ಕಾರ್ಕಳ: ಸ್ವರ್ಣಪ್ರಕಾಶ್ ಜ್ಯುವೆಲರ್ಸ್ ದೀಪಾವಳಿ ಹಬ್ಬದ ಲಕ್ಕಿ ಡ್ರಾ ಫಲಿತಾಂಶ

ಕಾರ್ಕಳ: ಜೋಡುರಸ್ತೆಯಲ್ಲಿರುವ ಸ್ವರ್ಣಪ್ರಕಾಶ್ ಜ್ಯುವೆಲರ್ಸ್ ನವರು ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಲುವಾಗಿ ಲಕ್ಕಿ ಕೂಪನ್ ನಿಡಿದ್ದು, ಡ್ರಾ ಸಮಾರಂಭವು ಡಿಸೆಂಬರ್ 7ರಂದು ಜ್ಯುವೆಲರ್ಸ್ ಜರಗಿತು. ಸಮಾರಂಭದಲ್ಲಿ ಪ್ರಕಾಶ್ ಆಚಾರ್ಯ, ಶ್ರೀಮತಿ ಸ್ವಾತಿ ಪ್ರಕಾಶ್ ಆಚಾರ್ಯ, ಸೇವೆಂತ್ ಹೆವನ್ ಕೇಕ್ ಶಾಪ್ ಮಾಲಕ ಚರಣ್ ರೈ, ಸನ್ನಿ ಲೋಬೊ , ಶ್ರೀಮತಿ ಶ್ರುತಿ ಶೆಟ್ಟಿ ಇಂಜಿನಿಯರ್ ರೋಹನ್ ಆಚಾರ್ಯ ಡ್ರಾ ನೆರವೇರಿಸಿದರು. ಪ್ರಥಮ ರೂಪಾಯಿ 1 ಲಕ್ಷದ ಗಿಫ್ಟ್ ವೊಚೆರ್ ಕಾರ್ಕಳದ ನವ್ಯ, ದ್ವಿತೀಯ 75 ಸಾವಿರ […]

ಮೂಡ್ಲಕಟ್ಟೆ: ‘ಅವೇಕೆನ್ ದಿ ಸೂಪರ್ ಹೀರೋ ಇನ್ ಯು’ ಕಾರ್ಯಗಾರ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಡಿ.5 ರಂದು’ಅವೇಕೆನ್ ದಿ ಸೂಪರ್ ಹೀರೋ ಇನ್ ಯು ‘ ಎಂಬ ವಿಷಯದ ಬಗ್ಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ರಮಣಿ ವೆಂಕಟ್, ಸೇಲ್ಸ್ ಸ್ಟ್ರೈಟೆಜಿಕ್ ಕನ್ಸಲ್ಟೆಂಟ್ ಅಂಡ್ ಮೆಂಟರ್ ಟು ಸ್ಟಾರ್ಟ್ ಅಪ್ ಆಗಮಿಸಿ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಒಬ್ಬೊಬ್ಬ ಸೂಪರ್ ಹೀರೋ ಇರುತ್ತಾನೆ. ಆದರೆ ಅದು ವಿದ್ಯಾರ್ಥಿಗಳಿಗೆ ತಿಳಿಯದೆ ನಾವು ಯಾರಿಗೂ ಸಮರಲ್ಲ ಎಂಬ ಋಣಾತ್ಮಕ ಆಲೋಚನೆಯಲ್ಲಿ ವಿದ್ಯಾರ್ಥಿಗಳು ಇರುತ್ತಾರೆ. […]

ಕಾಂಗ್ರೆಸ್ ಸರಕಾರ ಗೋಕಳ್ಳರಿಗೆ ರಿಯಾಯಿತಿ ನೀಡಲು ಮುಂದಾಗಿದೆ- ಸುನಿಲ್ ಕೆ.ಆರ್.

ಉಡುಪಿ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಅನ್ನು ಸಡಿಲಗೊಳಿಸಲು ತಿದ್ದುಪಡಿ ತರಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಉಡುಪಿ ಜಟ್ಕಾ ಬಸ್ ನಿಲ್ದಾಣದ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮತ್ತು‌ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿದರು. ಸರಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ದಿಕ್ಕಾರ ಕೂಗಿದರು. ವಿಎಚ್ ಪಿ […]

ಉಡುಪಿ: ಸಮಾನ ಮನಸ್ಕ ತಂಡದಿಂದ 35ನೇ ಮನೆ ಹಸ್ತಾಂತರ

ಉಡುಪಿ: ಆಧಾರಸ್ಥಂಬ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಸಣ್ಣ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಮೂಡುಬೆಳ್ಳೆಯ ನೆಲ್ಲಿಕಟ್ಟೆಯ ನಿವಾಸಿ ಸುಗಂಧಿ ಅವರಿಗೆ ಸಮಾಜ ಸೇವಕ ಕಟಪಾಡಿ ಶಶಿಧರ ಪುರೋಹಿತ್ ನೇತೃತ್ವದಲ್ಲಿ “ಸಮಾನ ಮನಸ್ಕರ ತಂಡ ಉಡುಪಿ” ಇವರು ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಲಾಯಿತು. ಮನೆಯ ಕೀಲಿ ಕೈ ಹಸ್ತಾಂತರಿಸಿ ಮಾತನಾಡಿದ ಸಮಾಜ ಸೇವಕ ಕಟಪಾಡಿ ಶಶಿಧರ ಪುರೋಹಿತ್ ಅವರು, ಸಮಾಜದಲ್ಲಿರುವ ಕಡುಬಡತನದ ಕುಟುಂಬವನ್ನು ಗುರುತಿಸಿ ಅವರಿಗೆ ಮನೆಯನ್ನು ನಿರ್ಮಿಸಿಕೊಡುವ ಕಾರ್ಯವನ್ನು ಸಮಾನ ಮನಸ್ಕರ ತಂಡ ಮಾಡಿಕೊಂಡು ಬರುತ್ತಿದೆ. ಕಳೆದ […]

ಭರದಿಂದ ಸಾಗುತ್ತಿರುವ “ವಾದಿರಾಜ ವಾಲಗ ಮಂಡಳಿ” ಸಿನಿಮಾದ ಚಿತ್ರೀಕರಣ

ಉಡುಪಿ: ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಿಸಲಾಗುತ್ತಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಪ್ರೊಡಕ್ಷನ್‌ನ ಅಧ್ಯಕ್ಷ, ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ಬ್ರಹ್ಮಾವರ ತೆಂಕುಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 300 ವರ್ಷಗಳ ಇತಿಹಾಸವುಳ್ಳ ಬ್ರಹ್ಮಾವರ ತೆಂಕುಮನೆಯಲ್ಲಿ ಮುಂದಿನ 15 ದಿನಗಳ ಚಿತ್ರೀಕರಣ ನಡೆಯಲಿದ್ದು, ಆ ಬಳಿಕ ಮಂಗಳೂರು ಅದ್ಯಪಾಡಿ, ಮಂಜೇಶ್ವರದಲ್ಲಿ ಚಿತ್ರೀಕರಿಸಲಾಗುತ್ತದೆ. 50 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿ ಮೇ […]