ಕಾರ್ಕಳದಲ್ಲಿ ಆಳ್ವಾಸ್ ನುಡಿಸಿರಿ–ವಿರಾಸತ್ ಅದ್ಧೂರಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ, ಸಾವಿರಾರು ಜನರನ್ನು ರಂಜಿಸಿದ ಸಾಂಸ್ಕೃತಿಕ ವೈವಿಧ್ಯ

ಕಾರ್ಕಳ: ಎಲ್ಲಾ ರಂಗದಲ್ಲಿ ಮೋಹನ ಆಳ್ವರಿಗೆ ಸರಿಸಮರಾದ  ವ್ಯಕ್ತಿಯಿಲ್ಲ.ಜನರಿಗೆ ಹತ್ತಿರಾಗಿರುವಂತಹ ಜೀವ ಅವರದ್ದು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರಷ್ಟು ಮಾದರಿಯಾದ ವ್ಯಕ್ತಿತ್ವ ಎಲ್ಲಿಯೂ ಇಲ್ಲ ಎಂದು ಖ್ಯಾತ ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಹೇಳಿದರು. ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಶನಿವಾರ ಆಯೋಜಿಸಿದ ಕಾರ್ಕಳದಲ್ಲಿ ಆಳ್ವಾಸ್ ನುಡಿಸಿರಿ–ವಿರಾಸತ್ ಅದ್ಧೂರಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೋಹನ ಆಳ್ವರು, ನಷ್ಟವಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಲ್ಲಿಸಲಿಲ್ಲ‌.ಇದು ಅವರ ಬದ್ದತೆಯನ್ನು ತೋರಿಸುತ್ತದೆ ಎಂದರು. ಆಳ್ವಾಸ್ ಸಂಸ್ಥೆ […]

ಉಡುಪಿ: ಡಿ.2ರಂದು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಆಯೋಜನೆಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಸಹಕಾರದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಡಿ. 2 ರಂದು ಬೆಳಿಗ್ಗೆ 10.30ಕ್ಕೆ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ. ಈ ಬಗ್ಗೆ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ 100 […]

ಉಡುಪಿ: ನಗರದ ಪ್ರಮುಖ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಕಾರ್ಯಾರಂಭ: ಎಸ್ಪಿ ಹರಿರಾಮ್ ಶಂಕರ್ ಪರಿಶೀಲನೆ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠವನ್ನು ಸಂಪರ್ಕ ಮಾಡುವ ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಕಿರಿಕಿರಿ ಮಿತಿಮೀರಿದೆ. ಉಡುಪಿಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ರೋಡ್ ಬ್ಲಾಕ್ ಸಾಮಾನ್ಯವಾಗಿದೆ. ಉಡುಪಿ ನಗರಕ್ಕೆ ಸಮರ್ಪಕವಾದ ಟ್ರಾಫಿಕ್ ಸಿಗ್ನಲ್ ಇನ್ನು ಕೂಡ ವ್ಯವಸ್ಥೆ ಆಗಿಲ್ಲ. ಜನರ ಬಹುಕಾಲದ ಬೇಡಿಕೆಯನ್ನು ಗಮನಿಸಿ, ಜಿಲ್ಲಾ ಪೊಲೀಸ್ ಇಲಾಖೆಯ ಸಲಹೆ ಪಡೆದು ಇದೀಗ ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಇದರಿಂದ ಕೃಷ್ಣ ಮಠಕ್ಕೆ ಹೋಗುವ ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯ ಸವಾರರಿಗೂ […]

ಕುಂದಾಪುರ: ಬೀಜಾಡಿ, ಕೋಟೇಶ್ವರ, ಕೋಡಿಯವರೆಗಿನ ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೂತಾಯಿ ಮೀನು!

ಉಡುಪಿ: ಉಡುಪಿ ಕುಂದಾಪುರದ ಕೋಡಿಯಿಂದ ಕೋಟೇಶ್ವರದ ಕಿನಾರ, ಹಳುವಳ್ಳಿ, ಬೀಜಾಡಿಯವರೆಗೆ ಬೆಳಗ್ಗೆ ರಾಶಿ- ರಾಶಿ ಬೂತಾಯಿ (ಬೈಗೆ) ಮೀನುಗಳು ಕಡಲ ತೀರಕ್ಕೆ ಬಂದಿದೆ. ಅದನ್ನು ಕೊಂಡೊಯ್ಯಲು ಜನ ಮುಗಿ ಬಿದ್ದ ಪ್ರಸಂಗವೂ ನಡೆಯಿತು.ಬೀಜಾಡಿ, ಕೋಟೇಶ್ವರ, ಕೋಡಿಯವರೆಗಿನ ಕಡಲ ಕಿನಾರೆಯಲ್ಲಿ ಬೆಳಗ್ಗೆ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಏಕ ಕಾಲದಲ್ಲಿ ಬಂದಿದ್ದು, ಅಪಾರ ಪ್ರಮಾಣದ ಮೀನು ದಡಕ್ಕೆ ಬಂದಿದೆ ಅನ್ನುವ ಸುದ್ದಿ ತಿಳಿದು ತೀರದ ಆಸುಪಾಸಿನ ಪರಿಸರದಲ್ಲೆಡೆ ಹಬ್ಬಿದ್ದು ನೂರಾರು ಜನ ಮೀನಿಗಾಗಿ ಮುಗಿಬಿದ್ದರು. ಹತ್ತಾರು ಡಿಸ್ಕೋ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಯಕ್ಷಸಿಂಚನ ತಂಡಕ್ಕೆ ಬಹುಮಾನ

ಬಂಟಕಲ್: ಶ್ರಿ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಯಕ್ಷsಸಿಂಚನ ತಂಡವು ದಿನಾಂಕ 21 ಮತ್ತು 22 ನವೆಂಬರ್2025 ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ನಡೆದ “ಯಕ್ಷೋತ್ಸವ 2025”ರಲ್ಲಿ “ರುಕ್ಮಾಂಗದ ಚರಿತ್ರೆ” ಎಂಬ ಪ್ರಸಂಗಕ್ಕೆ ತೃತೀಯ ಬಹುಮಾನವನ್ನು ಪಡೆದಿದೆ. ವೈಯಕ್ತಿಕ ವಿಭಾಗದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ಮೆಶಿನ್ ಲರ್ನಿಂಗ್ ವಿಭಾಗದ 4 ನೇ ವರ್ಷದ ವಿದ್ಯಾರ್ಥಿನಿಯಾದಸುರಭಿ ಜೋಗಿ ಇವರ ರಾಜವೇಷಕ್ಕೆ ಪ್ರಥಮ ಮತ್ತುತಂಡದ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಯನ್ನುಪಡೆದುಕೊಂಡರು. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ,ಮುಖ್ಯ […]