ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.: ಉಡುಪಿ ಬಡಗಬೆಟ್ಟು ಸೊಸೈಟಿಗೆ ಸಹಕಾರ ಮಾಣಿಕ್ಯರಾಜ್ಯ ಪ್ರಶಸ್ತಿ

ಉಡುಪಿ:72ನೇ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ಮಟ್ಟದಕಾರ್ಯಕ್ರಮದಲ್ಲಿ ಬಡಗಬೆಟ್ಟು ಸಹಕಾರ ಸಂಘವು ‘ಸಹಕಾರಮಾಣಿಕ್ಯ’ ಪ್ರಶಸ್ತಿಯನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದೆ.ಈ ಗೌರವದ ಭಾಗವಾಗಿ ಸಂಘಕ್ಕೆ ₹10,000 ನಗದು ಬಹುಮಾನಹಾಗೂ 5 ಗ್ರಾಂ ಬಂಗಾರದ ಪದಕ ಪ್ರದಾನ ಮಾಡಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಸಂಘದ ಸೇವೆ, ಉತ್ತಮ ನಿರ್ವಹಣೆಮತ್ತು ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯು ಲಭಿಸಿದ್ದು,ಬಡಗಬೆಟ್ಟು ಸೊಸೈಟಿಯು ಸಹಕಾರ ಮಾಣಿಕ್ಯ ಪ್ರಶಸ್ತಿ ಪಡೆದಉಡುಪಿ ಜಿಲ್ಲೆಯ ಪ್ರಥಮ ಕ್ರೆಡಿಟ್ ಸಹಕಾರ ಸಂಘವಾಗಿರುತ್ತದೆ.ಸಂಘದ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಪ್ರಧಾನವ್ಯವಸ್ಥಾಪಕರಾದ […]

ಮೂಡುಬಿದಿರೆ:ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

ಮೂಡುಬಿದಿರೆ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ಮೂರು ದಿನಗಳ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ 23ನೇ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟ 2025-26 ಸ್ವರಾಜ್ ಮೈದಾನದಲ್ಲಿ ಸೋಮವಾರ ಉದ್ಘಾಟನೆಗೊಂಡಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ರೀಡಾ ವಿಭಾಗದ ಕುಲಸಚಿವ ಡಾ ವಸಂತ ಶೆಟ್ಟಿ ಮಾತನಾಡಿ, ಸಶಕ್ತ ಭಾರತವನ್ನು ಸಶಕ್ತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನಿರ್ಮಾಣವಾಗಬೇಕೆಂದು ನಮ್ಮ ಕುಲಪತಿಗಳಾದ […]

ನ.21ರಂದು ಪೆರ್ಡೂರು ಮೇಳದ ಪ್ರಥಮ ದೇವರ ಸೇವೆ ಆಟ.

ಪೆರ್ಡೂರು: ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯ 41ನೇ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆ ಆಟ ನ.21ರಂದು ಶ್ರೀ ಕ್ಷೇತ್ರದಲ್ಲಿ ಜರಗಲಿದೆ. ಬೆಳಗ್ಗೆ ಗಣಹೋಮ, ರಾತ್ರಿ ಚೌಕಿಯಲ್ಲಿ ಗಣಪತಿ ಪೂಜೆ, ಅನಂತರ ಪ್ರಥಮ ದೇವರ ಸೇವೆ ಆಟ ಅಶ್ವಮೇಧ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಮೇಳದ ವ್ಯವಸ್ಥಾಪಕ ವೈ. ಕರುಣಾಕರ ಶೆಟ್ಟಿ ಅವರು ತಿಳಿಸಿದ್ದಾರೆ.

ಕಾರ್ಕಳ:ನಿಟ್ಟೆ ಎಂಸಿಎ ಪ್ರಾಜೆಕ್ಟ್ ಪ್ರದರ್ಶನ ಉದ್ಘಾಟನೆ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗವು ನ.17 ಸೋಮವಾರದಂದು ‘ಎಂಸಿಎ ಎಕ್ಸ್‌ಪ್ರೊ – 2025’ ಅನ್ನು ಆಯೋಜಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರಾಂಶ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕಿ ಶಿಲ್ಪಾ ರಂಜೀತ್ ಶೆಟ್ಟಿ, ತಮ್ಮ ಉದ್ಘಾಟನಾ ಭಾಷಣದಲ್ಲಿ, ‘ಎಂಸಿಎ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ತಾಂತ್ರಿಕ ಹಾಗೂ ಅತಾಂತ್ರಿಕ ಜ್ಞಾನಕ್ಕೆ ಸಮಾನ ಮಹತ್ವ ನೀಡಬೇಕು. ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ವೃದ್ಧಿಗಾಗಿ ಇಂತಹ ಪ್ರಾಜೆಕ್ಟ್ ಪ್ರದರ್ಶನಗಳು ಬಹುಮುಖ್ಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ […]

ಮಂಗಳೂರು:ರಚನಾ ಕ್ರೈಸ್ತ ವಾಣಿಜ್ಯ ಮಂಡಳಿಗೆ ನೂತನ ಸಮಿತಿ ಆಯ್ಕೆ

ಮಂಗಳೂರು:26 ನೇ ಮಹಾಸಭೆಯು 16.11.25 ರಂದು ನಗರದ ಬೆಂದೂರು ಸಭಾಂಗಣದಲ್ಲಿ ನೆರವೇರಿತು. ಕ್ರೈಸ್ತ ಮುಖಂಡ ಹಾಗೂ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಗೊಂಡರು. ಇತರೆ ಪದಾಧಿಕಾರಿಗಳು: ಉಪಾಧ್ಯಕ್ಷ – ಲೆಸ್ಲಿ ರೇಗೊ, ಕಾರ್ಯದರ್ಶಿ – ಎಲ್ರೊನ್ ರೊಡ್ರಿಗಸ್, ಜತೆ ಕಾರ್ಯದರ್ಶಿ – ಜೇಮ್ಸ್ ಮಾಡ್ತಾ, ಕೋಶಾಧಿಕಾರಿ – ನವೀನ್ ಲೋಬೊ ಹಾಗೂ ಮಾರ್ಸೆಲ್ ಮೊಂತೇರೊ, ರೊನಾಲ್ಡ್ ಗೋಮ್ಸ್, ಜೊಕಿಂ ಸ್ಟ್ಯಾನಿ ಆಲ್ವಾರಿಸ್, ವಿಲಿಯಮ್ ಡಿಸೋಜ, ನೆಲ್ಸನ್ ಮೊಂತೇರೊ ಮತ್ತು ಸುನೀಲ್ […]