ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025 -28ನೇ ಸಾಲಿನ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನ.19ರಂದು ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ ಜರಗಿತು. ಸಂಘದ ಚುನಾವಣಾಧಿಕಾರಿಯೂ ಆಗಿರುವ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಪದಾಧಿಕಾರಿಗಳಿಗೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟ ಚುನಾವಣಾಧಿಕಾರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ […]
ಮಲ್ಪೆ ನಾರಾಯಣಗುರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ದೇವಾಡಿಗ ಮಾರ್ಪಳ್ಳಿ ಹೃದಯಾಘಾತದಿಂದ ನಿಧನ

ಉಡುಪಿ: ಮಲ್ಪೆ ನಾರಾಯಣಗುರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಅಲೆವೂರು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಗಣೇಶ್ ದೇವಾಡಿಗ ಮಾರ್ಪಳ್ಳಿ (51) ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಇಂದು ಎಂದಿನಂತೆ ಶಾಲೆಗೆ ಕರ್ತವ್ಯಕ್ಕೆ ತೆರಳಿದ ಗಣೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಉಡುಪಿಯ ಮಾರ್ಪಳ್ಳಿ ನಿವಾಸಿಯಾಗಿದ್ದ ಇವರು ಸ್ಥಳೀಯ ಗೆಳೆಯರ ಬಳಗ, ಭಜನ ಮಂಡಳಿ ಹಾಗೂ ಗದ್ದಿಗೆ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಹ್ಯಾಕಥಾನ್‌ನಲ್ಲಿ ಪ್ರಥಮ ಬಹುಮಾನ

ಉಡುಪಿ,ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದಜ್ಞಾನೇಶ್ ಪಿ ಪಾಲನ್, ಕೌಶಿಕ್ ಸನಿಲ್ ಮತ್ತು ನಿಕ್ಷಿತ್ ಎಚ್ ಪಾಲನ್ ಇವರ ತಂಡವು 12 ನವೆಂಬರ್ 2025 ರಂದು ಯೆನಪೋಯಇನ್ಸ್ಟಿಟ್ಯೂಟ್ ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ೨೧ನೇ ಕರ್ನಾಟಕ ರಾಜ್ಯಮಟ್ಟದ ಐಎಸ್‌ಟಿಇ ವಿದ್ಯಾರ್ಥಿ ಸಮಾವೇಶ ೨೦೨೫ರ ಅಂಗವಾಗಿಆಯೋಜಿಸಿದ್ದ ೨೪ ಗಂಟೆಗಳ ಹ್ಯಾಕಥಾನ್‌ನಲ್ಲಿ ನಗದುಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಮತ್ತು ಪ್ರಾಂಶುಪಾಲರು ಹೃತ್ಪೂರ್ವಕಅಭಿನಂದನೆಗಳನ್ನು ವ್ಯಕ್ತಪಡಿಸಿರುತ್ತಾರೆ.
ಕಾರ್ಕಳ ಜ್ಞಾನಸುಧಾ: ಮೌಲ್ಯಸುಧಾ- 42ರಲ್ಲಿ ನಾವು ಸಂಬಂಧಗಳನ್ನು ಬೆಸೆಯುವ ಸೂಜಿಗಳಾಗಬೇಕು: ನರೇಂದ್ರ ಕುಮಾರ್ ಕೋಟ

ಗಣಿತನಗರ: ಇದ್ದ ಬದುಕನ್ನು ಬಿದ್ದು ಹೋಗದಂತೆ, ಸಮಸ್ಯೆಯನ್ನು ಒದ್ದು, ಎಲ್ಲವನ್ನೂ ಗೆದ್ದು ಬರಬೇಕು. ಅದೇ ಜೀವನ, ಅದೇ ಸಂಜೀವನ. ವ್ಯಕ್ತಿ ದೃಷ್ಟಿಕೋನದದಲ್ಲಿ ಬದಲಾವಣೆ ತಂದುಕೊಂಡು ಅವಮಾನವನ್ನು ಸವಾಲಾಗಿ ಸ್ವೀಕರಿಸಿ ಸಕರಾತ್ಮಕ ಯೋಚನೆಯ ಹಠ ನಮ್ಮದಾದಾಗ ಗೆಲುವು ಚಟವಾಗಲು ಸಾಧ್ಯ. ಎಂದು ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಕೋಟ ನರೇಂದ್ರ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ […]
ಕಾರ್ಕಳ:ಐಇಇಇ ಕಾನ್ಫರೆನ್ಸ್ ನಲ್ಲಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಗೆದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರು

ಉಡುಪಿ: ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧಕರು, ಭಾರತೀಯ ತಾಂತ್ರಿಕ ಸಂಸ್ಥೆ (IIT) ಧಾರವಾಡವು ನವೆಂಬರ್ 7ರಿಂದ 9, 2025 ರವರೆಗೆ ಆಯೋಜಿಸಿದ್ದ ಪ್ರತಿಷ್ಠಿತ ಐಇಇಇ ಇಂಜಿನಿಯರಿಂಗ್ ಇನ್ಫೊರ್ಮ್ಯಾಟಿಕ್ಸ್ ಸಮ್ಮೇಳನ (ICEI 2025) ದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ಪಡೆದಿದ್ದಾರೆ. “VR-Based Crop Health Visualization and Analysis Using Multispectral Images for Precision Agriculture” ಎಂಬ ಶೀರ್ಷಿಕೆಯ ಅಡಿಯಲ್ಲಿ ನಿಟ್ಟೆಯ ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ […]