ಮುಂಬೈ ಥಾಣೆಯಲ್ಲಿ ಬೈಕ್ ಅಪಘಾತ; ಉಡುಪಿಯ ಕಲ್ಮಾಡಿಯ ಯುವಕ ಮೃತ್ಯು.

ಉಡುಪಿ: ಮುಂಬೈ ಥಾಣೆಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಉಡುಪಿಯ ಕಲ್ಮಾಡಿಯ ಯುವಕ ಮೃತಪಟ್ಟಿದ್ದಾರೆ.

ಮೃತ‌ ಯುವಕ ಉಡುಪಿಯ ಕಲ್ಮಾಡಿ ಮೂಲದ ಇನಿಶ್ ಲಸ್ರಾದೊ (25) ಎಂದು ಗುರುತಿಸಲಾಗಿದೆ.

ಇನಿಶ್ ಕಳೆದ ಮೂರು ವರ್ಷಗಳಿಂದ ಮುಂಬೈ ಥಾಣೆಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲ್ಮಾಡಿ ಚರ್ಚ್‌ನ ಐಸಿವೈಎಂ ಘಟಕದಲ್ಲಿ ಮತ್ತು ವಿವಿಧ ಚರ್ಚ್ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದರು. ಅವರು ತಂದೆ ಅಪೊಲೊ, ತಾಯಿ ಐರೀನ್ ಮತ್ತು ಸಹೋದರಿ ಅಶ್ವಿನಿ ಲಸ್ರಾದೊ ಅವರನ್ನು ಅಗಲಿದ್ದಾರೆ.