ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ಇನ್ಸ್ಪಿರೆಕ್ಸ್ ಸಮಾರೋಪ ಸಮಾರಂಭ, ಜೈನ್ ಪಿಯು ಕಾಲೇಜ್, ಸಾಣೂರು ಪಿಯು ಕಾಲೇಜಿಗೆ ಪ್ರಶಸ್ತಿ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಂತರ ಕಾಲೇಜು ಫೆಸ್ಟ್ ಇನ್ಸ್ಪಿರೆಕ್ಸ್ ಫೆಸ್ಟ್ ನ ಸಮಾರೋಪ ಸಮಾರಂಭ ನ.21 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಸುನೀಲ್ ಮೆಂಡಿಸ್ ಮಾತನಾಡಿ, ಸೋಲು ಕೊನೆಯಲ್ಲ, ಗೆಲುವು ಶಾಶ್ವತವಲ್ಲ. ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ ಸೋತವನಿಗೆ ಗೆಲ್ಲಬೇಕು ಎಂಬ ಛಲವಿರುತ್ತದೆ. ಹಾಗೆಯೇ ಪ್ರತಿಯೊಬ್ಬರು ಸೋಲಿನ ಭಯವಿಲ್ಲದೆ ಎಲ್ಲಾ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮುಖ್ಯ ಎಂದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾದ ರಾಜಾರಾಮ್ ನಾಯಕ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ.ಕೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇನ್ಸ್ಪಿರೆಕ್ಸ್ ಫೆಸ್ಟ್ ನ ಪ್ರಥಮ ಚಾಂಪಿಯನ್ ಶೀಪ್ ಅನ್ನು ಜೈನ್ ಪಿಯು ಕಾಲೇಜು ಮೂಡಬಿದ್ರೆ, ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಸರಕಾರಿ ಪಿಯು ಕಾಲೇಜು ಸಾಣೂರು ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಸೌಮ್ಯ ಎಚ್ ಕೆ, ಸ.ಯೋಜಕರಾದ ಡಾ ಕೆ.ಸಿ ಸುಬ್ರಹ್ಮಣ್ಯ, ಐ.ಕ್ಯೂ.ಎ.ಸಿ ಸಂಚಾಲಕರಾದ ವಿನಯ್ ಎಂಎಸ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಡಾ. ಚಂದ್ರಾವತಿ, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಕಾರ್ಯದರ್ಶಿಗಳಾದ ಕಾರ್ತಿಕ್ ನಾಯಕ್, ಪ್ರಿಯ ರಿಶಾ, ಸೂರಜ್, ವಿಖ್ಯಾತ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಣ್ಯ ನಾಯಕ್ ನಿರೂಪಿಸಿದರು. ಇನ್ಸ್ಪಿರೆಕ್ಸ್ ಸಂಯೋಜಕರಾದ ಮನೋಜ್ ಲೂಯಿಸ್ ಅಂಬ್ರೋಸ್ ವಂದಿಸಿದರು.