟ್ಟುಗಳ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲು ಸೂಕ್ತ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೋಟ್ಪಾ-2003 ಕಾಯಿದೆಯ […]
ಕೊರಗ ಸಮುದಾಯ ಅಹೋರಾತ್ರಿ ಧರಣಿ ಸ್ಥಳಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂಭಾಗದಲ್ಲಿ ಕಳೆದ 6 ದಿನಗಳಿಂದ ಕೊರಗ ಸಮುದಾಯದ ಯುವ ಜನರಿಗೆ ಸರಕಾರಿ ಉದ್ಯೋಗ ನೇರ ನೇಮಕಾತಿ ಒತ್ತಾಯಿಸಿ ಕೊರಗ ಸಮುದಾಯದ ವತಿಯಿಂದ ನಡೆಯುತ್ತಿರುವ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಮನವಿ ಸ್ವೀಕರಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಜಿಲ್ಲೆಯ ಮೂಲ ನಿವಾಸಿಗಳಾಗಿ ಗುರುತಿಸಿ ಕೊಂಡಿರುವ ಕೊರಗ ಸಮುದಾಯ ಅತ್ಯಂತ ಅತೀ ಹಿಂದುಳಿದ […]
ಯೋಗಗುರು ರಾಜೇಂದ್ರ ಎಂಕಮೂಲೆಯವರಿಗೆ ಅಂತಾರಾಷ್ಟ್ರೀಯ ಪುರಸ್ಕಾರ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಯೋಗಗುರು ರಾಜೇಂದ್ರ ಎಂಕಮೂಲೆಯವರಿಗೆ ಅಂತಾರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿದರು.ರಾಜೇಂದ್ರ ಎಂಕಮೂಲೆ ಅವರು ಆಸ್ಟ್ರೇಲಿಯಾ ಪುತ್ತಿಗೆ ಮಠದಲ್ಲಿ ಸಹಕಾರ ನೀಡುತ್ತಿದ್ದು, ನಿರಂತರವಾಗಿ ಯೋಗ ತರಗತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ದೇವರಲ್ಲಿ ಪ್ರಾರ್ಥಿಸಿ ಶುಭಸಂದೇಶ ನೀಡಿದರು.
ಹುಬ್ಬಳ್ಳಿ: ಶೀರೂರು ಪರ್ಯಾಯದ ಪೂರ್ವಭಾವೀ ಸಮಾಲೋಚನಾ ಸಭೆ

ಉಡುಪಿ: ಹುಬ್ಬಳ್ಳಿಯ ಬಂಟರ ಭವನದಲ್ಲಿ ಶೀರೂರು ಪರ್ಯಾಯದ ಪೂರ್ವಭಾವೀ ಸಮಾಲೋಚನಾ ಸಭೆ ನಡೆಯಿತು. ಬೆಳಗಾವಿ ಬಂಟರ ಭವನದ ಅಧ್ಯಕ್ಷ ಶ್ರೀ ವಿಜಯಾನಂದ ಶೆಟ್ಟಿ ಮಾತನಾಡಿ ಶೀರೂರು ಪರ್ಯಾಯ ನಮ್ಮ ಪರ್ಯಾಯ ಎಂಬ ಧ್ಯೇಯದಿಂದ ಬೆಳಗಾವಿಯ ಎಲ್ಲ ಭಕ್ತರನ್ನೂ ಒಗ್ಗೂಡಿಸಿ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಬಂಟರ ಸಂಘದ ಮಹೇಶ್ ಶೆಟ್ಟಿ, ಸುಗ್ಗಿ ಸುಧಾಕರ್ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ, ಹರಿ ಓಂ ಸುಧಾಕರ್ ಶೆಟ್ಟಿ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು. ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ […]
ಉಡುಪಿ:ನಾಳೆ ಶೀರೂರು ಮಠ ಪರ್ಯಾಯ ಆಮಂತ್ರಣಾ ಪತ್ರಿಕೆ ಬಿಡುಗಡೆ

ಉಡುಪಿ: ಶ್ರೀ ಶೀರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಆಮಂತ್ರಣಾ ಪತ್ರಿಕೆ ವಿತರಣೆಯ ಮಹಾ ಅಭಿಯಾನಕ್ಕೆ ಚಾಲನೆ, ನಾಳೆ, ಡಿ.21 ರಂದು ಬೆಳಗ್ಗೆ 7.30 ಕ್ಕೆ ಉಡುಪಿ ರಥಬೀದಿಯ ಕನಕ ಗೋಪುರದ ಬಳಿ ನಡೆಯಲಿದೆ. ಆಮಂತ್ರಣ ಪತ್ರದ ಬಿಡುಗಡೆಯನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ನಡೆಸಲಿದ್ದು, ಶ್ರೀಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ, ಸಂಚಾಲಕರುಗಳು, ಸಮಿತಿಯ ವಿವಿಧ ಜವಾಬ್ದಾರಿಯ ಪದಾಧಿಕಾರಿಗಳು ಉಪಸ್ಥಿತರಿರುವರು. ಶ್ರೀ ಮಠದ ಭಕ್ತಾಭಿಮಾನಿಗಳು, ಉಡುಪಿಯ ಎಲ್ಲ ಕ್ರಷ್ಣ ಭಕ್ತರು ಈ […]