ಮುಂಬೈ ಥಾಣೆಯಲ್ಲಿ ಬೈಕ್ ಅಪಘಾತ; ಉಡುಪಿಯ ಕಲ್ಮಾಡಿಯ ಯುವಕ ಮೃತ್ಯು.

ಉಡುಪಿ: ಮುಂಬೈ ಥಾಣೆಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಉಡುಪಿಯ ಕಲ್ಮಾಡಿಯ ಯುವಕ ಮೃತಪಟ್ಟಿದ್ದಾರೆ. ಮೃತ‌ ಯುವಕ ಉಡುಪಿಯ ಕಲ್ಮಾಡಿ ಮೂಲದ ಇನಿಶ್ ಲಸ್ರಾದೊ (25) ಎಂದು ಗುರುತಿಸಲಾಗಿದೆ. ಇನಿಶ್ ಕಳೆದ ಮೂರು ವರ್ಷಗಳಿಂದ ಮುಂಬೈ ಥಾಣೆಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲ್ಮಾಡಿ ಚರ್ಚ್‌ನ ಐಸಿವೈಎಂ ಘಟಕದಲ್ಲಿ ಮತ್ತು ವಿವಿಧ ಚರ್ಚ್ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದರು. ಅವರು ತಂದೆ ಅಪೊಲೊ, ತಾಯಿ ಐರೀನ್ ಮತ್ತು ಸಹೋದರಿ ಅಶ್ವಿನಿ ಲಸ್ರಾದೊ ಅವರನ್ನು ಅಗಲಿದ್ದಾರೆ.

ಉಡುಪಿ:ನ. 26 ರ ಮುಖ್ಯ ಮಾರುಕಟ್ಟೆ ಪ್ರಾಂಗಣದ ಸಂತೆ ಸ್ಥಳಾಂತರ

ಉಡುಪಿ: ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಗಳು ನವೆಂಬರ್ 28 ರಂದು ಉಡುಪಿ ನಗರಕ್ಕೆ ಆಗಮಿಸುತ್ತಿರುವ ಹಿನ್ನಲೆ, ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಬೇಕಿದ್ದ ನ.26 ರ ಬುಧವಾರದ ಸಂತೆಯನ್ನು ಸಂತೆಕಟ್ಟೆಯ ಕಲ್ಯಾಣಪುರ ಇಲ್ಲಿಗೆ ಸ್ಥಳಾಂತರಿಸಲಾಗಿದೆ ಮತ್ತು ಆದಿ ಉಡುಪಿ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನ. 26 ರಿಂದ 28 ರ ವರೆಗೆ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ:ಅಧಿಕಾರ ದುರ್ಬಳಕೆ : ಪ್ರಕರಣ ದಾಖಲು

ಉಡುಪಿ: ವಿದೇಶದಿಂದ ಆಮದು ಮಾಡಿಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರನ್ನು ಅಕ್ರಮವಾಗಿ ನೋಂದಣಿ ಮಾಡುವ ಮೂಲಕ ಅಂದಾಜು ಕೋಟಿ ರೂ. ರಸ್ತೆ ತೆರಿಗೆ ಸರಕಾರಕ್ಕೆ ನಷ್ಟ ಮಾಡಿರುವ ಬಗ್ಗೆ ದಿನಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾದ ಹಿನ್ನೆಲೆ, ಸದ್ರಿ ವರದಿಯ ಆಧಾರದ ಮೇಲೆ ಉಡುಪಿ ಲೋಕಾಯುಕ್ತ ಪೊಲೀಸರು ಮಾಹಿತಿಗಳನ್ನು ಕಲೆ ಹಾಕಿ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದು ಉಡುಪಿ ಆರ್.ಟಿ.ಓ ಕಚೇರಿಯಲ್ಲಿ ಸುಮಾರು 2 ಕೋಟಿ ರೂ. ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಕಾರನ್ನು ಅದೇ ಕಂಪನಿಯ ಕಡಿಮೆ ಬೆಲೆಯ ಕಾರಿನ […]

ನೈಜೀರಿಯಾ ಕ್ಯಾಥೋಲಿಕ್ ಶಾಲೆ ಮೇಲೆ ಬಂದೂಕುಧಾರಿಗಳ ದಾಳಿ; 200ಕ್ಕೂ ಹೆಚ್ಚು ಮಕ್ಕಳ ಅಪಹರಣ

ಅಬುಜಾ(ನೈಜೀರಿಯಾ): ನೈಜೀರಿಯಾದ ಕ್ಯಾಥೋಲಿಕ್ ಶಾಲೆಯೊಂದರ ಮೇಲೆ ಶುಕ್ರವಾರ ದಾಳಿ ಮಾಡಿದ ಬಂದೂಕುಧಾರಿಗಳು 200ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎಂದು ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್‌ ತಿಳಿಸಿದೆ. ಅಗ್ವಾರ ಸ್ಥಳೀಯ ಸರ್ಕಾರದ ಪಾಪಿರಿ ಸಮುದಾಯದ ಸೇಂಟ್ ಮೇರಿ ಶಾಲೆಯ ಮೇಲೆ ದಾಳಿ ಮಾಡಿದ ಬಂದೂಕುಧಾರಿಗಳು 215 ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ತಮ್ಮ ಹಿಡಿತದಲ್ಲಿಟ್ಟು ಅಪಹರಿಸಿದ್ದಾರೆ ಎಂದು ಸ್ಥಳಿಯ ಆಡಳಿತದ ವಕ್ತಾರ ಡೇನಿಯಲ್ ಅಟೋರಿ ಹೇಳಿದ್ದಾರೆ. “ನಾನು ಶಾಲೆಗೆ ಭೇಟಿ ನೀಡಿದ ನಂತರ ಮಕ್ಕಳ ಹಳ್ಳಿಗೂ ತೆರಳಿದ್ದೆ. […]

ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ಇನ್ಸ್ಪಿರೆಕ್ಸ್ ಸಮಾರೋಪ ಸಮಾರಂಭ, ಜೈನ್ ಪಿಯು ಕಾಲೇಜ್, ಸಾಣೂರು ಪಿಯು ಕಾಲೇಜಿಗೆ ಪ್ರಶಸ್ತಿ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಂತರ ಕಾಲೇಜು ಫೆಸ್ಟ್ ಇನ್ಸ್ಪಿರೆಕ್ಸ್ ಫೆಸ್ಟ್ ನ ಸಮಾರೋಪ ಸಮಾರಂಭ ನ.21 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಸುನೀಲ್ ಮೆಂಡಿಸ್ ಮಾತನಾಡಿ, ಸೋಲು ಕೊನೆಯಲ್ಲ, ಗೆಲುವು ಶಾಶ್ವತವಲ್ಲ. ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ ಸೋತವನಿಗೆ ಗೆಲ್ಲಬೇಕು ಎಂಬ ಛಲವಿರುತ್ತದೆ. ಹಾಗೆಯೇ ಪ್ರತಿಯೊಬ್ಬರು ಸೋಲಿನ ಭಯವಿಲ್ಲದೆ ಎಲ್ಲಾ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮುಖ್ಯ ಎಂದರು. ಕಾರ್ಯಕ್ರಮದ ಇನ್ನೋರ್ವ […]