ಉಡುಪಿ:ಶಿಷ್ಯವೇತನ :ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳಿಂದ ಶಿಷ್ಯವೇತನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ಮೊಬೈಲ್ / ವೀಡಿಯೋ ಚಿತ್ರೀಕರಿಸಿ, ಪೆನ್‌ಡ್ರೆöÊವ್‌ನಲ್ಲಿಅಳವಡಿಸಿ, ಪೆನ್‌ಡ್ರೈವ್‌ನೊಂದಿಗೆ ಅರ್ಜಿಯನ್ನು ರಿಜಿಸ್ಟಾçರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಜೆ.ಸಿ ರಸ್ತೆ, […]

ಉಡುಪಿ:ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ : ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನಿಗಮದ ಯೋಜನೆಗಳಾದ ಉದ್ಯೋಗಿನಿ ಯೋಜನೆ ಹಾಗೂ ಚೇತನಾ ಯೋಜನೆಗಳಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಹಾಗೂ ಧನಶ್ರೀ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಗಳಡಿ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಅರ್ಜಿಗಳನ್ನು ನಿಗದಿಪಡಿಸಿದ ಅವಧಿಯೊಳಗೆ, ಅಗತ್ಯ ದಾಖಲಾತಿಗಳೊಂದಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಇವರಿಗೆ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು […]

ಮಂಗಳೂರು: ಯುವಕ ನಾಪತ್ತೆ

ಮಂಗಳೂರು: ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರ ನೀಡಿ ಬರುತ್ತೇನೆಂದು ಹೇಳಿ ಮನೆಯಿಂದ ತನ್ನ ತಾಯಿಯ ಕಾರಿನಲ್ಲಿ ಹೊರಟು ಬಂದಿದ್ದ ರಕ್ಷಣ್ ಜೆ.ಕೆ. (32) ಎಂಬವರು ಡಿ.6ರಿಂದ ಕಾಣೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರು ಅಂದು ರಾತ್ರಿ 10:30ಕ್ಕೆ ನಗರದ ಟೌನ್‌ಹಾಲ್ ಬಳಿ ಪತ್ತೆಯಾಗಿದೆ. ಸುಮಾರು 5.8 ಅಡಿ ಎತ್ತರದ, ಸಧೃಡ ಶರೀರದ, ಗೋಧಿ ಮೈ ಬಣ್ಣದ ರಕ್ಷಣ್ ಕಾಣೆಯಾದ ದಿನ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಕಪ್ಪುಬಣ್ಣದ […]

ಕುಂದಾಪುರ:ಮಹಿಳೆ ನಾಪತ್ತೆ

ಕುಂದಾಪುರ: ಇಲ್ಲಿನ ಹೊದ್ರೋಳಿಯ ದಿಣ ಸಂಜೀವ ಪೂಜಾರಿ ಅವರ ಪುತ್ರಿ ರೇಷ್ಮಾ (25) ಅವರು ಕೋಟೇಶ್ವರ ಕೊಡಿ ಹಬ್ಬಕ್ಕೆಂದು ಹೋದವರು ಕಾಣೆಯಾಗಿದ್ದಾರೆ. ಅವರು ಪತಿ ಮನೆ ತರಿಕೆರೆ ತಾಲೂಕಿನ ಎರಂಗಾಪುರ ಗ್ರಾಮದಿಂದ ಪತಿಯ ಜತೆ ಆಗಮಿಸಿದ್ದರು. ಡಿ. 6ರಂದು ಜಾತ್ರೆಗೆ ಹೋದವರು ಕುಂದಾಪುರ ಶಾಸ್ತ್ರಿ ಸರ್ಕಲ್ ವರೆಗೆ ಬಂದಿದ್ದು ಬಳಿಕ ಕಾಣೆಯಾಗಿದ್ದಾರೆ. 5.4 ಅಡಿ ಎತ್ತರದ ಅವರು ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕಾಣೆಯಾಗುವಾಗ ನೇರಳೆ ಬಣ್ಣದ ಸ್ಟೀವ್‌ಲೆಸ್ ಟಾಪ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, […]

ಉಡುಪಿ:ರೆಡ್ ಕ್ರಾಸ್ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ: ಪ್ರಥಮ ಚಿಕಿತ್ಸೆ ಮತ್ತು ಪ್ರಕೃತಿ ವಿಕೋಪದ ಕುರಿತಾದ ತರಬೇತಿಯ ಮೂಲಕ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಮಾಜಮುಖಿಯಾಗಲು ಉತ್ತಮ ಅವಕಾಶ. ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಸರಕಾರವುಕಡ್ಡಾಯಗೊಳಿಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ರಾಜ್ಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಅಜ್ಜರಕಾಡು ಜಿಲ್ಲಾ ರೆಡ್‌ಕ್ರಾಸ್ ಸಭಾಂಗಣದಲ್ಲಿ, ಭಾರತೀಯ ರೆಡ್‌ಕ್ರಾಸ್ ರಾಜ್ಯ ಘಟಕ ಮತ್ತು ಉಡುಪಿ ಜಿಲ್ಲಾ ಘಟಕಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಯುವರೆಡ್ ಕ್ರಾಸ್ ಘಟಕ ವತಿಯಿಂದ ರೆಡ್‌ಕ್ರಾಸ್ ಅಧಿಕಾರಿಗಳು ಮತ್ತು ಸ್ವಯಂಸೇವಕರಿಗೆ […]