ಉಡುಪಿ: ಶ್ರೀ ಶೀರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಆಮಂತ್ರಣಾ ಪತ್ರಿಕೆ ವಿತರಣೆಯ ಮಹಾ ಅಭಿಯಾನಕ್ಕೆ ಚಾಲನೆ, ನಾಳೆ, ಡಿ.21 ರಂದು ಬೆಳಗ್ಗೆ 7.30 ಕ್ಕೆ ಉಡುಪಿ ರಥಬೀದಿಯ ಕನಕ ಗೋಪುರದ ಬಳಿ ನಡೆಯಲಿದೆ.
ಆಮಂತ್ರಣ ಪತ್ರದ ಬಿಡುಗಡೆಯನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ನಡೆಸಲಿದ್ದು, ಶ್ರೀಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ, ಸಂಚಾಲಕರುಗಳು, ಸಮಿತಿಯ ವಿವಿಧ ಜವಾಬ್ದಾರಿಯ ಪದಾಧಿಕಾರಿಗಳು ಉಪಸ್ಥಿತರಿರುವರು.
ಶ್ರೀ ಮಠದ ಭಕ್ತಾಭಿಮಾನಿಗಳು, ಉಡುಪಿಯ ಎಲ್ಲ ಕ್ರಷ್ಣ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರಷ್ಣಾನುಗ್ರಹ ಪಡೆಯಬೇಕು, ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಆಮಂತ್ರಣ ಪತ್ರಿಕೆ ಮನೆ ಮನೆಗೆ ಹಂಚುವ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕೆಂದು ಶ್ರೀ ಮಠದ ವತಿಯಿಂದ ಕೇಳಿಕೊಳ್ಳಲಾಗಿದೆ.

















