ಬಂಟಕಲ್: ಶ್ರಿ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ
ಯಕ್ಷsಸಿಂಚನ ತಂಡವು ದಿನಾಂಕ 21 ಮತ್ತು 22 ನವೆಂಬರ್
2025 ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ನಡೆದ “ಯಕ್ಷೋತ್ಸವ 2025”ರಲ್ಲಿ “ರುಕ್ಮಾಂಗದ ಚರಿತ್ರೆ” ಎಂಬ ಪ್ರಸಂಗಕ್ಕೆ ತೃತೀಯ ಬಹುಮಾನವನ್ನು ಪಡೆದಿದೆ.
ವೈಯಕ್ತಿಕ ವಿಭಾಗದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್
ಮೆಶಿನ್ ಲರ್ನಿಂಗ್ ವಿಭಾಗದ 4 ನೇ ವರ್ಷದ ವಿದ್ಯಾರ್ಥಿನಿಯಾದ
ಸುರಭಿ ಜೋಗಿ ಇವರ ರಾಜವೇಷಕ್ಕೆ ಪ್ರಥಮ ಮತ್ತು
ತಂಡದ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಯನ್ನು
ಪಡೆದುಕೊಂಡರು.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ,
ಮುಖ್ಯ ಕಾರ್ಯನಿರ್ವಹಣಾದಿಕಾರಿ ಮತ್ತು ಪ್ರಾಂಶುಪಾಲರು
ಹರ್ಷ ವ್ಯಕ್ತಪಡಿಸಿದ್ದಾರೆ.

















